ಭಾರತ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಉತ್ತುಂಗಕ್ಕೇರಲು ವಿವೇಕಾನಂದರ ಕೊಡುಗೆ ಅಪಾರ

KannadaprabhaNewsNetwork |  
Published : Feb 23, 2026, 01:15 AM IST
43 | Kannada Prabha

ಸಾರಾಂಶ

ರಾಮಕೃಷ್ಣರ ಬದುಕು ಸತ್ಯಕ್ಕೆ ಹತ್ತಿರವಾಗಿದ್ದವು. ನೊಂದವರಿಗೆ ಸಾಂತ್ವಾನ ಹೇಳುತ್ತಾ, ಬಡವರ ಕಷ್ಟ- ನಷ್ಟಗಳ ನಿವಾರಿಸುತ್ತ ನೊಂದವರ ಮನಸ್ಸಿಗೆ ಆಧ್ಯಾತ್ಮಿಕವಾಗಿ ನೆಮ್ಮದಿ ಸಿಗುವಂತೆ ಮಾಡಿದ ಕೀರ್ತಿ ಪರಮಹಂಸರಿಗೆ ಸಲ್ಲುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರು

ಭಾರತ ಆಧ್ಯಾತ್ಮಿಕ ಕ್ಷೇತ್ರದ ಉತ್ತುಂಗಕ್ಕೇರಲು ಶ್ರೀ ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದರು, ಮಾತಾ ಶಾರದಾ ದೇವಿಯವರು ನೀಡಿರುವ ಕೊಡುಗೆ ಅಪಾರ ಎಂದು ಸಾಹಿತಿ ಡಾ.ಕೆ. ಅನಂತರಾಮು ಅಭಿಪ್ರಾಯಪಟ್ಟರು.

ರಾಮಕೃಷ್ಣನಗರದ ಶ್ರೀ ರಾಮಕೃಷ್ಣ ಪರಮಹಂಸ ಸೇವಾ ಪ್ರತಿಷ್ಠಾನ ಹಾಗೂ ಶ್ರೀ ರಾಮಕೃಷ್ಣ ಪರಮಹಂಸ ಜಯಂತ್ಯೋತ್ಸವ ಪ್ರಯುಕ್ತ ಏರ್ಪಡಿಸಿದ್ದ ಶ್ರೀ ರಾಮಕೃಷ್ಣ ಪರಮಹಂಸ ಪ್ರಶಸ್ತಿ ಪ್ರದಾನ - 2026 ಹಾಗೂ ಅಧ್ಯಾತ್ಮಿಕ ಚಿಂತನ- ಮಂಥನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಶ್ರೀ ರಾಮಕೃಷ್ಣರ ಬದುಕು ಸತ್ಯಕ್ಕೆ ಹತ್ತಿರವಾಗಿದ್ದವು. ನೊಂದವರಿಗೆ ಸಾಂತ್ವಾನ ಹೇಳುತ್ತಾ, ಬಡವರ ಕಷ್ಟ- ನಷ್ಟಗಳ ನಿವಾರಿಸುತ್ತ ನೊಂದವರ ಮನಸ್ಸಿಗೆ ಆಧ್ಯಾತ್ಮಿಕವಾಗಿ ನೆಮ್ಮದಿ ಸಿಗುವಂತೆ ಮಾಡಿದ ಕೀರ್ತಿ ಪರಮಹಂಸರಿಗೆ ಸಲ್ಲುತ್ತದೆ. ಸ್ವಾಮಿ ವಿವೇಕಾನಂದರಿಗೆ ಸನ್ಯಾಸ ದೀಕ್ಷೆ ನೀಡಿ, ಅವರ ಮೂಲಕ ಭಾರತೀಯ ಅಧ್ಯಾತ್ಮ ಕ್ಷೇತ್ರವನ್ನು ಜಗತ್ತಿಗೆ ತಲುಪಿಸಿದ ಕೀರ್ತಿ ಪರಮಹಂಸರಿಗೆ ಸಲ್ಲುತ್ತದೆ ಎಂದರು.

ಸ್ವಾಮಿ ವಿವೇಕಾನಂದರು ಮೈಸೂರಿಗೆ ಆಗಮಿಸಿದ್ದ ವೇಳೆ ವಿಶ್ರಾಂತಿ ಪಡೆದಿದ್ದ ನಿರಂಜನ ಮಠ, ಇದೀಗ ವಿವೇಕ ಸ್ಮಾರಕವಾಗಿದೆ. ಇದಕ್ಕಾಗಿ ಭವ್ಯ ಕಟ್ಟಡ ನಿರ್ಮಾಣವಾಗುತ್ತಿದೆ. ಇದು ನಿರ್ಮಾಣವಾಗಲು ಅನೇಕರ ತ್ಯಾಗವಿದೆ. ಅದರಲ್ಲಿ ವಿಧಾನ ಪರಿಷತ್ ಸದಸ್ಯ ಡಿ. ಮಾದೇಗೌಡರ ಹೋರಾಟ ದೊಡ್ಡದು ಎಂದರು.

ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಡಾ.ಎಸ್.ಪಿ. ಯೋಗಣ್ಣ ಮಾತನಾಡಿದರು.

ಕಾರ್ಯಕ್ರಮದಲ್ಲಿ ಶ್ರೀ ರಾಮಕೃಷ್ಣಾಶ್ರಮದ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್, ಶಾಸಕ ಜಿ.ಟಿ. ದೇವೇಗೌಡ, ವಿದ್ಯಾವಿಕಾಸ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಕವೀಶ್ ಗೌಡ, ನಯನ ಕುಮಾರ್ ಆಸ್ಪತ್ರೆ ಅಧ್ಯಕ್ಷ ಕುಮಾರ್, ಉದ್ಯಮಿ ಮಹೇಶ್ಪ್ರಸಾದ್, ಪ್ರಕಾಶ್ಶೆಟ್ಟಿ, ಶಿವಕುಮಾರ್, ಕಾರ್ತಿಕ್ ಶ್ರೀಧರ್, ಮಹೇಶ್ ಜಂಬರ್ಗಿ, ಶ್ರೀ ರಾಮಕೃಷ್ಣ ಪರಮಹಂಸ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ಎಂ. ಬಸವಣ್ಣ, ಖಜಾಂಚಿ ಎಸ್. ಪುರುಷೋತ್ತಮ್, ಸಲಹೆಗಾರ ದೊರೆಸ್ವಾಮಿ, ಕಾರ್ಯದರ್ಶಿ ಕೆ. ಕೆಂಪಲಿಂಗರಾಜು, ಜಂಟಿ ಕಾರ್ಯದರ್ಶಿ ಬೋರೇಗೌಡ, ಉಪಾಧ್ಯಕ್ಷೆ ಮಂಜುಳಾ, ಸಹ ಕಾರ್ಯದರ್ಶಿ ರಾಧಿಕಾ, ಸದಸ್ಯರಾದ ಡಾ.ಎಲ್. ಸ್ವಾಮಿಗೌಡ, ಗೋಪಿನಾಥ್, ಅಮೃತಾ, ಪಿ. ರಶ್ಮಿ, ಆಶಾ, ಶ್ರೀನಾಥ್, ಎ.ಜಿ. ದಿನೇಶ್ ಗೌಡ, ಯಶವಂತ್, ರಾಕೇಶ್ ಭಟ್ ಮೊದಲಾದವರು ಇದ್ದರು.

ಕಾರ್ಯಕ್ರಮಕ್ಕೂ ಮುನ್ನ ಕಾ. ರಾಮೇಶ್ವರಪ್ಪ ತಂಡದಿಂದ ಜಾನಪದ ಗೀತೆ, ಶಿವಪ್ರಕಾಶ್ ಗುರೂಜಿ ತಂಡದಿಂದ ಗಾಂಧಾರ ವಿದ್ಯೆ ಪ್ರದರ್ಶನ ನಡೆಯಿತು.

-------------------

eom/mys/dnm/

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಿಪಟೂರಿನಲ್ಲಿ ೯.೦೬೫ ಕೆ.ಜಿ ಗಾಂಜಾ ಜಪ್ತಿ
ಚಕ್ರಭಾವಿ ವಿಎಸ್ಎಸ್ಎನ್ ಸೊಸೈಟಿ ಕೈ ವಶ