ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಈದ್ಗಾ ಮೈದಾನದಲ್ಲಿ ಜಾಮೀಯಾ ಮಸೀದಿಯ ಹಾಫೀಜ್ ಮಹ್ಮದಅಲಿ ಮಿಲಿ ಅವರು ಸಾಮೂಹಿಕ ಪ್ರಾರ್ಥನೆ ಮಾಡಿಸಿದರು.
ಈ ಸಂದರ್ಭದಲ್ಲಿ ಎಂ.ಡಿ.ಬಳಗಾನೂರ ಮಾತನಾಡಿ, ರಂಜಾನ್ ತಿಂಗಳಲ್ಲಿ ಒಂದು ತಿಂಗಳ ಕಾಲ ನಮ್ಮ ಬಾಂಧವರು ಉಪವಾಸ ಇರುವುದು ಒಂದು ತರಬೇತಿಯಿದ್ದಂತೆ. ಈ ಅವಧಿಯಲ್ಲಿ ತಮ್ಮ ಆತ್ಮವನ್ನು ಶುದ್ಧಿ ಮಾಡಿಕೊಂಡಂತೆ. ಉಳಿದ ಅವಧಿಯಲ್ಲಿ ಇದೇ ಮನಸ್ಥಿತಿಯಲ್ಲಿ ಇದ್ದು ಎಲ್ಲ ಬಾಂಧವರು ಉತ್ತಮ ಜೀವನ ನಡೆಸುವಂತಾಗಬೇಕು. ದೀನ-ದಲಿತ ಬಡವರ ನಿರ್ಗತಿಕರ, ನಿರಾಶ್ರಿತರ, ವಿಧವೆಯರ ಸ್ಥಿತಿಗತಿ ಅರಿತು ಅವರಿಗೆ ಸಹಾಯಧನ ನೀಡಬೇಕು. ದೇಶದಲ್ಲಿ ಹಬ್ಬದ ಆಚರಣೆ ಎಲ್ಲ ಧರ್ಮದಂತೆ ಆಚರಣೆ ಮಾಡಬೇಕು. ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ಸೌಹಾರ್ದ, ಪರಧರ್ಮ ಸಹಿಷ್ಣುತೆಗೆ ಸಾಕ್ಷಿಯಾಗಬೇಕು. ಈ ಹಬ್ಬವು ಸಹಾನುಭೂತಿ, ಪರಸ್ಪರ ಸಹಾಯ ಮಾಡುವ ಸಂದೇಶ ಸಾರುವ ಜೊತೆಗೆ ದೇಶದಲ್ಲಿ ಶಾಂತಿ, ಸುವ್ಯವಸ್ಥೆಯಿಂದ ಇರಬೇಕೆಂದು ಹೇಳುತ್ತದೆ. ಎಲ್ಲರೂ ಸಂತಸ ಜೀವನ ತಮ್ಮದಾಗಿಸಿಕೊಳ್ಳಬೇಕೆಂದರು.ಸಾಮೂಹಿಕ ಪ್ರಾರ್ಥನೆಯಲ್ಲಿ ಜಾಮೀಯಾ ಮಸೀದಿ ಅಧ್ಯಕ್ಷ ಶಬ್ಬಿರಅಹ್ಮದ ನದಾಫ್, ಕಮಲಸಾಬ ಕೊರಬು,ಅಲ್ತಾಫ್ ಮುದ್ದೇಬಿಹಾಳ, ಎಚ್.ಆರ್.ಬಾಗವಾನ, ಅಬ್ದುಲರಜಾಕ ಬಾಗವಾನ, ಮತಾಬ ಬಮ್ಮನಹಳ್ಳಿ, ಜಾಫರ ಮಕಾನದಾರ, ಚಾಂದಬಾಷಾ ಕೊರಬು, ರಫೀಕ್ ಹೊಕ್ರಾಣಿ, ಅಲ್ಲಾಭಕ್ಷ ಕೊರಬು, ಜಮ್ಮೀಲ್ ಇಬ್ರಾಹಿಂಪೂರ, ಮಹಿಬೂಬ ನಾಯ್ಕೋಡಿ, ಮನ್ನಾನ ಶಾಬಾದಿ, ಎಚ್.ಎಂ.ನದಾಫ,ಬಸೀರ ಮನಗೂಳಿ, ಬಂದೇನವಾಜ ನಂದವಾಡಗಿ, ನಜೀರ ಗಣಿ, ದಸ್ತಗೀರ ವಜ್ಜಲ, ರಮಜಾನ ಹೆಬ್ಬಾಳ, ಸಲೀಂ ಸಯ್ಯದ, ಅಬ್ದುಲರಜಾಕ ಕೊರಬು, ರಫೀಕ ಸಾಠಿ, ಅಬ್ದುಲ್ ರಶೀದ ಅವಟಿ, ಮೀರಾಸಾಬ ಕೊರಬು, ನಿಸಾರ ಚೌಧರಿ, ಮಹಿಬೂಬ ಗಣಿ ಸೇರಿದಂತೆ ಇತರರು ಭಾಗವಹಿಸಿದ್ದರು.