ರಾಮನಗರ: 63.70 ಲಕ್ಷ ಉಳಿತಾಯ ಬಜೆಟ್ ಮಂಡನೆ

KannadaprabhaNewsNetwork |  
Published : Mar 16, 2025, 01:45 AM IST
15ಕೆಆರ್ ಎಂಎನ್ 1.ಜೆಪಿಜಿರಾಮನಗರ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ)ರವರು 2025-26ನೇ ಸಾಲಿನ ಬಜೆಟ್ ಪ್ರತಿ ಪ್ರದರ್ಶಿಸುತ್ತಿರುವುದು. | Kannada Prabha

ಸಾರಾಂಶ

ರಾಮನಗರ: ಆಸ್ತಿ ತೆರಿಗೆ, ಕಟ್ಟಡ ಮತ್ತು ಉದ್ದಿಮೆ ಪರವಾನಗಿ ಶುಲ್ಕ ಹಾಗೂ ಕೇಂದ್ರ - ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಮೂಲಗಳಿಂದ ಹೆಚ್ಚಿನ ಧನಸಹಾಯ ನಿರೀಕ್ಷಿಸಿರುವ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ 2025-26ನೇ ಸಾಲಿನಲ್ಲಿ 63.70 ಲಕ್ಷ ಉಳಿತಾಯ ಬಜೆಟ್ ಶನಿವಾರ ಮಂಡಿಸಿದರು.

ರಾಮನಗರ: ಆಸ್ತಿ ತೆರಿಗೆ, ಕಟ್ಟಡ ಮತ್ತು ಉದ್ದಿಮೆ ಪರವಾನಗಿ ಶುಲ್ಕ ಹಾಗೂ ಕೇಂದ್ರ - ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಮೂಲಗಳಿಂದ ಹೆಚ್ಚಿನ ಧನಸಹಾಯ ನಿರೀಕ್ಷಿಸಿರುವ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ 2025-26ನೇ ಸಾಲಿನಲ್ಲಿ 63.70 ಲಕ್ಷ ಉಳಿತಾಯ ಬಜೆಟ್ ಶನಿವಾರ ಮಂಡಿಸಿದರು.

ನಗರಸಭೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಶೇಷಾದ್ರಿ ಮಂಡಿಸಿದ ಆಯವ್ಯಯದ ಮೇಲೆ ಸದಸ್ಯರು ಯಾವುದೇ ಚರ್ಚೆ ನಡೆಸದೆ ಮೇಜು ಕುಟ್ಟಿ ಒಪ್ಪಿಗೆ ನೀಡಿದರು. ಪ್ರಸಕ್ತ ಸಾಲಿನಲ್ಲಿ ಒಟ್ಟು 7821.34 ಲಕ್ಷ ಆದಾಯ ನಿರೀಕ್ಷಿಸಲಾಗಿದೆ. 7757.64 ಲಕ್ಷ ವೆಚ್ಚ ತೋರಿಸಲಾಗಿದ್ದು, ಅತ್ಯಲ್ಪ 63.70 ಲಕ್ಷ ನಿರೀಕ್ಷಿತ ಉಳಿತಾಯ ತೋರಿಸಲಾಗಿದೆ.

ನಗರಸಭೆಯ ಆಯವ್ಯಯದಲ್ಲಿ ಪ್ರಮುಖವಾಗಿ ವಿವಿಧ ಯೋಜನೆಗಳಡಿ ಬಿಡುಗಡೆಯಾಗಿ ವೆಚ್ಚವಾಗದ ಬ್ಯಾಂಕ್ ಶಿಲ್ಕು 669.75 ಲಕ್ಷ ಹಾಗೂ ಪ್ರಸಕ್ತ ಸಾಲಿನ ನಿರೀಕ್ಷಿತ ಆದಾಯ 7151.59 ಲಕ್ಷ ಸೇರಿದಂತೆ ಒಟ್ಟು 7821.34 ಲಕ್ಷ ರು.ಗಳಲ್ಲಿ ವಿವಿಧ ಉದ್ದೇಶಗಳಿಗೆ ವೆಚ್ಚ ಮಾಡಲು 7757.64 ಲಕ್ಷ ಮೀಸಲಿಡಲಾಗಿದೆ.

ಪ್ರಮುಖ ಆದಾಯಗಳು:

ವಾಣಿಜ್ಯ ಸಂಕೀರ್ಣಗಳಿಂದ ಬಾಡಿಗೆ 34 ಲಕ್ಷ, ಅಂಬೇಡ್ಕರ್ ಭವನ ಮತ್ತು ಪುರಭವನಗಳ ಬಾಡಿಗೆ 2.50 ಲಕ್ಷ, ಕಟ್ಟಡ ಪರವಾನಗಿ ಶುಲ್ಕದಿಂದ 40 ಲಕ್ಷ, ಉದ್ದಿಮೆ ಪರವಾನಗಿ ಶುಲ್ಕದಿಂದ 75 ಲಕ್ಷ, ಜಾತ್ರೆ, ಸಂತೆ, ನೆಲ ಬಾಡಿಗೆ 2 ಲಕ್ಷ, ವ್ಯಾಪಾರ ಪರವಾನಗಿಯ ಘನತ್ಯಾಜ್ಯ ಶುಲ್ಕ 50 ಲಕ್ಷ, ದಂಡ ಮತ್ತು ಜುಲ್ಮಾನೆಗಳಿಂದ 2.50 ಲಕ್ಷ , ಅನುಪಯುಕ್ತ ವಸ್ತುಗಳ ಮಾರಾಟದಿಂದ 5 ಲಕ್ಷ, ಹಳೇ ವಾಹನಗಳು ಮತ್ತು ಇತರೆ ಸಾಮಗ್ರಿಗಳ ಮಾರಾಟದಿಂದ 10 ಲಕ್ಷ ನಿರೀಕ್ಷಿಸಲಾಗಿದೆ.

ಜಾಹೀರಾತು ತೆರಿಗೆಯಿಂದ 5 ಲಕ್ಷ, ರಸ್ತೆ ಅಗೆತ ಮತ್ತು ಪುನಸ್ಥಾಪನೆ ಶುಲ್ಕ 50 ಲಕ್ಷ, ಟೆಂಡರ್ ಫಾರಂ ಮಾರಾಟದಿಂದ 75 ಸಾವಿರ, ಖಾತಾ ನಕಲು ಶುಲ್ಕ 5 ಲಕ್ಷ, ಖಾತಾ ಬದಲಾವಣೆ ಶುಲ್ಕ 15 ಲಕ್ಷ, ಬ್ಯಾಂಕ್ ಬಡ್ಡಿ 2.50 ಲಕ್ಷ, ಅಭಿವೃದ್ಧಿ ಶುಲ್ಕ 75 ಲಕ್ಷ, ಸ್ವಯಂಘೋಷಿತ ಆಸ್ತಿ ತೆರಿಗೆಯ ಆದಾಯ 7.50 ಕೋಟಿ, ದಂಡ ಮತ್ತು ಜುಲ್ಮಾನೆಗಳು - ಆಸ್ತಿ ತೆರಿಗೆ 1.50 ಕೋಟಿ, ಆಸ್ತಿ ತೆರಿಗೆಯೊಂದಿಗೆ ವಸೂಲಾಗುವ ಘನತ್ಯಾಜ್ಯ ನಿರ್ವಹಣಾ ಕರ 75 ಲಕ್ಷ, ನಮೂನೆ ಶುಲ್ಕಗಳು 4.50 ಲಕ್ಷ, ಉಪ ಕರಗಳ ಸಂಗ್ರಹಣ ಶುಲ್ಕ 15 ಲಕ್ಷ ಆದಾಯ ನಿರೀಕ್ಷೆ ಮಾಡಲಾಗಿದೆ.

ಪ್ರಮುಖ ವೆಚ್ಚಗಳು:

ಬಜೆಟ್‌ ವೆಚ್ಚದ ಬಾಬ್ತಿನಲ್ಲಿ ನಗರದಲ್ಲಿನ ರಸ್ತೆ ದುರಸ್ತಿ ಮತ್ತು ನಿರ್ವಹಣೆಗಾಗಿ 25 ಲಕ್ಷ, ಚರಂಡಿಗಳ ದುರಸ್ತಿ ಮತ್ತು ನಿರ್ವಹಣೆಗಾಗಿ 25 ಲಕ್ಷ, ಕಟ್ಟಡಗಳು - ಸಮುದಾಯ ಭವನಗಳ ದುರಸ್ತಿ ಮತ್ತು ನಿರ್ವಹಣೆಗಾಗಿ 25 ಲಕ್ಷ, ಬೀದಿ ದೀಪಗಳ ರಿಪೇರಿ ಮತ್ತು ನಿರ್ವಹಣೆಗಾಗಿ 20 ಲಕ್ಷ, ಬೀದಿ ದೀಪಗಳ ವಿದ್ಯುತ್ ಶುಲ್ಕಕ್ಕಾಗಿ 2.89 ಕೋಟಿ ಮೀಸಲಿಡಲಾಗಿದೆ.

ತೆರೆದ ಚರಂಡಿ ಹಾಗೂ ಸೇತುವೆಗಳ ದುರಸ್ತಿ - ನಿರ್ವಹಣೆಗಾಗಿ 15 ಲಕ್ಷ, ಬೀದಿ ನಾಯಿಗಳ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆಗಾಗಿ 20 ಲಕ್ಷ, ಘನತ್ಯಾಜ್ಯ ವಸ್ತುಗಳ ಹೊರಗುತ್ತಿಗೆ ನಿರ್ವಹಣೆಗಾಗಿ 36 ಲಕ್ಷ , ಪೌರ ಕಾರ್ಮಿಕರ ವೈದ್ಯಕೀಯ ವಿಮೆ ಮತ್ತು ತಪಾಸಣೆಗಾಗಿ 22 ಲಕ್ಷ, ನೀರು ಸರಬರಾಜು ಕಾಮಗಾರಿ ದುರಸ್ತಿ ಮತ್ತು ನಿರ್ವಹಣೆಗಾಗಿ 25 ಲಕ್ಷ, ಟ್ಯಾಂಕರ್ ನೀರು ಸರಬರಾಜಿಗೆ 5 ಲಕ್ಷ, ಒಳಚರಂಡಿ ದುರಸ್ತಿ ಮತ್ತು ನಿರ್ವಹಣೆಗಾಗಿ 75 ಲಕ್ಷ , ಶೌಚಾಲಯ ನಿರ್ವಹಣೆ 15 ಲಕ್ಷ, ಒಳಚರಂಡಿ ಹೊರಗುತ್ತಿಗೆ ನಿರ್ವಹಣೆ 35 ಲಕ್ಷ, ಉದ್ಯಾನವನ ದುರಸ್ತಿ - ನಿರ್ವಹಣೆ 20 ಲಕ್ಷ, ಹೊರ ಗುತ್ತಿಗೆ ನಿರ್ವಹಣಾ ವೆಚ್ಚ 10 ಲಕ್ಷ, ಎಸ್ಸಿಎಸ್ಟಿಗಳ ಕಲ್ಯಾಣ ಕಾರ್ಯಕ್ರಮಕ್ಕಾಗಿ 45 ಲಕ್ಷ, ಹಿಂದುಳಿದ ವರ್ಗಗಳ ಕಲ್ಯಾಣ ನಿಧಿಗೆ 25 ಲಕ್ಷ, ವಿಶೇಷ ಚೇತನರ ಕಲ್ಯಾಣ ನಿಧಿಗಾಗಿ 15 ಲಕ್ಷ ಹಾಗೂ ಡೇ ನಲ್ಮ್ ಯೋಜನೆಯಲ್ಲಿ ನೈಟ್ ಶೆಲ್ಟರ್‌ಗಾಗಿ 20 ಲಕ್ಷ ಮೀಸಲಿಡಲಾಗಿದೆ.

ಸಭೆಯಲ್ಲಿ ಉಪಾಧ್ಯಕ್ಷೆ ಆಯಿಷಾ ಬಾನು, ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಜ್ ಪಾಷ, ಆಯುಕ್ತ ಡಾ.ಜಯಣ್ಣ ಉಪಸ್ಥಿತರಿದ್ದರು.

15ಕೆಆರ್ ಎಂಎನ್ 1.ಜೆಪಿಜಿ

ರಾಮನಗರ ನಗರಸಭೆ ಅಧ್ಯಕ್ಷ ಶೇಷಾದ್ರಿ 2025-26ನೇ ಸಾಲಿನ ಬಜೆಟ್ ಪ್ರತಿ ಪ್ರದರ್ಶಿಸುತ್ತಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ