ಸುಪ್ರೀಂ ಮೊರೆ ಹೋದ ರಾಜೇಗೌಡ ಮಂದಿರ,ಮಸೀದಿ, ಚರ್ಚ್ ಗಳಲ್ಲಿ ಪ್ರಾರ್ಥನೆ

KannadaprabhaNewsNetwork |  
Published : May 10, 2026, 01:15 AM IST
ಎರ | Kannada Prabha

ಸಾರಾಂಶ

ಕೊಪ್ಪ: ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಏಣಿಕೆಯಲ್ಲಿ ಬಿಜೆಪಿ ಗೆಲುವು ಸಾದಿಸಿದ ಹಿನ್ನೆಲೆ ಮತಚೋರಿ ಆರೋಪ ಮಾಡಿದ್ದ ಕಾಂಗ್ರೆಸ್‌ ಟಿ.ಡಿ.ರಾಜೇಗೌಡ ಸೇರಿದಂತೆ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ದೇವರ ಮೊರೆ ಹೋಗಿದ್ದಾರೆ.

ಕೊಪ್ಪ: ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಏಣಿಕೆಯಲ್ಲಿ ಬಿಜೆಪಿ ಗೆಲುವು ಸಾದಿಸಿದ ಹಿನ್ನೆಲೆ ಮತಚೋರಿ ಆರೋಪ ಮಾಡಿದ್ದ ಕಾಂಗ್ರೆಸ್‌ ಟಿ.ಡಿ.ರಾಜೇಗೌಡ ಸೇರಿದಂತೆ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ದೇವರ ಮೊರೆ ಹೋಗಿದ್ದಾರೆ.

ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ.ರಾಜೇಗೌಡ ಈಗಾಗಲೇ ಬಿಜೆಪಿ ಗೆಲುವು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದು, ಈ ನಡುವೆ ಶನಿವಾರ ಯಾರೇ ತಪ್ಪು ಮಾಡಿದ್ದರೂ ಅವರಿಗೆ ಶಿಕ್ಷೆಯಾಗಲಿ ಎಂದು ಕಾಂಗ್ರೆಸ್ ಕಾರ್ಯಕರ್ತರು ಕೊಪ್ಪದಲ್ಲಿ ನೆಲೆಸಿರುವ ಕೋಪದ ಶ್ರೀ ವೀರಭದ್ರಸ್ವಾಮಿ ದೇಗುಲದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.

ಮಾಜಿ ಶಾಸಕ ಟಿ.ಡಿ ರಾಜೇಗೌಡ ಮತ್ತು 2023 ಮತ್ತು 2026 ರ ಮೇ 02 ರ ಶನಿವಾರ ಸುಪ್ರಿಂ ಕೋರ್ಟ್ ಆದೇಶದಂತೆ ನಡೆದ ಆಂಚೆ ಮತಗಳ ಮರು ಏಣಿಕೆಯಲ್ಲಿಯು ಟಿ.ಡಿ ರಾಜೇಗೌಡರ ಅಂಚೆಮತಗಳ ಏಜೆಂಟ್ ಮತ್ತು ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ ತಮ್ಮ ಪಕ್ಷದ ಕಾರ್ಯಕರ್ತರ ಜೊತೆಯಲ್ಲಿ ವೀರಭದ್ರ ದೇವಸ್ಥಾನಕ್ಕೆ ಆಗಮಿಸಿ ಪೂಜೆಸಲ್ಲಿಸಿದರು.

ಇಬ್ಬರು ದೇವರ ಸನ್ನಿದಾನದಲ್ಲಿ ತಮ್ಮ ತಮ್ಮ ಮನಸ್ಸಿನಂತೆ ನಿವೇದಿಸಿಕೊಂಡರು. ನಂತರ ಕೈ ಪಡೆಯೊಂದಿಗೆ ಕೊಪ್ಪದ ನಿತ್ಯಧಾರ ಮಾತೆ ದೇವಾಲಯ(ಚರ್ಚ್) ಮತ್ತು ಕೊಪ್ಪ ಪಟ್ಟಣದ ಜಾಮಿಯಾ ಜುಮ್ಮ ಮಸೀದಿಗೆ ತೆರಳಿ ಪ್ರಾರ್ಥನೆ ಮಾಡಿದರು.

ಕಾಂಗ್ರೆಸ್‌ ಮುಖಂಡರಾದ ರವಿಶಂಕರ್, ಕೆ,ಸಿ ವಜ್ರಪ್ಪ, ಎಚ್,ಎಂ,ಸತೀಶ್, ಜಗದೀಶ್ ಸುಂಕುರುಡಿ, ನಾರ್ವೆ ಅಶೋಕ್, ಓಣಿತೋಟ ರತ್ನಕರ್, ಮೈತ್ರಗಣೇಶ್,ಸಿ.ಕೆ.ಮಾಲತಿ, ಜುಬೇದ, ನಾರ್ವೆ ಸಾಧಿಕ್, ರಾಜಾ ಶಂಕರ್ , ರಶೀದ್, ಜೇಸುದಾಸ್, ಸತೀಶ್ ನಾಯ್ಕ, ಕೆ,ಅನಂದ್ ಸೇರಿದಂತೆ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಪ್ರತಿಷ್ಠೆ ಬಿಟ್ಟು ಪಕ್ಷ ಸಂಘಟಿಸಿ: ನಿಖಿಲ್‌ ಕುಮಾರಸ್ವಾಮಿ
ನಂದಿನಿ ಉತ್ಪನ್ನಗಳು ಬಳಸಿದರೆ ರೈತರಿಗೆ ಅನುಕೂಲ