ಮುಂಡಗೋಡ: ವಿದ್ಯುತ್ ಉತ್ಪಾದನೆ, ಅಣೆಕಟ್ಟು ನಿರ್ಮಾಣ, ಬಸ್ ಸಂಪರ್ಕ ಸೇರಿದಂತೆ ಹಲವು ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ರಾಜ್ಯಕ್ಕೆ ನೀಡಿದ ಕೊಡುಗೆ ಅಪಾರ ಎಂದು ಜಿಲ್ಲಾ ಅನಿಲ ವಿತರಕರ ಸಂಘದ ಅಧ್ಯಕ್ಷ ಬಸವರಾಜ ಓಶಿಮಠ ಹೇಳಿದರು.
ತಮ್ಮ ಕುಟುಂಬದ ಸದಸ್ಯರು ರಾಜಕೀಯ ಪ್ರವೇಶ ಮಾಡದಂತೆ ರಾಜಕಾರಣ ಮಾಡಿದ ಮುತ್ಸದ್ಧಿಯಾಗಿದ್ದರು. ಒಂದು ಆರೋಪ ಬರುತ್ತಿದ್ದಂತೆ ೨ ಬಾರಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ತಮ್ಮನ್ನು ತಾವು ಪರೀಕ್ಷೆಗೊಳಪಡಿಸಿ ಆರೋಪದಿಂದ ನಿರಾಧಾರಪಡಿಸಿದವರು. ಆದರೆ ಅವರ ಗರಡಿಯಲ್ಲಿ ಬೆಳೆದ ಇಂದಿನ ರಾಜಕಾರಣಿಗಳು ನೂರಾರು ಕೋಟಿ ಹಗರಣ ಮಾಡಿಯೂ ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದಂತೆ ನಟಿಸುತ್ತಾರೆ. ಇದು ನಿಜಕ್ಕೂ ರಾಜ್ಯದ ದುರ್ದೈವ. ರಾಮಕೃಷ್ಣ ಹೆಗಡೆ ಅವರ ತತ್ವ ಸಿದ್ಧಾಂತ, ಆದರ್ಶಗಳು ಪ್ರತಿಯೊಬ್ಬರಿಗೆ ದಾರಿದೀಪವಾಗಬೇಕಾದರೆ ಅವರ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಅನ್ನದಾತ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಅಧ್ಯಕ್ಷ ಚಿದಾನಂದ ಹರಿಜನ, ಹನುಮಂತಪ್ಪ ಆರೇಗೊಪ್ಪ, ಗೋವಿಂದಪ್ಪ ಬೆಂಡಲಗಟ್ಟಿ, ಎಸ್ ಎಸ್ ಪಾಟೀಲ್, ಮಾರ್ಟಿನ್ ಬಳ್ಳಾರಿ, ಕೇಮ್ಮಣ್ಣ ಡಾಕಪ್ಪ ಲಮಾಣಿ, ರೈತ ಮುಖಂಡರಾದ ಮಂಜುನಾಥ್ ಕುರ್ತಕೋಟಿ, ಗಣಪತಿ ಹಳೂರ ಯಲ್ಲವ ಭೋವಿ, ಪ್ರಶಾಂತ ಕರಿಗಾರ, ಗಿರಿದಾಸ್ ಕರ್ಜಗಿ ಉಪಸ್ಥಿತರಿದ್ದರು.ಮುಂಡಗೋಡ ಪಟ್ಟಣದ ಗುರು ಗೋವಿಂದ ಭಟ್ರು ಮತ್ತು ಸಂತ ಶಿಶುನಾಳ ಶರೀಫರ ಸಭಾ ಭವನದಲ್ಲಿ ರಾಮಕೃಷ್ಣ ಹೆಗಡೆ ಜನ್ಮದಿನ ಆಚರಿಸಲಾಯಿತು.