ಕನ್ನಡಪ್ರಭ ವಾರ್ತೆ ಮೈಸೂರು
ರಾಮಕೃಷ್ಣನಗರದ ರಾಮಕೃಷ್ಣ ಪರಮಹಂಸ ವೃತ್ತದಲ್ಲಿ ಶ್ರೀ ರಾಮಕೃಷ್ಣ ಪರಮಹಂಸ ಸೇವಾ ಪ್ರತಿಷ್ಠಾನ ವತಿಯಿಂದ ಪ್ರತಿ ತಿಂಗಳ ಹುಣ್ಣಿಮೆಯಂದು ನಡೆಯುವ ನಾಲ್ಕನೆಯ ತಿಂಗಳ ತಿಳಿವು ಕಾರ್ಯಕ್ರಮದಲ್ಲಿ ಆಧುನಿಕ ಭಾರತದ ನಿರ್ಮಾಪಕ ಸ್ವಾಮಿ ವಿವೇಕಾನಂದ ಕುರಿತು ಅವರು ಮಾತನಾಡಿದರು.
ವೇದ ಉಪನಿಷತ್ತುಗಳಲ್ಲಿರುವ ನೈಜ ಆದ್ಯಾತ್ಮಿಕ ಅಂಶಗಳನ್ನು ರಾಷ್ಟ್ರಕ್ಕಲ್ಲದೆ ಇಡೀ ಪ್ರಪಂಚಕ್ಕೆ ಪರಿಚಯಿಸಿದ ವಿವೇಕಾನಂದರು, ಹಿಂದೂ ಧರ್ಮದ ಬಗ್ಗೆ ಇದ್ದ ತಪ್ಪು ಅಭಿಪ್ರಾಯಗಳನ್ನು ನಿವಾರಿಸಿ, ಭಾರತೀಯ ಸನಾತನ ಧರ್ಮ ಹೇಗೆ ಸರ್ವ ಮಾನ್ಯ ಎಂಬ ಅಂಶವನ್ನು ಅನಾವರಣಗೊಳಿಸಿದ ಮಹಾಪುರುಷ ಎಂದರು.ಜೀವನದಲ್ಲಿ ಶಿಸ್ತು, ಸಾಧಿಸಬೇಕೆಂಬ ಛಲ ಮತ್ತು ಸಾಮಾಜಿಕ ಕಳಕಳಿ ಮತ್ತು ಭಾರತದ ಶ್ರೇಷ್ಠತೆಯನ್ನು ಯುವಜನಾಂಗಕ್ಕೆ ಮನವರಿಕೆ ಮಾಡಿಕೊಟ್ಟು, ಯುವಜನತೆಯಲ್ಲಿ ಭವಿಷ್ಯ ಭಾರತದ ಕನಸು ಭಿತ್ತಿದ ಮಹಾಚೇತನ ಸ್ವಾಮಿ ವಿವೇಕಾನಂದರು ಎಂದು ಅವರು ಹೇಳಿದರು.
ಪ್ರತಿಷ್ಠಾನದ ಅಧ್ಯಕ್ಷ ಡಿ. ಮಾದೇಗೌಡ, ಕಾರ್ಯಾಧ್ಯಕ್ಷ ಡಾ.ಎಸ್.ಪಿ. ಯೋಗಣ್ಣ, ಖಜಾಂಚಿ ಬಸವಲಿಂಗಪ್ಪ, ಕಾರ್ಯದರ್ಶಿ ಕೆಂಪಲಿಂಗರಾಜು ಮೊದಲಾದವರು ಇದ್ದರು. ಉಪಾಧ್ಯಕ್ಷ ಪ್ರೊ. ಚಂದ್ರಶೇಖರ್ ಸ್ವಾಗತಿಸಿದರು. ಬಸವಣ್ಣ ವಂದಿಸಿದರು. ಗೋಪಿನಾಥ್ ನಿರೂಪಿಸಿದರು.