ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಜಗತ್ತಿನಲ್ಲಿ ಅನ್ಯಾಯ ಅಧರ್ಮಗಳು ಮೇರೆ ಮೀರಿ ಹಿಂಸೆ ಹೆಚ್ಚಾಗುವುದೋ ಆಗ ನಾನು ಧರ್ಮ ರಕ್ಷಣೆಗೆ, ಶಿಷ್ಟರ ಉಳಿವಿಗೆ ಮತ್ತೆ ಅವತಾರ ಎತ್ತಿ ಬರುತ್ತೆನೆಂದು ಶ್ರೀಕೃಷ್ಣ ಅಭಯ ನೀಡಿದ್ದು ಎಷ್ಟು ಸತ್ಯವೋ? ಶ್ರೀ ರಾಮ ಅವತರಿಸಿದ್ದು ಅಷ್ಟೇ ಸತ್ಯ ಎಂದು ಶಾಸಕ ಸಿದ್ದು ಸವದಿ ಹೇಳಿದರು.ನಗರದ ಬಸ್ ನಿಲ್ದಾಣದ ಎದುರುಗಡೆ ಇರುವ ರಾಜ್ಯದ ಎರಡನೆಯ ಅತೀ ಹಳೆಯ ಅನ್ನಪೂರ್ಣೇಶ್ವರಿ ಮಂದಿರದಲ್ಲಿ ಸಂಜೆ 7 ಗಂಟೆಗೆ ಶ್ರೀ ರಾಮೋತ್ಸವ ಪ್ರಯುಕ್ತ ನಡೆದ ಡಿಪೋತ್ಸದಲ್ಲಿ ಮಾತನಾಡಿರು.
ಪುರಸಭೆ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯ ಶೇಖರ ಅಂಗಡಿ ಮಾತನಾಡಿ, 500 ವರ್ಷಗಳ ನಂತರ ನಾವು ರಾಮನನ್ನು ಕಣ್ತುಂಬಿಕೊಳ್ಳುವ ಭಾಗ್ಯ ನನಸಾಗಿದ್ದು, ನಮ್ಮೆಲ್ಲರ ಭಾಗ್ಯ. ದೇಶ ಇಂದು ರಾಮರಾಜ್ಯವನ್ನು ಮತ್ತೆ ನೋಡುವ ಭಾಗ್ಯ ಒದಗಿದ್ದು ಲಕ್ಷಾಂತರ ಕರ ಸೇವಕರ ತ್ಯಾಗ, ಬಲಿದಾನದ ಫಲ. ಈ ಸಂಧರ್ಭ ಅವರನ್ನು ನೆನೆಯುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.ಪುರಸಭೆ ಸದಸ್ಯ ರವಿ ಜವಳಗಿ ಮಾತನಾಡಿದರು. ನಗರದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆ 6 ಗಂಟೆಯಿಂದ ಜಟೋತ್ಸವ, ರಾಮಭಜನೆ ಸಂಗೀತ ಸುಧೆ, ಜೆ.ಸಿ. ಶಾಲೆಯ ಮಕ್ಕಳಿಂದ ರಾಮಾಯಣ ಕಿರುನಾಟಕ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಮುಂಜಾನೆ ಅಲ್ಪೋಪಹಾರ, ಮಧ್ಯಾಹ್ನ ಮಹಾಪ್ರಸಾದ ವ್ಯವಸ್ಥೆಯನ್ನು ಮಂತ್ರಾಲಯ ಪಾದಯಾತ್ರಾ ಸಮಿತಿಯವರು ಮಾಡಿಸಿದ್ದರು. ನಗರದ ಎಲ್ಲ ದೇವಸ್ಥಾನ, ಮನೆಗಳಲ್ಲಿ ದಿಪೋತ್ಸವ ನಡೆಯಿತು.
ಪ್ರಲ್ಹಾದ ಸಣ್ಣಕ್ಕಿ ಶಿವಾನಂದ ಅಂಗಡಿ, ಶಂಭು ಬಡಿಗೇರ, ಮಹಾದೇವ ಪುಕಾಳೆ, ರಾಘು ಗರಗಟಗಿ, ಶಿವಾನಂದ ಹುಣಶ್ಯಾಳ, ಸುರೇಶ ಶೆಟ್ಟಿ, ಶಿವಲಿಂಗ ಟಿರ್ಕೆ, ಅರ್ಜುನ್ ಪವಾರ, ಜಿ.ಎಸ್. ಗೊಂಬಿ, ಚಂದ್ರು ನಿಂಬರಗಿ, ರಮೇಶಣ್ಣ ಕೆಸರಗೋಪ್ಪ, ಶಂಕರಗೌಡ ಪಾಟೀಲ, ವಿಜಯ ಕುಳ್ಳೊಳ್ಳಿ, ಲಕ್ಷ್ಮಣ ಟಕ್ಕಣ್ಣವರ, ಸುರೇಶ ನಿಂಬರಗಿ, ವಿಜಯ ಕಂಬಾರ, ಪುಂಡಲೀಕ ಗಡೆಕಾರ, ರಾಜೇಂದ್ರ ಮಿರ್ಜಿ, ಮನೋಹರ ಶಿರೋಳ, ಶ್ರೀಶೈಲ ಮಠ, ಮಹಾಲಿಂಗ ಕಂಕಣವಾಡಿ, ಸಂಜು ಬಾರಕೊಲ, ಸಚಿನ್ ಕಲಮಡಿ, ಅಭಿ ಲಮಾಣಿ, ಬಸವರಾಜ ಮಡಿವಾಳ, ಚನ್ನು ಆರೆಗಾರ, ದತ್ತ ಯರಗಟ್ಟಿಕರ, ಮಹಾಲಿಂಗ ದೇಸಾಯಿ, ಶೇಖರ ಮಗದುಮ್ಮ, ಬೈರೇಶ ಆದ್ದೆಪ್ಪನ್ನವರ, ದಾನೇಶ ಡೊಂಬರ, ಆನಂದ ಬಂಡಿಗಣಿ, ಸಂದೀಪ ಸೋರಗೊಂಡ, ಬಸು ಮುರಾರಿ, ರಾಘು ಪವಾರ, ಅಕ್ಷಯ ಜಳ್ಳಿ, ವಿನಾಯಕ ಗುಂಜಗಾಂವಿ, ಸುರೇಶ ಕೊಣ್ಣೂರ, ಅಭಿಷೇಕ ಸೊನ್ನದ, ಆನಂದ ಸಿರಗುಪ್ಪಿ ಸೇರಿದಂತೆ ಮಹಾಲಿಂಗಪುರದ ಸುತ್ತಮುತ್ತಲಿನ ಸಾವಿರಾರು ಜನ ಗುರು-ಹಿರಿಯರು ಮತ್ತು ನೂರಾರು ಹಿಂದು ಸಂಘಟನೆಯ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.