ಆಧುನಿಕ ಭಾರತದ ಕನಸು ಕಂಡಿದ್ದ ರಾಜೀವ ಗಾಂಧಿ

KannadaprabhaNewsNetwork | Published : May 22, 2024 12:51 AM

ಸಾರಾಂಶ

ಸದೃಢ, ಆಧುನಿಕ ಭಾರತ ನಿರ್ಮಾಣದ ಕನಸು ಕಂಡು, ಆ ದಿಕ್ಕಿನಲ್ಲಿ ದೇಶವನ್ನು ಮುನ್ನಡೆಸಿದ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆಯ ಅಪರೂಪದ ವ್ಯಕ್ತಿ, ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಅವರ ಕೊಡುಗೆಗಳು ಅನನ್ಯ ಎಂದು ಶಾಸಕ ಎಚ್.ವೈ.ಮೇಟಿ ಶ್ಲಾಘಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಸದೃಢ, ಆಧುನಿಕ ಭಾರತ ನಿರ್ಮಾಣದ ಕನಸು ಕಂಡು, ಆ ದಿಕ್ಕಿನಲ್ಲಿ ದೇಶವನ್ನು ಮುನ್ನಡೆಸಿದ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆಯ ಅಪರೂಪದ ವ್ಯಕ್ತಿ, ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಅವರ ಕೊಡುಗೆಗಳು ಅನನ್ಯ ಎಂದು ಶಾಸಕ ಎಚ್.ವೈ.ಮೇಟಿ ಶ್ಲಾಘಿಸಿದರು.

ಮಾಜಿ ಪ್ರಧಾನಿ ದಿ. ರಾಜೀವ ಗಾಂಧಿಯವರ ಪುಣ್ಯಸ್ಮರಣೆ ಅಂಗವಾಗಿ ನಗರದ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿನ ಅವರ ಪುತ್ಥಳಿಗೆ ಪುಷ್ಪವೃಷ್ಟಿ ಮೂಲಕ ಗೌರವ ನಮನ ಸಲ್ಲಿಸಿ ಅವರು ಮಾತನಾಡಿದರು. ನಂಬಿದ ಆದರ್ಶಕ್ಕಾಗಿ ಪ್ರಾಣತ್ಯಾಗ ಮಾಡಿದ ಮಹಾನ್ ನಾಯಕನನ್ನು ಅವರ ಬಲಿದಾನದ ದಿನ ಗೌರವದಿಂದ ಸ್ಮರಿಸೋಣ ಎಂದರು.ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಮಾತನಾಡಿ, ಸಂಪರ್ಕ ಕ್ರಾಂತಿ, ಕಂಪ್ಯೂಟರೀಕರಣ, ಪಂಚಾಯತ ರಾಜ್ ವ್ಯವಸ್ಥೆ ಮೂಲಕ ಅಧಿಕಾರ ವಿಕೇಂದ್ರೀಕರಣ ಮಾಡಿದ ರಾಜೀವ್ ಗಾಂಧಿ ಅವರು, ಮತದಾನ ಹಕ್ಕನ್ನು 18 ವರ್ಷಕ್ಕೆ ನಿಗದಿಪಡಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸದೃಢಗೊಳಿಸಿದ್ದರು ಎಂದರು.ಸಂಪೂರ್ಣ ಸಾಕ್ಷರತಾ ಆಂದೋಲನ, ಪ್ರತಿಯೊಂದು ಜಿಲ್ಲೆಗೆ ನವೋದಯ ವಿದ್ಯಾ ಕೇಂದ್ರ, ಬಡತನ ನಿರ್ಮೂಲನೆಗೆ ಜವಾಹರ್ ರೋಜಗಾರ್ ಯೋಜನೆ ಜಾರಿಗೆ ತಂದರು ಎಂದು ತಿಳಿಸಿದರು.ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ನಾಗರಾಜ ಹದ್ಲಿ, ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ರಾಜು ಮನ್ನಿಕೇರಿ, ಬ್ಲಾಕ್ ಅಧ್ಯಕ್ಷ ಎಸ್.ಎನ್‌.ರಾಂಪುರ ಅಬ್ದುಲರಜಾಕ ಬೆಣ್ಣೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆನಂದ ಶಿಲ್ಲಿ, ಕುತುಬುದ್ದೀನ ಖಾಜಿ, ಶ್ರೀನಿವಾಸ ಬಳ್ಳಾರಿ, ಗಣಪತಸಾ ದಾನಿ, ದ್ಯಾಮಣ್ಣ ಗಾಳಿ, ಹನಮಂತ ಗೊರವರ, ಅಜೇಯ ಕಪಾಟೆ, ಇಬ್ರಾಹಿಂ ಕಲಾದಗಿ, ಅಲ್ತಾಫ್‌ ಯಾದವಾಡ, ರೇಣುಕಾ ನ್ಯಾಮಗೌಡ, ಮಹ್ಮದ ಕಯೂಮ, ಸಂದೀಪ ಬೆಳಗಲ, ವಿಜಯ ಮುಳ್ಳೂರು, ಕೇಶವ ಕುಲಕರ್ಣಿ, ಸಚಿನ ಮರಿಶೆಟ್ಟಿ, ಆಂಜನೇಯ ಅಂಬಿಗೇರ, ನಾಗೇಶ ಅಂಬಿಗೇರ, ಶಂಕರ ತಪಶೆಟ್ಟಿ, ರಾಜು ಹುಲ್ಯಾಳ, ಅಮಿನಸಾಬ್‌ ನದಾಫ, ಮಾಬುಬಿ, ಸುನಿತಾ, ಪ್ರೇಮಾ ರಾಠೋಡ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ವಿವಿಧ ಯೋಜನೆಗಳ ಮೂಲಕ ದೇಶದಲ್ಲಿ ಅಭಿವೃದ್ಧಿಯ ಪರ್ವಕ್ಕೆ ನಾಂದಿ ಹಾಡಿ ದೇಶದ ಯುವ ಸಮೂಹಕ್ಕೆ ಸ್ಫೂರ್ತಿ ತುಂಬಿದ್ದರು. ಭಾರತರತ್ನ ದಿ.ರಾಜೀವ್ ಗಾಂಧಿ ಅವರನ್ನು ಅವರ ಪುಣ್ಯತಿಥಿ ಪ್ರಯುಕ್ತ ಕ್ರತಜ್ಞತಾ ಪೂರ್ವಕಾಗಿ ನಾವು ಸ್ಮರಿಸಬೇಕಿದೆ.

- ಎಚ್.ವೈ.ಮೇಟಿ, ಶಾಸಕ.

Share this article