ಹೊನ್ನಾವರ: ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 33ನೇ ಪುಣ್ಯದಿನವನ್ನು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ರಕ್ತದಾನ ಮಾಡುವ ಮೂಲಕ ಮಂಗಳವಾರ ಅರ್ಥಪೂರ್ಣವಾಗಿ ಆಚರಿಸಿದರು.
ದೇಶದ ಶಕ್ತಿ ಯುವಕರು ಎಂದು ನಂಬಿದ್ದ ರಾಜೀವ್ ಗಾಂಧಿಯವರು ತಮ್ಮ ಆಡಳಿತಾವಧಿಯಲ್ಲಿ ದೇಶದ ಯುವಕರಿಗೆ 21ನೇ ವಯಸ್ಸಿನ ಬದಲಾಗಿ, ಕೇವಲ 18ನೇ ವಯಸ್ಸಿಗೆ ಮತದಾನದ ಹಕ್ಕನ್ನು ನೀಡುವ ಮೂಲಕ ಲೋಕಸಭೆಯಲ್ಲಿ ಕ್ರಾಂತಿಕಾರಿ ನಿರ್ಣಯ ಕೈಗೊಂಡಿದ್ದರು ಎಂದರು.
ತೆಂಗೇರಿಯವರ ಮಕ್ಕಳಾದ ಮಧು ಮತ್ತು ಮದನ್ ಕೂಡಾ ಎಲ್ಲ ಕಾರ್ಯಕರ್ತರೊಂದಿಗೆ ಪ್ರಥಮ ಬಾರಿ ರಕ್ತದಾನ ಮಾಡಿ ಮಾದರಿಯಾದರು. ಪ್ರತಿವರ್ಷ ರಾಜೀವ ಗಾಂಧಿ ಇಲ್ಲವೇ ರಾಷ್ಟ್ರೀಯ ನಾಯಕರ ಪುಣ್ಯದಿನದಂದು ರಕ್ತದಾನ ಮಾಡುವ ವಾಗ್ದಾನ ಮಾಡಿದರು.ರಕ್ತದಾನ ಮಾಡಿದ ಪ್ರತಿಯೊಬ್ಬರಿಗೂ ಪುಷ್ಪಗುಚ್ಛ ನೀಡಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ದಿ. ರಾಜೀವ್‍ಗಾಂಧಿ ಭಾವಚಿತ್ರಕ್ಕೆ ಸೇರಿದ ಪಕ್ಷದ ಕಾರ್ಯಕರ್ತರು ಪುಷ್ಪನಮನ ಸಲ್ಲಿಸಿ, ಒಂದು ನಿಮಿಷದ ಮೌನ ಆಚರಿಸಿ ಶ್ರದ್ಧಾಂಜಲಿ ಸಲ್ಲಿಸಿದರು. ರಕ್ತದಾನ ಕಾರ್ಯಕ್ರಮವನ್ನು ಕುಮಟಾ ಬ್ಲಡ್ ಬ್ಯಾಂಕ್‍ನಿಂದ ಆಗಮಿಸಿದ ಡಾ. ನಾರಾಯಣ ಮೂಡ್ಲಗಿರಿ, ಸಿಸ್ಟರ್ ಸರಳಾ ಫರ್ನಾಂಡಿಸ್, ವಸಂತ್ ಮಡಿವಾಳ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಬ್ಲಾಕ್ ಉಪಾಧ್ಯಕ್ಷ ದಾಮೋದರ ನಾಯ್ಕ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಬಾಲಚಂದ್ರ ನಾಯ್ಕ, ಬ್ಲಾಕ್ ಹಿಂದುಳಿದ ವರ್ಗ ವಿಭಾಗದ ಅಧ್ಯಕ್ಷ ಕುಪ್ಪು ಗೌಡ, ಬ್ಲಾಕ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಕೃಷ್ಣ ಹರಿಜನ, ಬ್ಲಾಕ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಜಕ್ರಿಯ್ಯಾ ಶೇಖ, ಇಂಟೆಕ್ ಜಿಲ್ಲಾ ಕಾರ್ಯದರ್ಶಿ ಕೇಶವ ಮೇಸ್ತ, ಸಾಮಾಜಿಕ ಜಾಲತಾಣದ ಬ್ಲಾಕ್ ಅಧ್ಯಕ್ಷ ರಾಮಕೃಷ್ಣ ನಾಯ್ಕ, ನಗರ ಘಟಕದ ಅಧ್ಯಕ್ಷ ಚಂದ್ರಶೇಖರ ಚಾರೋಡಿ, ಬ್ಲಾಕ್ ಕಾರ್ಯದರ್ಶಿ ಶ್ರೀಕಾಂತ ಮೇಸ್ತ, ಮೀನುಗಾರ ಮುಖಂಡ ಸುರೇಶ ರುಕ್ಕು ಮೇಸ್ತ, ವಸೀಂ ಸಾಬ್, ಬಿಸಿಸಿ ಕಾರ್ಯದರ್ಶಿ ಜ್ಯೋತಿ ಮಹಾಲೆ, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯೆ ಸುಧಾ ನಾಯ್ಕ, ಸಂತೋಷ ಮೇಸ್ತ, ಗಣೇಶ ಆಚಾರಿ, ಮಂಜು ಮುಕ್ರಿ, ಲಾರ್ಸನ್ ರೊಡ್ರಗಿಸ್, ವಾಸುದೇವ ಪುಲ್ಕರ್ ಇನ್ನೂ ಹಲವಾರು ಮುಖಂಡರು ಉಪಸ್ಥಿತರಿದ್ದರು.