ರಾಮನಗರ: ಏಷ್ಯಾನೆಟ್ ಸುವರ್ಣ ನ್ಯೂಸ್ , ಕನ್ನಡಪ್ರಭ ಹಾಗೂ ಇಂಡ್ ವೇಲ್ಸ್ ಇನೋವೇಶನ್ಸ್ ಪ್ರೈವೆಟ್ ಲಿಮಿಟೆಡ್ ನವೆಂಬರ್ 13 ರಿಂದ 15ರವರೆಗೆ ಮೂರು ದಿನಗಳ ಕಾಲ ರೇಷ್ಮೆನಾಡಿನ ಜನತೆಗಾಗಿ ಆಯೋಜಿಸಿರುವ ಲೈಫ್‌ಸ್ಟೈಲ್, ಫ್ಯಾಷನ್ ಹಾಗೂ ಫುಡ್ ಫೆಸ್ಟಿವಲ್ ''''''''''''''''ರಾಮನಗರ ಸಂಭ್ರಮ'''''''''''''''' ಕ್ಕೆ ಸಿದ್ಧತೆಗಳು ಪೂರ್ಣಗೊಂಡಿದೆ.
ಈ ಮೇಳದಲ್ಲಿ ಕರ್ನಾಟಕದ ನೆಚ್ಚಿನ ತಿಂಡಿ ತಿನಿಸುಗಳ ರುಚಿಯನ್ನು ಸವಿಯುವ ಅವಕಾಶವಿದೆ. ಸಾಂಪ್ರದಾಯಿಕ ಹಾಗೂ ಆಧುನಿಕ ಆಹಾರ ಪದಾರ್ಥಗಳ ಸ್ಟಾಲ್‌ಗಳು, ಶಾಪಿಂಗ್‌ಗೆ ಅನುಕೂಲವಾಗುವಂತೆ ವೈವಿಧ್ಯಮಯ ಫ್ಯಾಷನ್ ವಸ್ತುಗಳು, ಬಟ್ಟೆ, ಆಭರಣ ಹಾಗೂ ಜೀವನಶೈಲಿ ಉತ್ಪನ್ನಗಳ ಮಾರಾಟ ನಡೆಯಲಿದೆ. ಜೊತೆಗೆ ಮನರಂಜನಾ ಕಾರ್ಯಕ್ರಮಗಳು, ಸಾಂಸ್ಕೃತಿಕ ಪ್ರದರ್ಶನಗಳು ಹಾಗೂ ಕುಟುಂಬ ಸಹಿತ ಆನಂದಿಸಬಹುದಾದ ವಿಶೇಷ ಆಕರ್ಷಣೆಗಳು ಇರಲಿವೆ.
ಸ್ಥಳೀಯ ವ್ಯಾಪಾರಿಗಳು, ಉದ್ಯಮಿಗಳು ಹಾಗು ಸ್ಟಾಲ್ ನಿರ್ವಾಹಕರಿಗೆ ಭಾಗವಹಿಸಲು ಅವಕಾಶ ನೀಡಲಾಗಿದೆ. ಸ್ಟಾಲ್ ಬುಕಿಂಗ್ ಮಾಡಲು 8971519734, 9986565888ಸಂಖ್ಯೆಗಳಿಗೆ ಸಂಪರ್ಕಿಸಬಹುದು. ರಾಮನಗರ ಜನತೆಯ ಉತ್ಸಾಹ, ಶಾಪಿಂಗ್ ಹಾಗು ರುಚಿಯ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಆಯೋಜಕರು ಈ ಸಂಭ್ರಮವನ್ನು ಏರ್ಪಡಿಸಿದ್ದಾರೆ. ಮೂರು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಭಾವಹಿಸುವಂತೆ ಜನರಿಗೆ ಮುಕ್ತ ಆಹ್ವಾನ ನೀಡಲಾಗಿದ್ದು, ಪ್ರವೇಶ ಉಚಿತವಾಗಿದೆ.ವಿವಿಧ ಸ್ಪರ್ಧೆಗಳು :
ಮೂರು ದಿನಗಳ ಕಾರ್ಯಕ್ರಮದಲ್ಲಿ ಕಿರುತೆರೆ ಮತ್ತು ಚಲನಚಿತ್ರ ನಟ ನಟಿಯರು ಭಾಗವಹಿಸಿ ರಾಮನಗರ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲಿದ್ದಾರೆ.
ಬಾಕ್ಸ್............
ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ವತಿಯಿಂದ ರಾಮನಗರದಲ್ಲಿ ನವೆಂಬರ್ 13ರಿಂದ 15ರವರೆಗೆ ಆಯೋಜಿಸಿರುವ ರಾಮನಗರ ಸಂಭ್ರಮಕ್ಕೆ ಶಾಸಕ ಇಕ್ಬಾಲ್ ಹುಸೇನ್ ಚಾಲನೆ ನೀಡಲಿದ್ದಾರೆ.
ಗಣೇಶ್ ಜ್ಯುವೆಲರ್ಸ್ ಮಾಲೀಕ ಲಕ್ಷ್ಮಣ್ , ಶಾಂತಿನಿಕೇತನ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಕಾರ್ಯದರ್ಶಿ ಕುಮಾರಸ್ವಾಮಿ, ನಗರಸಭೆ ಮಾಜಿ ಸದಸ್ಯ ಬೈರೇಗೌಡ ಮತ್ತಿತರರು ಭಾಗವಹಿಸುವರು.
12ಕೆಆರ್ ಎಂಎನ್ 2.ಜೆಪಿಜಿ