ಕಮ್ಯುನಿಸ್ಟ್ ಪಕ್ಷದ ಶತಮಾನೋತ್ಸವ ಪ್ರಯುಕ್ತ ಜಾಥಾ

KannadaprabhaNewsNetwork |  
Published : Dec 19, 2025, 02:30 AM IST
18ಜಿಡಿಜಿ14 | Kannada Prabha

ಸಾರಾಂಶ

ಭಾರತ ಕಮ್ಯುನಿಸ್ಟ್‌ ಪಕ್ಷ ಜಾಥಾ ಮೂಲಕ ರೈತ, ಕಾರ್ಮಿಕ ವಿದ್ಯಾರ್ಥಿ, ಯುವಜನ, ಮಹಿಳೆಯರ ಜತೆ ಸಂವಾದ ಜರುಗಿತು.

ಗದಗ: ದೇಶದಲ್ಲಿ ಮತಧರ್ಮಗಳ ಸಂಘರ್ಷವಿಲ್ಲದ, ಮೇಲು- ಕೀಳುಗಳಿಲ್ಲದ, ಶಾಂತಿ, ಸಹಬಾಳ್ವೆ, ಸೌಹಾರ್ದತೆಯ ಜತೆಗೆ ಸಮತಾ ರಾಜ್ಯದ ಕನಸುಗಳೊಂದಿಗೆ ಭಾರತ ಕಮ್ಯುನಿಸ್ಟ್ ಪಕ್ಷವು ಡಿ. 26ಕ್ಕೆ 100 ಪೂರೈಸುತ್ತಿದೆ. ಈ ಶತಮಾನೋತ್ಸವ ಸಂಭ್ರದ ಜತೆ ರಾಜ್ಯಾದ್ಯಂತ ನಡೆಸುತ್ತಿರುವ ಜಾಥಾ ಇತ್ತೀಚೆಗೆ ನಗರಕ್ಕೆ ಆಗಮಿಸಿತು.

ನಗರದ ಭೂಮರಡ್ಡಿ ವೃತ್ತದಿಂದ ಪಾದಯಾತ್ರೆಯ ಮೂಲಕ ಗಾಂಧಿ ವೃತ್ತದವರೆಗೆ ತೆರಳಿ ನಂತರ ಬಹಿರಂಗ ಸಭೆಯಾಗಿ ಮಾರ್ಪಟ್ಟಿತು. ಸಭೆಯಲ್ಲಿ ಪಕ್ಷದ ನಾಯಕರು ಮಾತನಾಡಿ, ರಾಜ್ಯದಲ್ಲಿ ಕೋಮುವಾದಿ ಪಕ್ಷ, ಸಂಘಟನೆಗಳು ಕಾರ್ಪೋರೇಟ್ ಜನರ ಸ್ವಾತಂತ್ರ್ಯವನ್ನು ನಾಶ ಮಾಡಿವೆ.

ಬಡತನ, ನಿರುದ್ಯೋಗ, ಅತ್ಯಾಚಾರ, ಭ್ರಷ್ಟಾಚಾರ, ರೈತರ ಆತ್ಮಹತ್ಯೆ, ಕಾರ್ಮಿಕರ ಹಕ್ಕುಗಳ ನಾಶ, ವಿದ್ಯಾರ್ಥಿ ಯುವಜನರಲ್ಲಿ ಹತಾಶೆ, ನೆಲ- ಜಲ ದೇಶದ ಮತ್ತು ರಾಜ್ಯದ ಸಾರ್ವಜನಿಕ ಸಂಪತ್ತಿನ ಲೂಟಿ ಹೆಚ್ಚುತಲೇ ಇದೆ. ಭಾರತ ಕಮ್ಯುನಿಸ್ಟ್‌ ಪಕ್ಷ ಜಾಥಾ ಮೂಲಕ ರೈತ, ಕಾರ್ಮಿಕ ವಿದ್ಯಾರ್ಥಿ, ಯುವಜನ, ಮಹಿಳೆಯರ ಜತೆ ಸಂವಾದ ಜರುಗಿತು.ಜಾಥಾದಲ್ಲಿ ಜಿಲ್ಲಾ ಎಐಟಿಯುಸಿ ಸಂಯೋಜಿತ ಜಿಲ್ಲಾ ಸಮಿತಿ ಅಧ್ಯಕ್ಷ ಎಂ.ಐ. ನವಲೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಅರಮನಿ, ಅಡಿವೆಪ್ಪ ಚಲವಾ, ಈಶ್ವರ ಲಕ್ಷ್ಮೇಶ್ವರ, ಕೊಪ್ಪಳ ಜಿಲ್ಲಾ ಸಮಿತಿ ಸಿಪಿಐ ಎ.ಎಲ್. ತಿಮ್ಮಣ್ಣ, ಹುಲಗಪ್ಪ, ಮಂಜುನಾಥ, ಲಕ್ಷ್ಮಣ ನಾಯಕ, ತಿಮ್ಮಣ್ಣ ಗುಡೂರ, ಮಲ್ಲಯ್ಯ, ಹನುಮಂತ ಚಿತ್ರಗಾರ, ಮೋದಿನಸಾಬ ನರಗುಂದ, ಫಾರೂಕ್ ಅಲಿ, ಹುಸೇನಸಾಬ ಈಟಿ, ಮಹೇಶ, ಬಸವರಾಜ ಪೂಜಾರ, ರಮೇಶ ಬಾಳಮ್ಮನವರ, ವೆಂಕಟೇಶಯ್ಯ ಸಂತೋಷ ಎಚ್.ಎನ್., ಮೋನಪ್ಪ ಎ.ಸಿ. ಷಣ್ಮುಖ ಸ್ವಾಮಿ, ಹುಲಿಗೆಪ್ಪ, ತಿಮ್ಮಣ್ಣ ಎಲ್. ಮತ್ತು ಗದಗ ನಗರದ ಸಮಸ್ತ ಕಟ್ಟಡ ಕಾರ್ಮಿಕರು ಇದ್ದರು. ಶಾಲಾ ತರಗತಿಯಲ್ಲಿ ದೇಶದ ಭವಿಷ್ಯ ನಿರ್ಮಾಣ

ಗದಗ: ಪಾಲಕರು ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ನಿರಂತರವಾಗಿ ಗಮನ ಹರಿಸಬೇಕು. ಉಪನ್ಯಾಸಕರ ಜತೆ ಕೈಜೋಡಿಸಿ ಉಜ್ವಲ ಭವಿಷ್ಯ ನಿರ್ಮಾಣಕ್ಕೆ ವೇದಿಕೆ ಕಲ್ಪಿಸಬೇಕು ಎಂದು ಆ್ಯಂಗ್ಲೋ ಉರ್ದು ಸಂಸ್ಥೆಯ ಅಧ್ಯಕ್ಷ ಸರ್ಫ್‌ರಾಜ್ ಅಹ್ಮದ್ ಉಮಚಗಿ ತಿಳಿಸಿದರು.ನಗರದ ಆ್ಯಂಗ್ಲೋ ಉರ್ದು ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಪಾಲಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ದೇಶದ ಭವಿಷ್ಯತ್ತು ನಿರ್ಮಾಣವಾಗುವುದು ತರಗತಿಗಳಲ್ಲಿ. ಆದ್ದರಿಂದ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಪಾಲಕರು ತಮ್ಮ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಗಮನಹರಿಸಿ ಅವರ ಭವಿಷ್ಯ ರೂಪಿಸಲು ಜಾಗೃತಿ ವಹಿಸಬೇಕು ಎಂದರು.

ಆಡಳಿತ ಮಂಡಳಿಯ ಸದಸ್ಯ ಪ್ರೊ. ಎ.ಎಂ. ಮುಲ್ಲಾ ಮಾತನಾಡಿ, ಪಾಲಕರ ಸಭೆ ಏರ್ಪಡಿಸುವುದರಿಂದ ಶೈಕ್ಷಣಿಕ ಪ್ರಗತಿ ಸುಧಾರಿಸುವ ಕ್ರಮ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಸಹಾಯಕವಾಗುತ್ತದೆ. ಉಪನ್ಯಾಸಕರ ಮತ್ತು ಪಾಲಕರ ನಡುವೆ ಸಮನ್ವಯ ಸಾಧಿಸಲು ಪಾಲಕರ ಸಭೆ ಅಗತ್ಯವಾಗಿದೆ ಎಂದರು.ಪಾಲಕರಾದ ಮಕ್ತುಮಸಾಬ ಮಕಾನದಾರ, ನಾಹೀದಾಅಖ್ತರ ಅವಟಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಪ್ರಾಚಾರ್ಯ ಈರಣ್ಣ ಹಾದಿಮನಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.ಸಯ್ಯದ ಹುಸೇನ ಹುಬ್ಬಳ್ಳಿ ಕುರಾನ್ ಪಠಿಸಿದರು. ಎ.ಬಿ. ಕೊಟಗಿ ನಿರೂಪಿಸಿದರು. ಎಂ.ಎಂ. ಶಿರಹಟ್ಟಿ ವಂದಿಸಿದರು. ಆಡಳಿತ ಮಂಡಳಿಯ ಸದಸ್ಯರಾದ ಶಾನವಾಜ ಉಮಚಗಿ, ಎಂ.ಎ. ಹಣಗಿ, ಆರ್.ಎಂ. ಬಾಗಲಕೋಟ, ಎಸ್.ಎ. ಬಿಜಾಪೂರ ಹಾಗೂ ಮಹಾವಿದ್ಯಾಲಯದ ಎಲ್ಲ ಉಪನ್ಯಾಸಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು