ಧರ್ಮಸ್ಥಳ ಅಪಪ್ರಚಾರ ಖಂಡಿಸಿ ಜಾಥಾ

KannadaprabhaNewsNetwork |  
Published : Aug 21, 2025, 01:00 AM IST
20ಎಚ್‌ಯುಬಿ33ನವಲಗುಂದ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆದಿರುವ ಅಪಪ್ರಚಾರ ಖಂಡಿಸಿ ನಾನಾ ಹಿಂದುಪರ ಸಂಘಟನೆಗಳು ಪಟ್ಟಣದಲ್ಲಿ ಬೃಹತ್ ಜಾಥಾ ನಡೆಸಿದರು. | Kannada Prabha

ಸಾರಾಂಶ

ಶತಮಾನಗಳಿಂದಲೂ ಮಾನವ ಕುಲ ಅಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿರುವ ಶ್ರೀಕ್ಷೇತ್ರದ ಕುರಿತಾಗಿ ನಡೆಯುತ್ತಿರುವ ಅಪಪ್ರಚಾರಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದ್ದು, ಸರ್ಕಾರ ಮಧ್ಯಸ್ಥಿಕೆ ವಹಿಸಿ ಕೂಡಲೇ ಸತ್ಯ ಸಂಗತಿ ಬಹಿರಂಗ ಪಡಿಸಬೇಕು.

ನವಲಗುಂದ: ಧರ್ಮಸ್ಥಳದ ಕುರಿತಾಗಿ ಅನಾಮಿಕ ವ್ಯಕ್ತಿಯೊಬ್ಬರ ಹೇಳಿಕೆಯಿಂದ ಶ್ರೀಕ್ಷೇತ್ರದ ಅಪಪ್ರಚಾರವನ್ನು ತಡೆಗಟ್ಟಬೇಕೆಂದು ಹಿರಿಯರಾದ ಲೋಕನಾಥ ಹೆಬಸೂರ ಹೇಳಿದರು.

ಬುಧವಾರ ಸ್ಥಳೀಯ ಗವಿಮಠದಿಂದ ಲಿಂಗರಾಜ ವೃತ್ತದ ವರೆಗೆ ಬೃಹತ್ ಜನಾಗ್ರಹ ಜಾಥಾ ನಡೆಸಿ ತಹಸೀಲ್ದಾರ್ ಹಾಗೂ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿ ಮಾತನಾಡಿದರು.

ದೇಶದಲ್ಲಿಯೇ ಅತೀ ಹೆಚ್ಚು ಭಕ್ತರನ್ನು ಹೊಂದಿದ ಧರ್ಮಸ್ಥಳದಿಂದ ಶೈಕ್ಷಣಿಕ, ಧಾರ್ಮಿಕ ಸೇವೆಗಳು ನಿರಂತರವಾಗಿ ನಡೆದಿದ್ದು ಜಾತಿ ಭೇದಗಳನ್ನು ಮರೆತು ಜನರು ಧರ್ಮಸ್ಥಳಕ್ಕೆ ಆಗಮಿಸುತ್ತಿದ್ದಾರೆ.

ಶತಮಾನಗಳಿಂದಲೂ ಮಾನವ ಕುಲ ಅಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿರುವ ಶ್ರೀಕ್ಷೇತ್ರದ ಕುರಿತಾಗಿ ನಡೆಯುತ್ತಿರುವ ಅಪಪ್ರಚಾರಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದ್ದು, ಸರ್ಕಾರ ಮಧ್ಯಸ್ಥಿಕೆ ವಹಿಸಿ ಕೂಡಲೇ ಸತ್ಯ ಸಂಗತಿ ಬಹಿರಂಗ ಪಡಿಸಬೇಕು ಹಾಗೂ ಅನಾಮಧೇಯ ವ್ಯಕ್ತಿಗಳಿಂದ ಧರ್ಮ ಸವಹೇಳನಕಾರಿ ಕಾರ್ಯಗಳು ನಡೆಯದಂತೆ ನೋಡಿಕೊಳ್ಳಬೇಕೆಂದರು.

ಜಾಥಾದ ಸಾನ್ನಿಧ್ಯ ವಹಿಸಿದ್ದ ಗವಿಮಠದ ಶ್ರೀ ಬಸವಲಿಂಗಸ್ವಾಮಿಜಿ ಮಾತನಾಡಿ, ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರವೊಂದರ ಮೇಲೆ ಕಾಣದ ಕೈಗಳು ನಡೆಸುತ್ತಿರುವ ಕುಂತ್ರಗಳನ್ನು ಸರ್ಕಾರಗಳು ಮಟ್ಟ ಹಾಕಿ, ಧರ್ಮದ ಉಳಿವಿಗೆ ಶ್ರಮಿಸುತ್ತಿರುವ ಶ್ರೀಕ್ಷೇತ್ರದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರಗಳನ್ನು ನಿಲ್ಲಿಸಲು ಕ್ರಮ ಜರುಗಿಸಬೇಕು ಎಂದರು.

ಜೈನ ಸಮುದಾಯದ ಅಧ್ಯಕ್ಷ ವಿ.ಪಿ. ಪಾಟೀಲ್ ಮಾತನಾಡಿ, ಧರ್ಮ ರಕ್ಷಣೆಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಧರ್ಮಸ್ಥಳದ ವಿರುದ್ಧ ಅನಾಮಿಕ ವ್ಯಕ್ತಿಯೊಬ್ಬರ ಮೇಲೆ ಭರವಸೆ ಇಟ್ಟು ಸರ್ಕಾರ ಎಸ್‌ಐಟಿ ತನಿಖೆ ನಡೆಸುತ್ತಿರುವುದು ವಿಷಾಧದ ಸಂಗತಿಯಾಗಿದ್ದು. ಈಗಾಗಲೇ ಎಸ್‌ಐಟಿ ತನಿಖೆ ನಡೆಯುತ್ತಿದ್ದು ಸರ್ಕಾರ ಮಧ್ಯಂತರ ವರದಿ ಪಡೆದು ಸತ್ಯವನ್ನು ಬಹಿರಂಗ ಪಡಿಸಬೇಕೆಂದರು.

ನಾಗಲಿಂಗಮಠದ ಸಿದ್ದಯ್ಯಸ್ವಾಮೀಜಿ, ರೈತ ಹೋರಾಟಗಾರ ವಿರೇಶ ಸೊಬರದಮಠ, ಶ್ರೀಕಾಂತ ಪಾಟೀಲ್, ಅಣ್ಣಪ್ಪ ಬಾಗಿ, ಆರ್.ಎನ್. ಧಾರವಾಡ, ನರಸಿಂಹ ಇನಾಮತಿ, ಜೀವನ ಪವಾರ, ಪೂರ್ಣಿಮಾ ಜೋಶಿ, ಸಾಯಿಬಾಬಾ ಆನೇಗುಂದಿ, ನೇತಾಜಿ ಕಲಾಲ, ವರ್ಧಮಾನಗೌಡ ಹಿರೇಗೌಡರ, ಎಸ್‌.ಎನ್. ಡಂಬಳ ಸೇರಿದಂತೆ ತಾಲೂಕಿನ ನಾನಾ ಧಾರ್ಮಿಕ ಸಂಘಟನೆಗಳು, ಸಂಘ- ಸಂಸ್ಥೆಗಳು ಹಾಗೂ ಮಹಿಳಾ ಸಂಘಟನೆಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.

PREV

Recommended Stories

ರಾಜ್ಯದಲ್ಲಿ 5 - 6 ದಿನ ಮಳೆ ಇಳಿಮುಖ : 26ರಿಂದ ಮತ್ತೆ ಮಳೆ
ಎಮ್ಮೆ ಕೊಡಿಸುವುದಾಗಿ ಪ್ರೇಮ್‌ಗೆ ವಂಚನೆ : ₹4.75 ಲಕ್ಷ ಮೋಸ