ತಂತ್ರಜ್ಞಾನದ ಮೂಲಕ ದೇಶಕ್ಕೆ ಬುನಾದಿ ಹಾಕಿದ ರಾಜೀವ್

KannadaprabhaNewsNetwork |  
Published : May 22, 2026, 01:30 AM IST
್ಿ | Kannada Prabha

ಸಾರಾಂಶ

ಈ ದೇಶದ ಅಭಿವೃದ್ದಿಗೆ ಶ್ರಮಿಸಿದ ಅಗ್ರಗಣ್ಯ ನಾಯಕರಲ್ಲಿ ದಿ. ರಾಜೀವ ಗಾಂಧಿ ಅವರು ಒಬ್ಬರು ಎಂದು ಮಾಜಿ ಶಾಸಕ ಹಾಗೂ ಎಐಸಿಸಿ ಅಲ್ಪಸಂಖ್ಯಾತರ ಘಟಕ ಸಂಚಾಲಕ ಡಾ. ರಫೀಕ್ ಅಹಮದ್ ತಿಳಿಸಿದರು.

ಕನ್ನಡಪ್ರಭ ವಾರ್ತೆ, ತುಮಕೂರುಈ ದೇಶದ ಅಭಿವೃದ್ದಿಗೆ ಶ್ರಮಿಸಿದ ಅಗ್ರಗಣ್ಯ ನಾಯಕರಲ್ಲಿ ದಿ. ರಾಜೀವ ಗಾಂಧಿ ಅವರು ಒಬ್ಬರು ಎಂದು ಮಾಜಿ ಶಾಸಕ ಹಾಗೂ ಎಐಸಿಸಿ ಅಲ್ಪಸಂಖ್ಯಾತರ ಘಟಕ ಸಂಚಾಲಕ ಡಾ. ರಫೀಕ್ ಅಹಮದ್ ತಿಳಿಸಿದರು.ತುಮಕೂರು ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಮಾಜಿ ಪ್ರಧಾನಿ ದಿ.ರಾಜೀವ್‌ ಗಾಂಧಿ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಅತ್ಯಂತ ಕಿರಿಯ ವಯಸ್ಸಿನಲ್ಲಿ ದೇಶದ ಪ್ರಧಾನಿಯಾಗಿ, ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ದೇಶಕ್ಕೆ ಭದ್ರ ಬುನಾದಿ ಹಾಕಿದವರು.ದೇಶದ ಯುವ ಜನರು ಚುನಾವಣೆಯಂತಹ ಪ್ರಮುಖ ವಿಚಾರಗಳಲ್ಲಿ ಭಾಗಿಯಾಗಬೇಕು ಎಂಬ ಆಶಯದಿಂದ ಮತದಾನದ ವಯಸ್ಸನ್ನು 21ರಿಂದ 18ಕ್ಕೆ ಇಳಿಸಿದರು. ಸಂವಿಧಾನದ 73 ಮತ್ತು 74ನೇ ತಿದ್ದುಪಡಿಯ ಮೂಲಕ ಪಂಚಾಯತ್‌ ರಾಜ್ ವ್ಯವಸ್ಥೆ ಜಾರಿಗೆ ತಂದು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಮತ್ತು ಮಹಿಳೆಯರಿಗೆ ರಾಜಕೀಯ ಅಧಿಕಾರ ದೊರೆಯಬೇಕೆಂಬ ಮಹಾದಾಸೆ ಹೊಂದಿದ್ದರು. ರಾಜೀವ್‌ ಗಾಂಧಿ ಅವರಂತಹ ನಾಯಕರ ಅವಶ್ಯಕತೆ ಈ ದೇಶಕ್ಕೆ ಇದೆ ಎಂದರು.

ರಾಜ್ಯ ಸರಕಾರದ ಮೂರು ವರ್ಷದ ಸಾಧನೆಯ ಸೇವೆಗಳ ಸಮರ್ಪಣಾ ಸಂಭ್ರಮ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿದ್ದು, ಕಾರ್ಯಕ್ರಮ ಅಚ್ಚುಕಟ್ಟಾಗಿ ಆಯೋಜಿಸಿದ ಜಿಲ್ಲಾಉಸ್ತುವಾರಿ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರಿಗೆ ಮತ್ತು ಸಹಕರಿಸಿದ ಜಿಲ್ಲಾಡಳಿತಕ್ಕೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.ಸರಕಾರ ಈ ವರ್ಷದ ಅಂತ್ಯದೊಳಗೆ ಗ್ರೇಟರ್ ಬೆಂಗಳೂರು ಸೇರಿದಂತೆ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುವ ಸಾಧ್ಯತೆ ದಟ್ಟವಾಗಿದೆ. ಹಾಗಾಗಿ ಚುನಾವಣೆಗಳನ್ನು ಸಮರ್ಥವಾಗಿ ಎದುರಿಸಲು ಕಾರ್ಯಕರ್ತರು, ಮುಖಂಡರು ಸಿದ್ಧರಾಗುವಂತೆ ಕರೆ ನೀಡಿದರು.ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆರ್.ರಾಮಕೃಷ್ಣ ಮಾತನಾಡಿ, ಐಟಿ, ಬಿಟಿಯನ್ನುದೇಶಕ್ಕೆ ಪರಿಚಯಿಸುವ ಮೂಲಕ ಎಲ್ಲರೂ ಟಿ.ವಿ., ಮೊಬೈಲ್ ಹೊಂದುವಂತೆ ತಂತ್ರಜ್ಞಾನದ ಅಭಿವೃದ್ದಿಗೆ ಮುನ್ನುಡಿ ಬರೆದವರು ರಾಜೀವ್‌ ಗಾಂಧಿ ಅವರು,ನೂತನ ಶಿಕ್ಷಣ ನೀತಿಯ ಮೂಲಕ ಗ್ರಾಮೀಣ ಭಾಗದಲ್ಲಿ ನವೋದಯ ಶಾಲೆಗಳನ್ನು ತೆರದು ಬಡವರ ಮಕ್ಕಳು ಸ್ಪರ್ಧಾತ್ಮಕ ಜಗತ್ತನ್ನು ಸಮರ್ಥವಾಗಿ ಎದುರಿಸಲು ವೇದಿಕೆ ಕಲ್ಪಿಸಿದವರು ದಿ.ರಾಜೀವ್‌ಗಾಂಧಿಅವರು,ಇಂತಹ ನಾಯಕರ ಅಗತ್ಯ ದೇಶಕ್ಕೆ ಇದೆ ಎಂದರು.ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಇಕ್ಬಾಲ್‌ ಅಹಮದ್ ಮಾತನಾಡಿ, ಸಂಪ್ರದಾಯಕ ರೀತಿಯಲ್ಲಿ ನಡೆಯುತ್ತಿದ್ದ ದೇಶದ ಆಡಳಿತಕ್ಕೆ ತಂತ್ರಜ್ಞಾನದ ಮೂಲಕ ಆಧುನಿಕತೆಯ ವೇಗ ನೀಡಿದವರು ದಿ.ರಾಜೀವ್‌ಗಾಂಧಿ ಅವರು, ಪೈಲೆಟ್ ವೃತ್ತಿಯಿಂದ ಅನಿವಾರ್ಯ ಪರಿಸ್ಥಿತಿಯಲ್ಲಿ ದೇಶದ ಚುಕ್ಕಾಣಿ ಹಿಡಿದು ಇಡೀ ಪ್ರಪಂಚವೇ ಭಾರತದ ಕಡೆಗೆ ತಿರುಗಿ ನೋಡುವಂತೆ ಮಾಡಿದರು. ಸ್ಯಾಮ್ ಪಿತ್ರೋಡ್‌ ಅವರ ಮೂಲಕ ಕಂಪ್ಯೂಟರ್‌ ಪರಿಚಯಿಸಿ ಅಭಿವೃದ್ದಿಯ ವೇಗವನ್ನು ಮತ್ತಷ್ಟು ಚುರುಕುಗೊಳಿಸಿದರು ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಮಾತನಾಡಿ, ನೆಹರು, ಇಂದಿರಾಗಾಂಧಿ, ರಾಜೀವ್‌ಗಾಂಧಿ ಅವರು ಈ ದೇಶಕ್ಕೆ ಭದ್ರ ಬುನಾದಿ ಹಾಕಿದವರು. ಶ್ರೀಲಂಕಾಕ್ಕೆ ಭಾರತದ ಶಾಂತಿ ಪಾಲನ ಪಡೆ ಕಳುಹಿಸಿ,ದೇಶದ ಜಲ್ವಂತ ಸಮಸ್ಯೆಗಳಿಗೆ ಪರಿಹಾರ ಹುಡುಕಿದ್ದರು.ಆದರೆ ಕಳೆದ ಎರಡು ವರ್ಷಗಳಿಂದ ಮಣಿಪುರ ಹೊತ್ತಿ ಉರಿದರೂ ಪ್ರಧಾನಿ ಭೇಟಿ ನೀಡಿಲ್ಲ.ತಿಂಗಳಿಗೊಂದು ವಿದೇಶಿ ಪ್ರವಾಸ ಮಾಡುವ ಪ್ರಧಾನಿಗೆ ಮಣಿಪುರಕ್ಕೆ ಹೋಗಲು ಸಮಯಇಲ್ಲ ಎಂದರು.

ಕಾರ್ಯಕ್ರಮದಲ್ಲಿ ಗ್ರಾಮಾಂತರ ಮುಖಂಡರಾದ ಎಚ್.ಸಿ.ಷಣ್ಮುಗಪ್ಪ, ಮಹಿಳಾ ಮುಖಂಡರಾದ ಸೌಭಾಗ್ಯಬ್ಲಾಕ್‌ ಕಾಂಗ್ರಸ್‌ ಅಧ್ಯಕ್ಷ ಮಹೇಶ್, ಫಯಾಜ್, ಮುಖಂಡರಾದ ಪಂಚಾಕ್ಷರಯ್ಯ, ಷಣ್ಮುಗಪ್ಪ, ಸೈಯದ್‌ ದಾದಾ ಪೀರ್, ಅನಿಲ್‌ಕುಮಾರ್,ಸಂಜೀವಕುಮಾರ್, ಹಾಲೇನೂರು ವಿರೇಶಕುಮಾರ್, ಕೈದಾಳ ರಮೇಶ್, ಸುಜಾತ, ಸುಮ, ಕೆಂಪರಾಜು, ಇರ್ಫಾನ್, ಶಿವಾಜಿ, ಕುಮಾರಸ್ವಾಮಿ, ಶಿವರಾಜು, ನ್ಯಾತೇಗೌಡ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಾಜ ಬದಲಾಗದಿದ್ದರೆ ಗುಲಾಮಗಿರಿ ಬರುತ್ತೆ: ಬಿ.ವೀರಪ್ಪ
ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿ ನೀರಿಗಾಗಿ ಪರದಾಟ