ರಾಜೇಂದ್ರ ಶ್ರೀಗಳ ವಚನಸೌಧ ದಾರಿದೀಪ: ನಿರ್ಮಲ ಬಳ್ಳೊಳ್ಳಿ

KannadaprabhaNewsNetwork |  
Published : Sep 06, 2024, 01:00 AM IST
30ಕೆಕೆಎಲ್3:ಕುಕನೂರು ನಗರದ  ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಭಾಂಗಣದಲ್ಲಿ  ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ತು ಕೊಪ್ಪಳ ತಾಲೂಕ ಮತ್ತು ಜಿಲ್ಲಾ ಘಟಕ ಹಾಗೂ ಕದಳಿ ವೇದಿಕೆ ತಾಲೂಕ ಮತ್ತು ಜಿಲ್ಲಾ ಘಟಕ ಇವುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿತು.  | Kannada Prabha

ಸಾರಾಂಶ

ಲಿಂ. ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು ಕಟ್ಟಿರುವ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಎಂಬ ವಚನ ಸೌಧ ನಮ್ಮೆಲ್ಲರಿಗೆ ದಾರಿ ದೀಪವಾಗಿದೆ.

ಜಿಲ್ಲಾ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ಹೇಳಿಕೆ

ಕನ್ನಡಪ್ರಭ ವಾರ್ತೆ ಕೊಪ್ಪಳ

ಲಿಂ. ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು ಕಟ್ಟಿರುವ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಎಂಬ ವಚನ ಸೌಧ ನಮ್ಮೆಲ್ಲರಿಗೆ ದಾರಿ ದೀಪವಾಗಿದೆ ಎಂದು ಜಿಲ್ಲಾ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷ ನಿರ್ಮಲ ಬಳ್ಳೊಳ್ಳಿ ಹೇಳಿದರು.

ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಭಾಂಗಣದಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ತು ಕೊಪ್ಪಳ ತಾಲೂಕು ಮತ್ತು ಜಿಲ್ಲಾ ಘಟಕ ಹಾಗೂ ಕದಳಿ ವೇದಿಕೆ ತಾಲೂಕು ಮತ್ತು ಜಿಲ್ಲಾ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಜಗದ್ಗುರು ಲಿಂ. ಡಾ. ರಾಜೇಂದ್ರ ಮಹಾಸ್ವಾಮಿಗಳ 109ನೇ ಜಯಂತ್ಯುತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ರೇಣುಕಾ ಸುರುವೆ ಮಾತನಾಡಿ, ಮಕ್ಕಳಿಗಾಗಿ ವಚನ ಸಾಹಿತ್ಯ ಕಾರ್ಯಕ್ರಮ ಹಮ್ಮಿಕೊಂಡಿದ್ದು ಶ್ಲಾಘನೀಯ ಕಾರ್ಯ ಎಂದರು.

ಉಪನ್ಯಾಸ ನೀಡಿದ ಮಕ್ಕಳ ಸಾಹಿತಿ ಶಿಕ್ಷಕ ಶ್ರೀನಿವಾಸ್ ಚಿತ್ರಗಾರ ಮಾತನಾಡಿ, ವಚನ ಸಾಹಿತ್ಯ ಕರ್ನಾಟಕದಲ್ಲಿ ಅತ್ಯಂತ ಶ್ರೇಷ್ಠ. ಜನಮನದಲ್ಲಿ ಶರಣರ ತತ್ವ ಸಿದ್ಧಾಂತಗಳನ್ನು ಪಸರಿಸಿ ಸನ್ಮಾರ್ಗದಲ್ಲಿ ಸಾಗುವಂತೆ ಜ್ಞಾನವನ್ನು ಕೊಡುತ್ತಿರುವ ಶರಣ ಸಾಹಿತ್ಯ ಪರಿಷತ್ ಸಂಸ್ಥಾಪಕ ದೇಶೀ ಕೇಂದ್ರ ಮಹಾಸ್ವಾಮಿಗಳ ಕಾರ್ಯ ಅತ್ಯುತ್ತಮವಾಗಿದೆ ಎಂದರು.

ಹಿರಿಯ ಪತ್ರಕರ್ತ ಎಂ. ಸಾಧಿಕ ಅಲಿ ಮಾತನಾಡಿದರು. ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಚಿನ್ನಪ್ಪ ತಳವಾರ್, ಅಂಚೆ ಇಲಾಖೆಯ ನಿವೃತ್ತ ನೌಕರ ರವಿ ಕಾಂತಣ್ಣವರ್, ಸೌಮ್ಯ ನಾಲ್ವಾಡ, ಸಾವಿತ್ರಿ ಮುಜುಂದಾರ್ ಮಾತನಾಡಿದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಿ.ಎಸ್. ಗೋನಾಳ್ ಅಧ್ಯಕ್ಷತೆ ವಹಿಸಿದ್ದರು.

ವಚನ ವಾಚನ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಾಲೆಯ ಮುಖ್ಯ ಶಿಕ್ಷಕಿ ರೇಣುಕಾ ಸುರುವೆ, ಉಮೇಶ ಸುರುವೆ ದಂಪತಿಯನ್ನು ಸನ್ಮಾನಿಸಲಾಯಿತು.

PREV