ಕನ್ನಡಪ್ರಭದ ಛಾಯಾಗ್ರಾಹಕ ದ್ವಾರಕನಾಥ್, ಅಂಧರ ಮಹಿಳಾ ಕ್ರಿಕೆಟ್ ತಂಡದ ನಾಯಕಿ ವರ್ಷಾ ಸೇರಿದಂತೆ 28 ಮಂದಿ ಸಾಧಕರಿಗೆ ಈ ಬಾರಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ನವೆಂಬರ್ ಒಂದರಂದು ಜಿಲ್ಲಾ ಕೇಂದ್ರದಲ್ಲಿ ಜರುಗುವ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಸನ್ಮಾನಿಸಲಾಗುವುದೆಂದು ಜಿಲ್ಲಾಧಿಕಾರಿ ದಿವ್ಯಾಪ್ರಭು ತಿಳಿಸಿದ್ದಾರೆ.
ಅಂಧರ ಮಹಿಳಾ ಕ್ರಿಕೆಟ್ ತಂಡದ ನಾಯಕಿ ವರ್ಷಾಗೂ ಜಿಲ್ಲೆಯಿಂದ ಗೌರವ ಕನ್ನಡಪ್ರಭ ವಾರ್ತೆ ಚಿತ್ರದುರ್ಗ ಕನ್ನಡಪ್ರಭದ ಛಾಯಾಗ್ರಾಹಕ ದ್ವಾರಕನಾಥ್, ಅಂಧರ ಮಹಿಳಾ ಕ್ರಿಕೆಟ್ ತಂಡದ ನಾಯಕಿ ವರ್ಷಾ ಸೇರಿದಂತೆ 28 ಮಂದಿ ಸಾಧಕರಿಗೆ ಈ ಬಾರಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ನವೆಂಬರ್ ಒಂದರಂದು ಜಿಲ್ಲಾ ಕೇಂದ್ರದಲ್ಲಿ ಜರುಗುವ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಸನ್ಮಾನಿಸಲಾಗುವುದೆಂದು ಜಿಲ್ಲಾಧಿಕಾರಿ ದಿವ್ಯಾಪ್ರಭು ತಿಳಿಸಿದ್ದಾರೆ. ಉಪವಿಭಾಗಾಧಿಕಾರಿ ಕಾರ್ತಿಕ್ ಅವರ ಅಧ್ಯಕ್ಷತೆಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯು ಅ.30 ರಂದು ಸಭೆ ನಡೆಸಿ, ಸನ್ಮಾನಿತರ ಪಟ್ಟಿಯನ್ನು ಶಿಫಾರಸು ಮಾಡಿದೆ. ಹಿರಿಯೂರು ತಾಲೂಕಿನ ವರ್ಷಾ ಆದಿವಾಲ - ಕ್ರೀಡಾ ಕ್ಷೇತ್ರ (ವಿಶೇಷ ಚೇತನರು, ಶ್ರೇಯಾ ಕುಮಾರಸ್ವಾಮಿ, ಚಿತ್ರದುರ್ಗ- ಕ್ರೀಡೆ, ರವಿ ಅಂಬೇಕರ್ ಯೋಗ ತರಬೇತುದಾರರು, ಡಾ. ಆರ್.ಎ ದಯಾನಂದಮೂರ್ತಿ ಚಳ್ಳಕೆರೆ-ಕೃಷಿ, ಕೆ.ಸಿ.ಹೊರಕೇರಪ್ಪ, ಹಿರಿಯೂರು-ಕೃಷಿ, ಮೋಹನ ಮುರಳಿ ಚಿತ್ರದುರ್ಗ ಚಿತ್ರಕಲೆ, ಟಿ.ಎಂ. ವೀರೇಶ್, ಚಿತ್ರದುರ್ಗ ಚಿತ್ರಕಲೆ, ಜಿ.ಪರಶುರಾಮ ಚಿತ್ರದುರ್ಗ- ಭೂವಿಜ್ಞಾನಿ, ಡಾ.ದೀಪಕ್ ಆರ್.ಎಸ್, ಚಿತ್ರದುರ್ಗ ಸಂಶೋಧನೆ, ಡಾ.ಪಿ.ವಿ ಶ್ರೀಧರ ಮೂರ್ತಿ ಚಿತ್ರದುರ್ಗ- ವೈದ್ಯಕೀಯ, ಡಾ. ಬಿ. ಚಂದ್ರನಾಯ್ಕ್, ನವಜಾತ ಶಿಶು ಮತ್ತು ಮಕ್ಕಳ ತಜ್ಞರು ಚಿತ್ರದುರ್ಗ ವೈದ್ಯಕೀಯ ಕ್ಷೇತ್ರದ ಸಾಧನೆ ಗೌರವಿಸಲಾಗುತ್ತಿದೆ. ಹನುಮಂತಪ್ಪ ಹೊಸದುರ್ಗ-ಶಿಕ್ಷಣ, ಜಿ.ಎಸ್ ವಸಂತ ಮೊಳಕಾಲ್ಮೂರು ತಾಲೂಕು- ಶಿಕ್ಷಣ, ಡಾ. ಸೌಮ್ಯ, ಕೆಳಗೋಟೆ- ಸಮಾಜಸೇವೆ, ವೀಣಾ ಗೌರಣ್ಣ, ಚಿತ್ರದುರ್ಗ ಸಮಾಜ ಸೇವೆ, ಪ್ರೊ.ಜಿ. ಪರಮೇಶ್ವರಪ್ಪ ಚಿತ್ರದುರ್ಗ ಸಾಹಿತ್ಯ, ಬಾಗೂರು ಆರ್.ನಾಗರಾಜಪ್ಪ ಹೊಸದುರ್ಗ ತಾಲೂಕು ಸಾಹಿತ್ಯ, ಎಸ್.ಡಿ. ರಾಮಸ್ವಾಮಿ ಚಿತ್ರದುರ್ಗ ರಂಗಭೂಮಿ, ಡಿ.ಶ್ರೀಕುಮಾರ್ ಚಿತ್ರದುರ್ಗ ರಂಗಭೂಮಿ, ಶೈಲಜ ಸುದರ್ಶನ್ ಚಿತ್ರದುರ್ಗ ಸಂಗೀತ, ಡಿ.ಓ. ಮುರಾರ್ಜಿ, ಚಿಕ್ಕೋಬನಹಳ್ಳಿ-ಸಂಗೀತ, ಜಿ.ರಾಜಣ್ಣ, ಚಿತ್ರದುರ್ಗ ಜಾನಪದ, ಶ್ರೀನಿವಾಸ ಚಿಕ್ಕುಂತಿ, ಮೊಳಕಾಲ್ಮೂರು ತಾಲೂಕು ಜಾನಪದ. ಲಕ್ಷ್ಮಣ ಎಚ್. ರವಿ ಮಲ್ಲಾಪುರ, ವೀರೇಶ್.ವಿ (ಪತ್ರಿಕೋದ್ಯಮ) ಮಂಜುನಾಥ್, ದ್ವಾರಕನಾಥ್ ಅವರ ಛಾಯಾಗ್ರಹಣ ಕ್ಷೇತ್ರದ ಸಾಧನೆಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.