ದಿನಕ್ಕೊಂದು ಪ್ರಶ್ನೆ, ವಾರಕ್ಕೊಂದು ಪರೀಕ್ಷೆ ನಡೆಸುವ ಕುರಿತು ಮಾಹಿತಿ ತಿಳಿಸಿದ ಅವರು, ಶೇ. 75ರಷ್ಟು ಹಾಜರಾತಿ ಇದ್ದರೆ ಮಾತ್ರ ಪರೀಕ್ಷೆ ಬರೆಯಲು ಅವಕಾಶವಿದೆ. ಆದ್ದರಿಂದ ಮಕ್ಕಳು ಶಾಲೆ ತಪ್ಪಿಸದಂತೆ ಪ್ರತಿದಿನ ಶಾಲೆಗೆ ಕಳುಹಿಸಬೇಕು.
ಕುಷ್ಟಗಿ:ತಾಲೂಕಿನ ಹಿರೇಬನ್ನಿಗೋಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಪಾಲಕರ ಸಭೆ ನಡೆಯಿತು.ಶಿಕ್ಷಕ ದಾವಲಸಾಬ್ ವಾಲಿಕಾರ ಮಾತನಾಡಿ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗಾಗಿ ವೇಕಪ್ ಕಾಲ್ ಮೂಲಕ ಮಕ್ಕಳನ್ನು ಎಚ್ಚರಿಸಿ ಅಭ್ಯಾಸದಲ್ಲಿ ತೊಡಗುವಂತೆ ಮಾಡಲಾಗುತ್ತಿದ್ದು ಈ ಕಾರ್ಯಕ್ರಮಕ್ಕೆ ಪಾಲಕರು ಸಹಕರಿಸಬೇಕು. ಬೆಳಗ್ಗೆ ವಿಶೇಷ ತರಗತಿ ನಡೆಸಲಾಗುತ್ತಿದ್ದು ಮಕ್ಕಳನ್ನು ಬೇಗ ಶಾಲೆಗೆ ಕಳುಹಿಸಬೇಕು ಎಂದು ಹೇಳಿದರು.
ಸಂಜೆ ಗುಂಪು ಅಧ್ಯಯನ, ಘಟಕ ಪರೀಕ್ಷೆ ನಡೆಸಿ ಪರಿಕಲ್ಪನೆಗಳನ್ನು ಸ್ಪಷ್ಟಪಡಿಸಿ ಅಭ್ಯಾಸ ಮಾಡಿಸುವುದು ಹಾಗೂ ವಿಷಯವಾರು ಕ್ವಿಜ್ ಹಮ್ಮಿಕೊಳ್ಳಲಾಗುತ್ತಿದೆ, ದಿನಕ್ಕೊಂದು ಪ್ರಶ್ನೆ, ವಾರಕ್ಕೊಂದು ಪರೀಕ್ಷೆ ನಡೆಸುವ ಕುರಿತು ಮಾಹಿತಿ ತಿಳಿಸಿದ ಅವರು, ಶೇ. 75ರಷ್ಟು ಹಾಜರಾತಿ ಇದ್ದರೆ ಮಾತ್ರ ಪರೀಕ್ಷೆ ಬರೆಯಲು ಅವಕಾಶವಿದೆ. ಆದ್ದರಿಂದ ಮಕ್ಕಳು ಶಾಲೆ ತಪ್ಪಿಸದಂತೆ ಪ್ರತಿದಿನ ಶಾಲೆಗೆ ಕಳುಹಿಸಬೇಕು. ಮಕ್ಕಳಿಗೆ ಮನೆಯಲ್ಲಿ ಓದಲು, ಬರೆಯಲು ಅವಕಾಶ ಮಾಡಿಕೊಡಬೇಕು ಎಂದರು.ಶಿಕ್ಷಕಿ ಪೂರ್ಣಿಮಾ ಮಾತನಾಡಿ, ಆಂಗ್ಲ ಭಾಷಾ ವಿಷಯವು ಕಲಿಯಲು ಸ್ವಲ್ಪ ಕಠಿಣವಾದರೂ ಹೆಚ್ಚು ಅಭ್ಯಾಸ ಮಾಡಿಸಲಾಗುತ್ತಿದೆ. ಮನೆಯಲ್ಲಿ ಶಾಲೆಯಲ್ಲಿ ನೀಡಿದ ಅಭ್ಯಾಸ ರೂಢಿ ಮಾಡುತ್ತಿದ್ದಾರೆ ಎಂದು ಖಚಿತಪಡಿಸಿಕೊಂಡು ಮಕ್ಕಳು ಸತತ ಅಭ್ಯಾಸಕ್ಕೆ ಪ್ರೇರೇಪಣೆ ನೀಡಲು ಪಾಲಕರಿಗೆ ಮನವಿ ಮಾಡಿಕೊಂಡರು. ಶಿಕ್ಷಕರಾದ ಈಶ್ವರಪ್ಪ ಚಕ್ರಸಾಲಿ, ಲಾಳೆಪಾಷಾ, ಪ್ರಶಾಂತ ಬನ್ನಿಗೋಳ ಅವರು ಶೈಕ್ಷಣಿಕ ಪ್ರಗತಿ ತಿಳಿಸಿ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಮನೆಯಲ್ಲಿ ಕಡಿಮೆ ಕೆಲಸ ನೀಡಿ ಓದಲು, ಬರೆಯಲು ಕಾಲಾವಕಾಶದ ಮೂಲಕ ಕಲಿಕಾ ವಾತಾವರಣ ನಿರ್ಮಿಸುವಂತೆ ತಿಳಿಸಿದರು.
ಪಾಲಕರ ಸಭೆಯಲ್ಲಿ ಮುಖ್ಯಶಿಕ್ಷಕ ಮಹಾಂತೇಶ ಜಾಲಿಗಿಡದ, ಎಸ್‌ಡಿಎಂಸಿ ಅಧ್ಯಕ್ಷ ಪ್ರಕಾಶ ಗೋಗೇರಿ, ಉಪಾಧ್ಯಕ್ಷ ರಮೇಶ, ಶಿಕ್ಷಣ ಪ್ರೇಮಿ ಬಸವಂತಪ್ಪ ಗದ್ದಿ ಸೇರಿದಂತೆ ಎಸ್‌ಡಿಎಂಸಿ ಸದಸ್ಯರು ಹಾಗೂ 90 ಜನ ಪಾಲಕರು ಉಪಸ್ಥಿತರಿದ್ದರು. ಅತಿಥಿ ಶಿಕ್ಷಕ ಸುನಿಲಕುಮಾರ ವಂದಿಸಿದರು.
ಶೇ. 100ರಷ್ಟು ಸಾಧನೆ ಗುರಿ
ಕಳೆದ ವರ್ಷ ಉತ್ತಮ ಸಹಕಾರ ನೀಡಿದ ಫಲವಾಗಿ 2025ರ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ. 75ರಷ್ಟು ಫಲಿತಾಂಶ ಪಡೆದು ಉತ್ತಮ ಸಾಧನೆ ದಾಖಲಿಸಲಾಗಿದೆ. ಈ ವರ್ಷವೂ ಕೂಡ ಶೇ. 100ರಷ್ಟು ಸಾಧನೆ ಗುರಿ ಹೊಂದಿದ್ದು ಈ ಕಾರ್ಯಕ್ಕೆ ಸಹಕಾರ ಒದಗಿಸಬೇಕು ಎಂದು ಶಿಕ್ಷಕರು ಪಾಲಕರಿಗೆ ಮನವಿ ಮಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.