ಉತ್ತಮ ಆರೋಗ್ಯಕ್ಕೆ ರಂಜಾನ್‌ ಪೂರಕ

KannadaprabhaNewsNetwork |  
Published : Mar 10, 2025, 12:21 AM IST
ರಂಜಾನ್‌ | Kannada Prabha

ಸಾರಾಂಶ

ಮುದ್ದೇಬಿಹಾಳ: ರಂಜಾನ ಹಬ್ಬ ಮುಸ್ಲಿಂ ಬಾಂಧವರಿಗೆ ಪವಿತ್ರ ಹಬ್ಬವಾಗಿದೆ. ಮಾತ್ರವಲ್ಲದೇ ಮುಸ್ಲಿಂ ಸಮುದಾಯದ ಬಹುತೇಕ ಆಚರಣೆಗಳಿಗೆ ವೈಜ್ಞಾನಿಕ ಹಿನ್ನೆಲೆಯಿದೆ. ಇವು ಉತ್ತಮ ಆರೋಗ್ಯ ಹೊಂದಲು ಪೂರಕವಾಗಿವೆ. ಈ ಹಿನ್ನಲೆಯಲ್ಲಿ ಮಾ.12 ರಂದು ಸಂಜೆ 6 ಗಂಟೆಗೆ ಅಸ್ಕಿ ಫೌಂಡೇಷನ್‌ನಿಂದ ಮುಸ್ಲಿಂ ಬಾಂಧವರಿಗೆ ಮೈಬೂಬ ನಗರದ ಶಾದಿ ಹಾಲ್‌ನಲ್ಲಿ ಸಾರ್ವಜನಿಕ ಇಫ್ತಿಯಾರ್‌ ಕೂಟ ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್‌ ಮುಖಂಡ ಹಾಗೂ ಅಸ್ಕಿ ಫೌಂಡೇಷನ್‌ ಮುಖ್ಯಸ್ಥ ಸಿ.ಬಿ.ಅಸ್ಕಿ ಹೇಳಿದರು

ಮುದ್ದೇಬಿಹಾಳ: ರಂಜಾನ ಹಬ್ಬ ಮುಸ್ಲಿಂ ಬಾಂಧವರಿಗೆ ಪವಿತ್ರ ಹಬ್ಬವಾಗಿದೆ. ಮಾತ್ರವಲ್ಲದೇ ಮುಸ್ಲಿಂ ಸಮುದಾಯದ ಬಹುತೇಕ ಆಚರಣೆಗಳಿಗೆ ವೈಜ್ಞಾನಿಕ ಹಿನ್ನೆಲೆಯಿದೆ. ಇವು ಉತ್ತಮ ಆರೋಗ್ಯ ಹೊಂದಲು ಪೂರಕವಾಗಿವೆ. ಈ ಹಿನ್ನಲೆಯಲ್ಲಿ ಮಾ.12 ರಂದು ಸಂಜೆ 6 ಗಂಟೆಗೆ ಅಸ್ಕಿ ಫೌಂಡೇಷನ್‌ನಿಂದ ಮುಸ್ಲಿಂ ಬಾಂಧವರಿಗೆ ಮೈಬೂಬ ನಗರದ ಶಾದಿ ಹಾಲ್‌ನಲ್ಲಿ ಸಾರ್ವಜನಿಕ ಇಫ್ತಿಯಾರ್‌ ಕೂಟ ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್‌ ಮುಖಂಡ ಹಾಗೂ ಅಸ್ಕಿ ಫೌಂಡೇಷನ್‌ ಮುಖ್ಯಸ್ಥ ಸಿ.ಬಿ.ಅಸ್ಕಿ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಹಲವು ವರ್ಷಗಳಿಂದ ಅಸ್ಕಿ ಫೌಂಡೇಷನ್‌ನಿಂದ ರಕ್ತದಾನ ಶಿಬಿರ, ಉಚಿತ ಆರೋಗ್ಯ ಶಿಬಿರ ಹಿಂದೂಗಳ ಧಾರ್ಮಿಕ ಕಾರ್ಯಕ್ರಮ ಹೀಗೆ ಅನೇಕ ಸಾಮಾಜಿಕ ಸೇವೆ ಮಾಡುತ್ತಿದ್ದೇವೆ. ಅದರಂತೆ ಕಳೇದ 8 ವರ್ಷಗಳಿಂದ ರಂಜಾನ್‌ ಹಬ್ಬದ ಪ್ರಯುಕ್ತ ಉಪವಾಸ ವೃತ ಆಚಿಸುವ ಮುಸ್ಲಿಂ ಬಾಂಧವರಿಗೆ ಇಫ್ತಿಯಾರ್‌ ಕೂಟ ಏರ್ಪಡಿಸುವ ಮೂಲಕ ಹಿಂದೂ ಮುಸ್ಲಿಂ ಎನ್ನುವ ಬೇದಭಾವ ತೋರದೆ ಎಲ್ಲರೂ ಸಮಾನರೂ ಎನ್ನುವ ತತ್ವದಡಿಯಲ್ಲಿ ಈ ಸಾಮಾಜಿಕ ಕಾರ್ಯ ಮಾಡುತ್ತಿದೆ. ಸ್ಥಿತಿವಂತರು ದಾನ ಮಾಡುವುದು ಒಂದು ಸಂಪ್ರದಾಯವಾದರೆ, ಉಪವಾಸ ಮಾಡಿದರೆ ದೇಹದ ಆರೋಗ್ಯ ಉತ್ತಮವಾಗಿರುವುದು. ಇನ್ನೂ ಪ್ರಾರ್ಥನೆ ಸಲ್ಲಿಸಿ ಉಪವಾಸ ವೃತ ಸಲ್ಲಿಸುವವರಿಗೆ ಅಲ್ಪ ಇಫ್ತಿಯಾರ್‌ ಸೇವೆ ಮಾಡುತ್ತಿರುವುದು ಮನಸ್ಸಿಗೆ ಶಾಂತಿ ಲಭಿಸುತ್ತದೆ. ಎಲ್ಲ ಧರ್ಮಗಳ ಸಾರ ಒಂದೇ ಆಗಿದೆ. ಧಾರ್ಮಿಕ ಆಚರಣೆ ನೆಪದಲ್ಲಿ ಸೌಹಾರ್ದ ಕೂಟ ಹಮ್ಮಿಕೊಳ್ಳುವ ಮೂಲಕ ಪ್ರೀತಿ ವಿಶ್ವಾಸ ಗಟ್ಟಿಗೊಳ್ಳಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.ಈ ವೇಳೆ ಖಾಜಿ ಅಲ್ಲಾಭಕ್ಷ ಮೋಲಾನಾ, ಇಸಾಕ ಮಾಗಿ ಕಾರಿಸಾಬ, ಹುಸೇನ್ ಮೌಲಾನಾ ಚೌಧರಿ, ರಫೀಕ ಮೌಲಾನಾ ನದಾಫ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಜಬ್ಬಾರ ಗೊಲಂದಾಜ, ಮುನ್ನಾ ಮಕಾಂದಾರ, ಸಂಗಣ್ಣ ಮೇಲಿಮನಿ, ಹುಸೇನ ಮುಲ್ಲಾ, ದಾವಲ ಗೊಳಸಂಗಿ, ರಂಜಾನ ನದಾಫ ಸೇರಿದಂತೆ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಳವಿ ಮಹಾರಥೋತ್ಸವ ಸಂಪನ್ನ
ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ: ಹರಿಹರಪುರ ಶ್ರೀ