ಶ್ರೀನಿವಾಸ ಬಬಲಾದಿ
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕು ಲೋಕಾಪುರ ಸಮೀಪದ ದಾದನಟ್ಟಿ ಗ್ರಾಮದ ಪಾರಿಜಾತ ಹಿಮ್ಮೇಳ ಹಿರಿಯ ಅಂಧ ಕಲಾವಿದ ಸಿದ್ದಪ್ಪ ಕರಿಯಪ್ಪ ಕುರಿಯವರ ಸಾಧನೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ಕಲೆಯನ್ನೇ ಜೀವನವಾಗಿಸಿಕೊಂಡು ಕಲೆಗಾಗಿ ಬದುಕು ಸವೆಸಿದ ಸಿದ್ದಪ್ಪ ಕುರಿ ೧೯೫೩, ಜೂ.೧ರಂದು ಕರಿಯಪ್ಪ ಮತ್ತು ಯಲ್ಲವ್ವ ದಂಪತಿ ಉದರದಲ್ಲಿ ದಾದನಟ್ಟಿಯಲ್ಲಿ ಜನಿಸಿದರು. ೭ನೇ ತರಗತಿಯವರಿಗೆ ವಿದ್ಯಾಭ್ಯಾಸ ಮಾಡಿದ ಸಿದ್ದಪ್ಪ ತಮ್ಮ ೧೪ನೇ ವಯಸ್ಸಿನಲ್ಲಿ ಕಲಾದೇವತೆ ಅರಿಸಿ ಅಂದಿನಿಂದ ಇದುವರೆಗೂ ಭಜನಾ ಕಲೆಯಲ್ಲಿ ತೊಡಗಿದ್ದಾರೆ. ಕಲೆಯಲ್ಲಿ ಇನ್ನೂ ಹೆಚ್ಚಿನ ಸಾಧನೆಗಾಗಿ ಶ್ರೀಕೃಷ್ಣ ಪಾರಿಜಾತ ಕಂಪನಿಗೆ ಸೇರಿಕೊಂಡ ಅವರು, ಪಾರಿಜಾತದ ಎಲ್ಲ ಪಾತ್ರಗಳಿಗೂ ಜೀವಕಳೆ ತುಂಬಿ ಸೈ ಎನಿಸಿಕೊಂಡರು. ಸಿದ್ದಪ್ಪರು ಪಾರಿಜಾತದಲ್ಲಿ ಗೌಳಗಿತ್ತಿ, ಸತ್ಯಭಮೆ, ಕೊರವಂಜಿ, ಶ್ರೀಕೃಷ್ಣ ಪರಮಾತ್ಮನ ಪಾತ್ರಧಾರಿಯಲ್ಲಿಯೂ ಛಾಪು ಮೂಡಿಸಿದ್ದಾರೆ.ಪಾರಿಜಾತಗಳಲ್ಲಿ ದೊಡ್ಡ ಕಲಾವಿದರಾಗಿ ಬೆಳೆಯಲು ಕುಟುಂಬದ ಸಹಕಾರ ನೆನೆದು ಭಾವುಕರಾದ ಸಿದ್ದಪ್ಪ, ತಂದೆಯಾದ ಕರೆಯಪ್ಪರ ಪ್ರೋತ್ಸಾಹವೇ ನನ್ನ ಈ ಮಟ್ಟಿಗೆ ಬೆಳೆಸಿದ್ದು. ಅಣ್ಣ ಬೀರಪ್ಪ ಮತ್ತು ತಮ್ಮ ಹನಮಂತ ಸಹಕಾರ ಸಹಾಯ ನೆನೆದಿದ್ದಾರೆ. ಇನ್ನೂ ಇವರ ಕಲೆಗೆ ನೀರೆರೆದು ಪೋಷಿಸಿದ್ದು ಗುರುಗಳಾದ ಶ್ರೀ ಲೋಕಯ್ಯ ಸಾ.ಲೋಕಾಪೂರವರು. ಶ್ರೀ ಕೃಷ್ಣಾಜಿ ದೇಶಪಾಂಡೆಯವರ ಗರಡಿಯಲ್ಲಿ ಬೆಳೆದ ಒಬ್ಬ ಪರಿಪೂರ್ಣ ಕಲಾವಿದರಾಗಿ ಹೆಸರು ಮಾಡುವಲ್ಲಿ ಕೃಷ್ಣಾಜಿವರ ಹೆಸರೆ ನನಗೆ ಉಸಿರಾಗದೆ ಎಂದು ಹೇಳುತ್ತಾರೆ.
ಲಭಿಸಿರುವ ಪ್ರಶಸ್ತಿಗಳು:
ಕರ್ನಾಟಕ ರಾಜ್ಯೋತ್ಸವ ಪ್ರಶಿಸ್ತಿ ಬಂದಿದ್ದು ತುಂಬಾ ಸಂತೋಷದ ವಿಷಯ. ಇದು ಬಯಸದೆ ಬಂದ ಭಾಗ್ಯವಾಗಿದೆ. ಶಿವಭಜನೆ ಪದ ಹಾಡುತ್ತಿದ್ದ ನನಗೆ ಲೋಕಾಪುರ ದೇಶಪಾಂಡೆ ಮತ್ತು ಸಗರಪ್ಪ ಯಾದವಾಡ ಮಾಸ್ತರ ಪಾರಿಜಾತದ ರುಚಿ ಹಚ್ಚಿಸಿದರು. ನಂತರ ನಾನಾ ಪಾತ್ರಗಳನ್ನು ಮಾಡುತ್ತ ಬಂದಿದ್ದೇನೆ. ನನ್ನ ಕಲೆ ಗುರುತಿಸಿ ಪ್ರಶಶ್ತಿ ನೀಡಿ ಗೌರವಿಸಿದ್ದಕ್ಕೆ ಸರ್ಕಾರಕ್ಕೆ ಅಭಿನಂದನೆಗಳು.
ರಾಜ್ಯದಲ್ಲಿ ಎಲೆಮರೆ ಕಾಯಿಯಂತೆ ಸಾಕಷ್ಟು ಕಲಾವಿದರಿದ್ದು ಇಂಥ ಕಲಾವಿದರನ್ನು ಗುರುತಿಸಿ, ಸನ್ಮಾನಿಸಿ, ಗೌರವಿಸುವ ಕೆಲಸ ನಮ್ಮ ಸರ್ಕಾರ ಮಾಡುತ್ತದೆ. ಸಿದ್ದಪ್ಪ ಕ. ಕುರಿಯವಿರಗೆ ಗ್ರಾಮೀಣ ಕಲಾವಿದನಾಗಿದ್ದು ರಾಜ್ಯೋತ್ಸವ ಪ್ರಶಸ್ತಿ ಸಿಕ್ಕದು ತುಂಬಾ ಖುಷಿಯಾಗಿದೆ.