ಅಯೋಧ್ಯ ರಾಮ ಮಂದಿರದ ಸ್ತಬ್ಧ ಚಿತ್ರ ತನ್ನ ಜನ ಮನ ಸೆಳೆಯುವಲ್ಲಿ ಯಶಸ್ವಿಯಾಯಿತು.
ಕನ್ನಡಪ್ರಭ ವಾರ್ತೆ ಬೈಂದೂರು
ಇಲ್ಲಿನ ಗಂಗೊಳ್ಳಿಯ ಸಾರ್ವಜನಿಕ ಶ್ರೀ ಶಾರದೋತ್ಸವದ ಸುವರ್ಣ ಮಹೋತ್ಸವದ ಮೆರವಣಿಗೆಯಲ್ಲಿ ಗಂಗೊಳ್ಳಿಯ ಟೀಮ್ ವಿಶ್ವಸಾಗರ ಪ್ರದರ್ಶಿಸಿದ ಅಯೋಧ್ಯ ರಾಮ ಮಂದಿರದ ಸ್ತಬ್ಧ ಚಿತ್ರ ತನ್ನ ಸೌಂದರ್ಯದಿಂದ ಜನಮನ ಸೆಳೆಯುವಲ್ಲಿ ಯಶಸ್ವಿಯಾಯಿತು.
ಧನುರ್ಧಾರಿ ರಾಮನ ಪ್ರತಿಕೃತಿ ಮತ್ತು ರಾಮ ಸ್ಮರಣೆಯ ಮೌಲಿಕ ನುಡಿಗಳ ಜೊತೆಯಲ್ಲಿ ಇತ್ತೀಚೆಗಷ್ಟೇ ನಿಧನರಾದ ಪ್ರಾಮಾಣಿಕತೆ ಮತ್ತು ಯಶಸ್ಸಿನ ಪ್ರೇರಕ ಶಕ್ತಿಯಾಗಿ ದೇಶದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ ರತನ್ ಟಾಟಾ ಅವರ ಭಾವಚಿತ್ರವನ್ನು ಬಳಸಿಕೊಂಡು ನುಡಿ ನಮನಗಳನ್ನು ಸಲ್ಲಿಸಿದ್ದು ವಿಶೇಷವಾಗಿ ಗಮನ ಸೆಳೆಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.