ಕಿನ್ನಿಗೋಳಿ ಶ್ರೀರಾಮ ಮಂದಿರದಲ್ಲಿ ರಾಮ ನವಮಿ

KannadaprabhaNewsNetwork |  
Published : Apr 18, 2024, 02:22 AM IST
ಕಿನ್ನಿಗೋಳಿ ಶ್ರೀ ರಾಮ ಮಂದಿರರಾಮ ನವಮಿ ಉತ್ಸವ | Kannada Prabha

ಸಾರಾಂಶ

ಶ್ರೀ ಬಾಲರಾಮ ದೇವರನ್ನು ತೊಟ್ಟಿಲಿಗೆ ಹಾಕುವುದು, ಮಹಾಪೂಜೆ ನಂತರ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.

ಮೂಲ್ಕಿ:

ಕಿನ್ನಿಗೋಳಿ ಶ್ರೀ ರಾಮ ಮಂದಿರದಲ್ಲಿ ಶ್ರೀರಾಮ ನವಮಿ ಕಾರ್ಯಕ್ರಮ ನಡೆಯಿತು. ಬೆಳಗ್ಗೆ ಮಂದಿರದಲ್ಲಿ ಪ್ರಾರ್ಥನೆ ನಂತರ ಶ್ರೀ ರಾಮ ಮಂದಿರದಿಂದ ಭವ್ಯ ಶೋಭಾಯಾತ್ರೆ ಹೊರಟು ಯಶವಂತ್ ರಾವ್ ಅವರ ಮನೆಯವರೆಗೆ ಹೋಗಿ ಮರಳಿ ಶ್ರೀ ರಾಮ ಮಂದಿರ ತನಕ ನಡೆಯಿತು. ಬಳಿಕ ಶ್ರೀ ಬಾಲರಾಮ ದೇವರನ್ನು ತೊಟ್ಟಿಲಿಗೆ ಹಾಕುವುದು, ಮಹಾಪೂಜೆ ನಂತರ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಕಿನ್ನಿಗೋಳಿ ಜಿಎಸ್‌ಬಿ ಅಧ್ಯಕ್ಷ ರಾಜೇಶ್ ನಾಯಕ್ , ಕಿನ್ನಿಗೋಳಿ ರಾಮ ಮಂದಿರದ ಪ್ರಧಾನ ಅರ್ಚಕ ವೇದಮೂರ್ತಿ ಗಿರೀಶ್‌ ಭಟ್‌, ಆಡಳಿತ ಮಂಡಳಿಯ ಕಾರ್ಯದರ್ಶಿ ರಾಧಾಕೃಷ್ಣ ನಾಯಕ್, ಉಪಾಧ್ಯಕ್ಷ ಅದಿತ್ಯಕಾಮತ್, ಕೋಶಾಧಿಕಾರಿ ಮಂಜುನಾಥ ಮಲ್ಯ, ಆಡಳಿತ ಮಂಡಳಿಯ ಸದಸ್ಯರು, ಮಾತೃ ಮಂಡಳಿಯ ಭಾರತೀ ಶೆಣೈ ಸದಸ್ಯರು ಮತ್ತಿತರರಿದ್ದರು. ಅಶ್ವತ್ಥಪುರದಲ್ಲಿ ಶ್ರೀರಾಮೋತ್ಸವಮೂಡುಬಿದಿರೆ: ಇಲ್ಲಿಗೆ ಸಮೀಪದ ಅಶ್ವತ್ಥಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಏ. 9ರಿಂದ ಪ್ರಾರಂಭವಾಗಿರುವ ಶ್ರೀ ರಾಮೋತ್ಸವ 19ರ ವರೆಗೆ ನಡೆಯಲಿದೆ. ಏ.17ರಂದು ಬುಧವಾರ ಮಧ್ಯಾಹ್ನ 12.06ಕ್ಕೆ ಶ್ರೀರಾಮ ಜನ್ಮೋತ್ಸವ, ರಾತ್ರಿ ಉತ್ಸವ, ಪುಷ್ಪರಥೋತ್ಸವ ನಡೆಯಲಿದೆ.‌ 18ರಂದು ಮಧ್ಯಾಹ್ನ ಹಗಲು ತೇರು, ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ ಉತ್ಸವ, ಬ್ರಹ್ಮರಥೋತ್ಸವ ನಡೆಯಲಿದ್ದು, 19ರಂದು ಅವಭೃತ, ಧ್ವಜಾವರೋಹಣ ನಡೆಯಲಿದೆ. ಪ್ರತಿದಿನ ಸಂಜೆ 6.30ರಿಂದ ಚಂದ್ರಕಾಂತ ಭಟ್ ಅವರಿಂದ ಕಥಾಕೀರ್ತನೆ, 17ರಂದು ಸಂಜೆ 6ರಿಂದ ಕರ್ಜತ್ ಅರುಣ್ ಗಾಂಗಲ್ ಮತ್ತು ಸ್ವರಪ್ರಿಯಾ ಬೆಹ್ರೆ ಬಳಗದವರಿಂದ ಭಜನ್ ಸಂಧ್ಯಾ ಹಾಗೂ 18ರಂದು ಸಂಜೆ 6.30ರಿಂದ ಬೆಂಗಳೂರು ವೇದಾಂತ ಮಾಲಾ ಕಲಾಕುಟೀರ ಕಲಾವಿದರಿಂದ ದಶಾವತಾರಿ ನವರಸ ರಾಮ ನಾಟ್ಯ ವೈಭವ ನಡೆಯಲಿದೆ ಎಂದು ಶ್ರೀ ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆ್ಯಸಿಡ್‌ ದಾಳಿ ಸಂತ್ರಸ್ತರಿಗೆ ಮಾಸಿಕ 50 ಸಾವಿರ ಪಿಂಚಣಿ : ಪರಂ ಭರವಸೆ
5 ಪಾಲಿಕೆಗೆ ಜಿಎಸ್‌ಟಿಯಲ್ಲಿ ಪಾಲು ಕೊಡಲು ಆಯೋಗ ಶಿಫಾರಸು