ರಾಮಾನುಜಾಚಾರ್ಯರ ಜಯಂತಿ ಆಚರಣೆ

KannadaprabhaNewsNetwork |  
Published : Apr 23, 2026, 01:30 AM IST
್ಿಿ್‌ಿ | Kannada Prabha

ಸಾರಾಂಶ

ವಿಶಿಷ್ಟಾದ್ವೈತ ಸಿದ್ಧಾಂತದ ಪ್ರತಿಪಾದಕ, ಸಮಾಜ ಸುಧಾರಕ ರಾಮಾನುಜಾಚಾರ್ಯರ 1009ನೇ ಜಯಂತ್ಯುತ್ಸವವನ್ನು ಜಿಲ್ಲಾ ಶ್ರೀವೈಷ್ಣವ ಸಮುದಾಯ ಧಾರ್ಮಿಕ ಸಂಸ್ಥೆ ನೇತೃತ್ವದಲ್ಲಿ ಬುಧವಾರ ನಗರದಲ್ಲಿ ವೈಭವದಿಂದ ನೆರವೇರಿತು.

ಕನ್ನಡಪ್ರಭ ವಾರ್ತೆ, ತುಮಕೂರುವಿಶಿಷ್ಟಾದ್ವೈತ ಸಿದ್ಧಾಂತದ ಪ್ರತಿಪಾದಕ, ಸಮಾಜ ಸುಧಾರಕ ರಾಮಾನುಜಾಚಾರ್ಯರ 1009ನೇ ಜಯಂತ್ಯುತ್ಸವವನ್ನು ಜಿಲ್ಲಾ ಶ್ರೀವೈಷ್ಣವ ಸಮುದಾಯ ಧಾರ್ಮಿಕ ಸಂಸ್ಥೆ ನೇತೃತ್ವದಲ್ಲಿ ಬುಧವಾರ ನಗರದಲ್ಲಿ ವೈಭವದಿಂದ ನೆರವೇರಿತು. ಉತ್ಸವದಲ್ಲಿ ಶಾಸಕ ಜಿ.ಬಿ. ಜ್ಯೋತಿಗಣೇಶ್ಅವರು ರಾಮಾನುಚಾಚಾರ್ಯರ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ಭಕ್ತಿ ಸಮರ್ಪಿಸಿದರು. ಆನೆ ಮೇಲೆ ಅಲಂಕೃತ ಅಂಬಾರಿಯಲ್ಲಿ ಜಗದ್ಗುರು ರಾಮಾನುಜಾಚಾರ್ಯರ ಮೂರ್ತಿಯನ್ನು ಪೂಜಾ ಕೈಂಕರ್ಯಗಳೊಂದಿಗೆ ಪ್ರತಿಷ್ಠಾಪಿಸಿ ಅದ್ದೂರಿಯಾಗಿ ಉತ್ಸವ ಮಾಡಲಾಯಿತು. ಇದಕ್ಕೂ ಮೊದಲು ವಿವಿಧ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಜಯನಗರ ಪಶ್ಚಿಮ ಬಡಾವಣೆಯ ಪದ್ಮಾವತಿ ವೇಂಕಟೇಶ್ವರ ದೇವಸ್ಥಾನದಿಂದ ಆರಂಭವಾದ ಜಯಂತೋತ್ಸವದಲ್ಲಿ ವೇದಘೋಷಣೆ, ಪೂರ್ಣಕುಂಭ ಕಳಸ, ಮಂಗಳ ವಾದ್ಯ, ಜಾನಪದ ಕಲಾತಂಡಗಳ ಆಕರ್ಷಕ ಪ್ರದರ್ಶನ ಗಮನ ಸೆಳೆಯಿತು. ದೇವಸ್ಥಾನದಿಂದ ಹೊರಟು ಮುಖ್ಯರಸ್ತೆ, ಶೆಟ್ಟಿಹಳ್ಳಿ ಮುಖ್ಯರಸ್ತೆ ಮಾರ್ಗವಾಗಿ ಮಾರುತಿನಗರ ಹೆಬ್ಬಾಗಿಲು ಮೂಲಕ ಮಾರುತಿ ನಗರ ೪೦ ಅಡಿರಸ್ತೆ ಮಾರ್ಗವಾಗಿ ಸಾಗಿ ಜಿಲ್ಲಾ ವೈಷ್ಣವ ಸಮುದಾಯ ಧಾರ್ಮಿಕ ಸಂಸ್ಥೆಯ ಭವನದವರೆಗೆ ಉತ್ಸವ ನಡೆಯಿತು.

ಜಿಲ್ಲಾ ವೈಷ್ಣವ ಸಮುದಾಯ ಧಾರ್ಮಿಕ ಸಂಸ್ಥೆ ಅಧ್ಯಕ್ಷ, ನಗರಸಭೆ ಮಾಜಿ ಸದಸ್ಯ ಟಿ.ಎಸ್. ಮೋಹನಕುಮಾರ್, ಉಪಾಧ್ಯಕ್ಷ ನವರತ್ನಕುಮಾರ್, ನಗರಪಾಲಿಕೆ ಮಾಜಿ ಸದಸ್ಯ ಸಿ.ಎನ್. ರಮೇಶ್, ಮುಖಂಡ ಎಸ್. ಪುಟ್ಟೀರಪ್ಪ, ನಗರಸಭೆ ಮಾಜಿ ಅಧ್ಯಕ್ಷ ಟಿ.ಹೆಚ್. ಜಯರಾಮ್, ಬ್ರಾಹ್ಮಣ ಮಹಾಸಭಾ ಧ್ಯಕ್ಷ ಚಂದ್ರಶೇಖರ್ ಸೇರಿದಂತೆ ವಿವಿಧ ಮುಖಂಡರು, ಶ್ರೀ ವೈಷ್ಣವ ಸಮಾಜ ಬಾಂಧವರು ಜಯಂತೋತ್ಸವದಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳಿಗೆ ಆಟೋಟದ ಜೊತೆ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ: ಕೆ.ಎಸ್.ಆನಂದ್‌
ಹಳೆಯ ನೆನಪು ಮರು ಕಳಿಸಿದ ಸ್ನೇಹ ಸಮ್ಮಿಲನ: ಕೆ.ಎಸ್.ಮನೋಹರ್