ರಾಜಪ್ಪ ಮಾಸ್ತರ್ ಸುಸಂಸ್ಕೃತ ವ್ಯಕ್ತಿಗಳ ರೂಪಿಸುವ ಕಾರ್ಖಾನೆ

KannadaprabhaNewsNetwork |  
Published : Feb 07, 2024, 01:45 AM IST
ಫೋಟೊ:೦೫ಕೆಪಿಸೊರಬ-೦೧ : ಸೊರಬ ಪಟ್ಟಣದಲ್ಲಿ ತಾಲ್ಲೂಕು ಕನ್ನಡ ಸಾಂಸ್ಕöÈತಿಕ ಜಗಲಿ ವತಿಯಿಂದ ೯ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಸಮಾಜ ಚಿಂತಕ ಟಿ. ರಾಜಪ್ಪ ಮಾಸ್ತರ್ ಅವರನ್ನು ಅಭಿನಂದಿಸಲಾಯಿತು. | Kannada Prabha

ಸಾರಾಂಶ

ಶಿಕ್ಷಕ ವೃತ್ತಿ ಮೂಲಕ ಸುಸಂಸ್ಕೃತ ವ್ಯಕ್ತಿಯನ್ನು ರೂಪಿಸುವ ಕಾರ್ಖಾನೆ ಆಗಿರುವ ಸಮಾಜ ಚಿಂತಕ ರಾಜಪ್ಪ ಮಾಸ್ತರ್ ಅವರನ್ನು 9ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಅವರ ಹಿರಿತನ ಮತ್ತು ಸಾಮಾಜಿಕ ಚಳವಳಿಗೆ ಸಂದ ಗೌರವವಾಗಿದೆ. ಸೊರಬ ಪಟ್ಟಣದಲ್ಲಿ ಫೆ.9ರಂದು ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನ ಪ್ರತಿಯೊಬ್ಬರಿಗೂ ಹಬ್ಬವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಸಾಂಸ್ಕೃತಿಕ ಜಗಲಿ ಸದಸ್ಯರು ಇಡೀ ದಿನ ಸಮ್ಮೇಳನದಲ್ಲಿ ಭಾಗವಹಿಸುವ ಮೂಲಕ ರಾಜಪ್ಪ ಮಾಸ್ತರ್ ಅವರ ಸರ್ವಾಧ್ಯಕ್ಷತೆಯ ಕನ್ನಡದ ಜಾತ್ರೆ ಯಶಸ್ವಿಯಾಗಲು ತಾವೆಲ್ಲರೂ ಸಹಕಾರ ನೀಡಬೇಕು ಎಂದು ಕನ್ನಡ ಸಾಂಸ್ಕೃತಿಕ ಜಗಲಿ ಸಂಚಾಲಕ ಎನ್.ಷಣ್ಮುಖಾಚಾರ್ ಸೊರಬದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಸೊರಬ

ಶಿಕ್ಷಕ ವೃತ್ತಿ ಮೂಲಕ ಸುಸಂಸ್ಕೃತ ವ್ಯಕ್ತಿಯನ್ನು ರೂಪಿಸುವ ಕಾರ್ಖಾನೆಯಾಗಿರುವ ಸಮಾಜ ಚಿಂತಕ ರಾಜಪ್ಪ ಮಾಸ್ತರ್ ಅವರನ್ನು 9ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಅವರ ಹಿರಿತನ ಮತ್ತು ಸಾಮಾಜಿಕ ಚಳವಳಿಗೆ ಸಂದ ಗೌರವವಾಗಿದೆ ಎಂದು ಕನ್ನಡ ಸಾಂಸ್ಕೃತಿಕ ಜಗಲಿ ಸಂಚಾಲಕ ಎನ್.ಷಣ್ಮುಖಾಚಾರ್ ಹೇಳಿದರು.

ಭಾನುವಾರ ಪಟ್ಟಣದಲ್ಲಿ ತಾಲೂಕು ಕನ್ನಡ ಸಾಂಸ್ಕೃತಿಕ ಜಗಲಿ ಮತ್ತು ಕನ್ನಡ ಸಾಂಸ್ಕೃತಿಕ ಜಗಲಿ ಮಹಿಳಾ ಘಟಕದ ವತಿಯಿಂದ 9ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ನಿವೃತ್ತ ಶಿಕ್ಷಕ, ಸಮಾಜ ಚಿಂತಕ ಟಿ.ರಾಜಪ್ಪ ಮಾಸ್ತರ್ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸೊರಬ ಪಟ್ಟಣದಲ್ಲಿ ಫೆ.9ರಂದು ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನ ಪ್ರತಿಯೊಬ್ಬರಿಗೂ ಹಬ್ಬವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಸಾಂಸ್ಕೃತಿಕ ಜಗಲಿ ಸದಸ್ಯರು ಇಡೀ ದಿನ ಸಮ್ಮೇಳನದಲ್ಲಿ ಭಾಗವಹಿಸುವ ಮೂಲಕ ರಾಜಪ್ಪ ಮಾಸ್ತರ್ ಅವರ ಸರ್ವಾಧ್ಯಕ್ಷತೆಯ ಕನ್ನಡದ ಜಾತ್ರೆ ಯಶಸ್ವಿಯಾಗಲು ತಾವೆಲ್ಲರೂ ಸಹಕಾರ ನೀಡಬೇಕು ಎಂದು ಕರೆ ನೀಡಿದರು.

ಉದ್ಯಮಿ ಎಂ.ಎನ್. ಗುರುಮೂರ್ತಿ ಅವರು ರಾಜಪ್ಪ ಮಾಸ್ತರ್ ಅವರೊಂದಿಗೆ ಕಳೆದ ದಿನಗಳ ಒಡನಾಟ, ಸಮಾಜಮುಖಿ ಚಟುವಟಿಕೆಗಳ ಕುರಿತು ಮಾತನಾಡಿದರು.

ಶಿಕ್ಷಕ ರಮೇಶ್ ಮಂಚಿ ಅವರು ರಾಜಪ್ಪ ಮಾಸ್ತರ್ ಅವರಿಂದ ಟ್ಯೂಷನ್ ತಗೊಂಡು ಮುಂದಿನ ದಿನಗಳಲ್ಲಿ ಸರ್ಕಾರಿ ಕೆಲಸ ಪಡೆದು ಜೀವನ ಸುಗಮವಾಗಲು ಗುರುಗಳ ಮಾರ್ಗದರ್ಶನದಿಂದ ಸಾಧ್ಯವಾಯಿತು ಎಂದು ಹೇಳಿದರು.

ಕನ್ನಡ ಸಾಂಸ್ಕೃತಿಕ ಜಗಲಿಯ ಮಹಿಳಾ ಸದಸ್ಯೆ ಸರಸ್ವತಿ ನಾವುಡ ಮಾತನಾಡಿ, ಎಲ್ಲರೊಂದಿಗೂ ಗೌರವಯುತವಾಗಿ ನಡೆದುಕೊಳ್ಳುವ ಸರಳ ವ್ಯಕ್ತಿತ್ವ ಹೊಂದಿದ ರಾಜಪ್ಪ ಮಾಸ್ತರ್ ಮತ್ತು ಅವರ ಪತ್ನಿ ಶೇಖರಮ್ಮ ಅವರ ಜೀವನ ಶೈಲಿ ಪ್ರತಿಯೊಬ್ಬರಿಗೂ ಮಾದರಿಯಾಗಿದೆ ಎಂದರು.

ಸಾಹಿತಿ, ಜಗಲಿ ಅಧ್ಯಕ್ಷ ರೇವಣಪ್ಪ ಬಿದರಗೇರೆ, ಆಕಾಶವಾಣಿ ಕಲಾವಿದ, ತಾಲೂಕು ಸುಗಮ ಸಂಗೀತ ಪರಿಷತ್ತು ಅಧ್ಯಕ್ಷ ಎಚ್.ಗುರುಮೂರ್ತಿ, ತಾಲೂಕು ಯುವ ಒಕ್ಕೂಟ ಅಧ್ಯಕ್ಷ ಕೆ.ಲಿಂಗರಾಜಗೌಡ ಕೋಣನಮನೆ, ಉದ್ಯಮಿ ಸುಬ್ರಹ್ಮಣ್ಯ ಗುಡಿಗಾರ್, ಕವಿಯತ್ರಿ ಶೈಲಾ ಹೆಬ್ಬಾರ್, ರೂಪಾ ಮಧುಕೇಶ್ವರ್, ಮಮತಾ ರಾಜೇಶ್, ಭಾರತಿ ಭಂಡಾರಿ, ಸಾನ್ವಿ, ಮೋಹನ್ ಸುರಭಿ, ಮಹಮ್ಮದ್ ಹನೀಫ್ ಮೊದಲಾದವರು ಹಾಜರಿದ್ದರು.

- - - -05ಕೆಪಿಸೊರಬ01:

ಸೊರಬ ಪಟ್ಟಣದಲ್ಲಿ ತಾಲೂಕು ಕನ್ನಡ ಸಾಂಸ್ಕೃತಿಕ ಜಗಲಿ ವತಿಯಿಂದ 9ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಸಮಾಜ ಚಿಂತಕ ಟಿ. ರಾಜಪ್ಪ ಮಾಸ್ತರ್ ಅವರನ್ನು ಅಭಿನಂದಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಂಡ್ಯ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಸ್ವತಂತ್ರ ಸ್ಪರ್ಧೆ - ಸುಮಲತಾ ಪರ ನಾರಾಯಣಗೌಡ ಬ್ಯಾಟಿಂಗ್‌
ಮಂಗಳೂರು ಲಿಟ್‌ಫೆಸ್ಟ್ ಪ್ರಶಸ್ತಿಗೆ ಮೀನಾಕ್ಷಿ ಜೈನ್‌ ಆಯ್ಕೆ