ರಾಮನಾಥಪುರ ಹರಾಜು ಮಾರುಕಟ್ಟೆಯಲ್ಲಿ ನಡೆದ ವಹಿವಾಟು ನಂತರ ಕಚೇರಿಯಲ್ಲಿ ಮಾತನಾಡಿದ ಅವರು ಪ್ಲಾಟ್‌ಫಾರಂ 7 ರಲ್ಲಿ 18 ಬೇಲ್ ಗಳು ಬಂದಿದ್ದು, 2330 ಕೆ.ಜಿ ತಂಬಾಕು ಬಂದಿದ್ದು 6 ಲಕ್ಷ 26 ಸಾವಿರದ 400 ರು. ವಹಿವಾಟು ನಡೆದಿದ್ದು ಸರಸರಿ 270 ರು. ಬೆಲೆ ಸಿಕ್ಕಿದೆ. ಪ್ಲಾಟ್‌ಫಾರಂ 63ರಲ್ಲಿ 18 ಬೇಲ್‌ಗಳು ಬಂದಿದ್ದು, 2297 ಕೆ.ಜಿ. ವಹಿವಾಟು ಬಂದಿದ್ದು, 6 ಲಕ್ಷ 20 ಸಾವಿರ 190 ರು. ವಹಿವಾಟು ನಡೆದು ಸರಾಸರಿ 270 ರು. ಬೆಲೆ ಸಿಕ್ಕಿದೆ. ತಂಬಾಕು ಕೊಳ್ಳಲು 5 ಕಂಪನಿಯವರು ಬಂದಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ತಂಬಾಕು ಕೊಳ್ಳುವ ಕಂಪನಿಯವರು ಬರುವರೆಂದು ತಿಳಿಸಿದರು.
ಕನ್ನಡಪ್ರಭ ವಾರ್ತೆ ರಾಮನಾಥಪುರ
ಇಲ್ಲಿಯ ಸುಬ್ರಹ್ಮಣ್ಯ ನಗರದಲ್ಲಿರುವ ತಂಬಾಕು ಹರಾಜು ಮಾರುಕಟ್ಟೆ ಪ್ಲಾಟ್‌ಫಾರಂ 7 ಮತ್ತು 63ರ ಎರಡು ಹರಾಜು ಕಟ್ಟೆಗಳಲ್ಲಿ ತಂಬಾಕು ಹರಾಜು ಪ್ರಕ್ರಿಯೆ ಶುಕ್ರವಾರದಿಂದ ಅರಂಭವಾಗಿದ್ದು, ಮೊದಲ ದಿನ ಎರಡು ಹರಾಜು ಮಾರುಕಟ್ಟೆಗಳಿಂದ 36 ಬೇಲ್ ಗಳು, 4,617 ಕೆ.ಜಿ. ಮಾರಟವಾಗಿ 6,46,590 ರೂ ವಹಿವಾಟು ನಡೆದಿದ್ದು ಕೆಜಿ ತಂಬಾಕಿಗೆ ಸರಾಸರಿ 270 ರೂಗಳು ಆಗಿದೆ ಎಂದು ಹರಾಜು ಮಾರುಕಟ್ಟೆ ಅಧೀಕ್ಷಕರು ಎಚ್. ವಿ. ವಿಜಯಕುಮಾರ್ ತಿಳಿಸಿದರು.ರಾಮನಾಥಪುರ ಹರಾಜು ಮಾರುಕಟ್ಟೆಯಲ್ಲಿ ನಡೆದ ವಹಿವಾಟು ನಂತರ ಕಚೇರಿಯಲ್ಲಿ ಮಾತನಾಡಿದ ಅವರು ಪ್ಲಾಟ್‌ಫಾರಂ 7 ರಲ್ಲಿ 18 ಬೇಲ್ ಗಳು ಬಂದಿದ್ದು, 2330 ಕೆ.ಜಿ ತಂಬಾಕು ಬಂದಿದ್ದು 6 ಲಕ್ಷ 26 ಸಾವಿರದ 400 ರು. ವಹಿವಾಟು ನಡೆದಿದ್ದು ಸರಸರಿ 270 ರು. ಬೆಲೆ ಸಿಕ್ಕಿದೆ. ಪ್ಲಾಟ್‌ಫಾರಂ 63ರಲ್ಲಿ 18 ಬೇಲ್‌ಗಳು ಬಂದಿದ್ದು, 2297 ಕೆ.ಜಿ. ವಹಿವಾಟು ಬಂದಿದ್ದು, 6 ಲಕ್ಷ 20 ಸಾವಿರ 190 ರು. ವಹಿವಾಟು ನಡೆದು ಸರಾಸರಿ 270 ರು. ಬೆಲೆ ಸಿಕ್ಕಿದೆ. ತಂಬಾಕು ಕೊಳ್ಳಲು 5 ಕಂಪನಿಯವರು ಬಂದಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ತಂಬಾಕು ಕೊಳ್ಳುವ ಕಂಪನಿಯವರು ಬರುವರೆಂದು ತಿಳಿಸಿದರು.ರೈತರು ಬೇಲ್‌ಗಳನ್ನು ತರುವಾಗ ಕನಿಷ್ಟ 50 ಕೆ.ಜಿ.ಯಿಂದ ಗರಿಷ್ಠ 150 ಕೆ.ಜಿ ವರೆಗೆ ತಂಬಾಕು ಬೇಲ್‌ಗಳನ್ನು ತಂಬಾಕು ಹರಾಜು ಕಟ್ಟೆಯಿಂದ ಕೊಡುವ ಬೇಲ್ ಚೀಲಗಳಲ್ಲಿ ಕಟ್ಟಿಕೊಂಡು ಬರಬೇಕು. ತಂಬಾಕು ಹರಾಜು ಮಾರುಕಟ್ಟೆಯಿಂದ ಒಂದು ಬ್ಯಾರನ್ ಮನೆಗೆ 20 ಬೇಲ್ ಚೀಲಗಳನ್ನು ರೈತರು ತೆಗೆದುಕೊಂಡು ಬೇಲ್‌ಗಳನ್ನು ನೀಟಾಗಿ ಕಟ್ಟಿಕೊಂಡು ತರಬೇಕು. ಬೇಡಿಕೆಗೆ ಅನುಗುಣವಾಗಿ ಕರ್ನಾಟಕದ ಹೊಗೆಸೊಪ್ಪು ಉತ್ಪಾದಿಸುವುದರ ಜೊತೆಗೆ ಅನ್ನ ವಸ್ತುಗಳಾದ ಪ್ಲಾಸ್ಟಿಕ್, ಕಸಕಡ್ಡಿ, ಮತ್ತಿತರ ತ್ಯಾಜ್ಯ ವಸ್ತು ಸೇರಿ ಕೊಳ್ಳದಂತೆ ರೈತರು ಶುಚಿತ್ವ ಕಾಪಾಡಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಹರಾಜು ಅಧೀಕ್ಷಕರು ವಿಜಯಕುಮಾರ್ ಮನವಿ ಮಾಡಿದರು.ಉತ್ತಮ ಬೆಲೆಗೆ ರೈತರ ಆಗ್ರಹ:
ರಾಮನಾಥಪುರ ತಂಬಾಕು 2 ಹರಾಜು ಮಾರುಕಟ್ಟೆಗಳಲ್ಲಿ ಪ್ರಾರಂಭವಾಗಿದ್ದು, ಕಳೆದ ವರ್ಷ ಗರಿಷ್ಠ 320 ರು. ವರೆಗೆ ಪ್ರತಿ ಕೆ.ಜಿ. ತಂಬಾಕಿಗೆ ಬೆಲೆ ಸಿಕ್ಕಿತ್ತು.ಈ ವರ್ಷ ಅದೇ ತಂಬಾಕಿಗೆ ಗರಿಷ್ಠ 270 ರು. ಬೆಲೆ ಸಿಕ್ಕಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಪ್ರತಿ ಕೆ. ಜಿ. ತಂಬಾಕಿಗೆ 50 ರೂ ಕಡಿಮೆಯಾಗಿದೆ ಎಂದು ತಂಬಾಕು ಬೆಳೆಗಾರರಾದ ಮೂಲೆಹೊಸಹಳ್ಳಿ ಕಂಬೇಗೌಡರು ನೊಂದು ತಿಳಿಸಿದರು. ರಾಜ್ಯದಲ್ಲಿ ಬೆಳೆಯುವ ವರ್ಜೀನಿಯ ತಂಬಾಕು ವಿಶ್ವದಲ್ಲೇ ಉತ್ತಮ ಗುಣಮಟ್ಟವಿದ್ದು, ಎಂದು ಹೆಸರು ಪಡೆದಿದೆ. ಅದರೂ ತಂಬಾಕು ಉತ್ಪಾದಿಸುವ ಬೆಳೆಗಾರರಿಗೆ ಉತ್ತಮ ಬೆಲೆ ಇಲ್ಲದೇ ತಂಬಾಕು ಬೆಳೆಗಾರರು ದಿವಾಳಿಯತ್ತ ಸಾಗುತ್ತಿರುವುದು ಆತಂಕಕಾರಿ ಎಂದು ತಿಳಿಸಿದರು. ತಂಬಾಕು ಬೆಳೆಗಾರರು ಬೆಳೆಯುತ್ತಿರುವ ತಂಬಾಕಿಗೆ ಅಳಿನಕೂಲಿ, ರಸಗೊಬ್ಬರ ವ್ಯವಸಾಯ ಸೇರಿದಂತೆ ಒಂದು ಕೆ.ಜಿ ತಂಬಾಕು ಬೆಳೆಯಲು 250ರಿಂದ 350 ಖರ್ಚು ಆಗುತ್ತದೆ. ಆದ್ದರಿಂದ ರೈತರ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸಿ, ಕ್ಷೇತ್ರದ ಶಾಸಕರು ಎ. ಮಂಜು, ಸಂಸದರಾದ ಶ್ರೇಯಸ್ ಪಟೇಲ್, ಮುಖ್ಯಮಂತ್ರಿಗಳು ಡಿ.ಕೆ. ಶಿವಕುಮಾರ್, ಕೇಂದ್ರ ಸಚಿವರು ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರು ಅವರುಗಳು ಕೇಂದ್ರ ವಾಣಿಜ್ಯ ಸಚಿವರ ಜೊತೆಯಲ್ಲಿ ಮಾತನಾಡಿ ಕರ್ನಾಟಕದಲ್ಲಿ ಬೆಳೆಯುತ್ತಿರುವ ತಂಬಾಕು ಸೊಪ್ಪಿಗೆ ಕನಿಷ್ಠ 250 ರು.ನಿಂದ ಗರಿಷ್ಠ. 350 ರು. ಉತ್ತಮ ಬೆಲೆ ಕೊಡಿಸುವಂತೆ ರೈತ ಮುಖಂಡರಾದ ಕಂಬೇಗೌರು ಮನವಿ ಮಾಡಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.