ಒಗ್ಗಟ್ಟು ಇದ್ದಲ್ಲಿ ಸವಲತ್ತು ಪಡೆಯಲು ಸಾಧ್ಯ

KannadaprabhaNewsNetwork |  
Published : Sep 24, 2026, 03:15 AM IST
27 | Kannada Prabha

ಸಾರಾಂಶ

ಸಮಾಜದಲ್ಲಿ ಯಾವ ವ್ಯಕ್ತಿಯೂ ಇಂತಹುದೇ ಜಾತಿಯಲ್ಲಿ ಹುಟ್ಟಬೇಕೆಂದು ಬಯಸಿ ಜನ್ಮ ತಾಳುವುದಿಲ್ಲ.

ಕನ್ನಡಪ್ರಭ ವಾರ್ತೆ ಮೈಸೂರುಯಾವುದೇ ಒಂದು ಸಮಾಜ ಒಗ್ಗಟ್ಟಾಗಿ ಮುಂದುವರಿದಲ್ಲಿ ಮಾತ್ರ ತನ್ನ ಸವಲತ್ತು ಪಡೆದುಕೊಳ್ಳಲು ಸಾಧ್ಯ ಎಂದು ಕೇಂದ್ರ ಸರ್ಕಾರದ ಯುವಜನ ವ್ಯವಹಾರ ಹಾಗೂ ಕ್ರೀಡಾ ಇಲಾಖೆಯ ನಿವೃತ್ತ ರಾಜ್ಯ ನಿರ್ದೇಶಕ ಎಂ.ಎನ್. ನಟರಾಜ್ ಅಭಿಪ್ರಾಯಪಟ್ಟರು. ರಾಮಕೃಷ್ಣನಗರದಲ್ಲಿ ನಡೆದ ನಗರದ ಎಚ್.ಡಿ.ಕೋಟೆ ತಾಲೂಕಿನ ನಾಮಧಾರಿಗೌಡ ಗೆಳೆಯರ ಬಳಗದ 10ನೇ ವಾರ್ಷಿಕೋತ್ಸವದಲ್ಲಿ ಮುಖ್ಯಅತಿಥಿಯಾಗಿ ಅವರು ಮಾತನಾಡಿ, ಸಮಾಜದಲ್ಲಿ ಯಾವ ವ್ಯಕ್ತಿಯೂ ಇಂತಹುದೇ ಜಾತಿಯಲ್ಲಿ ಹುಟ್ಟಬೇಕೆಂದು ಬಯಸಿ ಜನ್ಮ ತಾಳುವುದಿಲ್ಲ. ಆದರೆ ಎಲ್ಲ ಜನಾಂಗದಲ್ಲೂ ಕೂಡ ಅವರವರ ಸಮಾಜದ ಬಗ್ಗೆ ಹೆಮ್ಮೆ ಇದ್ದೇ ಇರುತ್ತದೆ. ನಮ್ಮ ನಾಮಧಾರಿಗೌಡ ಜನಾಂಗ ಬಹಳ ಹಿಂದುಳಿದಿದ್ದು ನಾವು ಒಗ್ಗಟ್ಟಾಗುವ ಜೊತೆ ಸಮಾಜಮುಖಿ ಚಿಂತನೆಗಳನ್ನು ರೂಢಿಸಿಕೊಂಡರೆ ಎಲ್ಲ ಸವಲತ್ತುಗಳನ್ನು ಪಡೆದು ಮುಂದೆ ಸಾಗಲು ಸಾಧ್ಯ ಎಂದರು.ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಎಸ್. ರೂಪೇಶ್ ಮಾತನಾಡಿ, ಸಂಘದ ಸದಸ್ಯರ ಸಲಹೆಯಂತೆ ಸಂಘವನ್ನ ಮತ್ತಷ್ಟು ಯಶಸ್ಸಿನತ್ತ ಕೊಂಡೊಯ್ಯಲಾಗುವುದು. ಜೊತೆಗೆ ಮುಂದಿನ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ಹೆಚ್ಚಿನ ಪುರಸ್ಕಾರ ನೀಡಲು ಕ್ರಮವಹಿಸಲಾಗುವುದು ಎಂದರು. ಶಿಕ್ಷಣ ಇಲಾಖೆಯಲ್ಲಿ ವೃತ್ತಿ ಶಿಕ್ಷಕರಾಗಿ 36 ವರ್ಷ ಸೇವೆ ಸಲ್ಲಿಸಿ ನಿವೃತ್ತ ಬಿ.ಎಸ್. ಸುಂದರರಾಜು ಅವರನ್ನು ಗೌರವಿಸಲಾಯಿತು. ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಾಧನೆ ಮಾಡಿರುವ ದರ್ಶನ್ ಮತ್ತು ಸ್ನೇಹ ಅವರನ್ನು ಸನ್ಮಾನಿಸಲಾಯಿತು. ‌ಎಚ್.ಡಿ. ಕೋಟೆ ತಾಲೂಕಿನ ನಾಮಧಾರಿಗೌಡ ಸಮಾಜದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಉತ್ತೀರ್ಣರಾಗಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಾದನಿಸರ್ಗ, ಐಶ್ವರ್ಯ, ಚಿರಂತ್, ಗಗನ್, ಪದ್ಮಶ್ರೀ, ವಿನಯ್, ಸುಪ್ರಿಯ ಶಂಕರಲಿಂಗ ಮತ್ತು ಶೀತಲ್ ಅವರಿಗೆ ತಲಾ 5 ಸಾವಿರ ರೂ.ಗಳಂತೆ ಪ್ರೋತ್ಸಾಹ ಧನ ನೀಡಿ ಸನ್ಮಾನಿಸಲಾಯಿತು. ಸಂಘದ ಉಸ್ತುವಾರಿ ಎಂ.ಎನ್. ಕೃಷ್ಣಪ್ಪ ವಾರ್ಷಿಕ ವರದಿ ಮಂಡಿಸಿದರು. ನಿವೃತ್ತ ಪಿಡಿಒ ಅಂಕಪ್ಪ, ನಾಗನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಮಹೇಶ್, ಎ.ಎಂ. ಗಿರೀಶ್, ಸುಂದರ್ ದಾಸ್, ಶ್ರೀಶೈಲ, ಲೇಖಕ ಕೆ.ವಿ. ಶಿವಕುಮಾರ್, ವಕೀಲ ನಾಗೇಂದ್ರ, ರಾಘವೇಂದ್ರ, ರವಿಕುಮಾರ್, ನಾಗೇಂದ್ರ, ಜನಾರ್ದನ್ ಇದ್ದರು. ಸಂಘದ ಕಾರ್ಯದರ್ಶಿ ಜ್ಯೋತಿಪ್ರಸಾದ್ ಸ್ವಾಗತಿಸಿ, ಎ.ವಿ. ವಿಜಯ್ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮುದಾಯದ ಸಮಸ್ಯೆ ಅರಿಯಲು ಸ್ಥಳೀಯ ಪರಿಸ್ಥಿತಿ ತಿಳಿಯಬೇಕು
ನಿಜವಾದ ಯಶಸ್ಸಿಗೆ ಜ್ಞಾನದಷ್ಟೇ ಜೀವನ ಮೌಲ್ಯಗಳು ಮುಖ್ಯ