ರಾಮಾಯಣ ಸಾಂಸ್ಕೃತಿಕ ಸಂವಿಧಾನ: ಬಸವರಾಜ್

KannadaprabhaNewsNetwork |  
Published : Oct 08, 2025, 01:01 AM IST
7ಬಿಎಸ್ವಿ01- ಬಸವನಬಾಗೇವಾಡಿಯ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ತಾಲೂಕಾಡಳಿತ, ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತೋತ್ಸವದಲ್ಲಿ ಶಿಕ್ಷಕ ಬಸವರಾಜ ಹಂಚಲಿ ಮಾತನಾಡಿದರು. | Kannada Prabha

ಸಾರಾಂಶ

ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ ವಾಲ್ಮೀಕಿ ರಚಿಸಿದ ರಾಮಾಯಣದಲ್ಲಿ ಆದರ್ಶ ಆಡಳಿತ, ಆದರ್ಶ ರಾಜ ಹೇಗಿರಬೇಕು ಸೇರಿ ಜೀವನ ಮೌಲ್ಯಗಳಿರುವುದರಿಂದಾಗಿ ರಾಮಾಯಣವು ಒಂದು ಸಾಂಸ್ಕೃತಿಕ ಸಂವಿಧಾನವಾಗಿದೆ ಎಂದು ಶಿಕ್ಷಕ ಬಸವರಾಜ ಹಂಚಲಿ ಹೇಳಿದರು.

ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ

ವಾಲ್ಮೀಕಿ ರಚಿಸಿದ ರಾಮಾಯಣದಲ್ಲಿ ಆದರ್ಶ ಆಡಳಿತ, ಆದರ್ಶ ರಾಜ ಹೇಗಿರಬೇಕು ಸೇರಿ ಜೀವನ ಮೌಲ್ಯಗಳಿರುವುದರಿಂದಾಗಿ ರಾಮಾಯಣವು ಒಂದು ಸಾಂಸ್ಕೃತಿಕ ಸಂವಿಧಾನವಾಗಿದೆ ಎಂದು ಶಿಕ್ಷಕ ಬಸವರಾಜ ಹಂಚಲಿ ಹೇಳಿದರು.

ಪಟ್ಟಣದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ತಾಲೂಕಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ರಾಮಾಯಣದಲ್ಲಿ ಉಲ್ಲೇಖಿಸಿರುವ ಅಂಶಗಳು ಇಂದಿಗೂ ಪ್ರಸ್ತುತವಾಗಿವೆ. ಬೇಡ ಜನಾಂಗದಲ್ಲಿ ಜನಿಸಿದ ವಾಲ್ಮೀಕಿ ಸತ್ಪುರುಷರಾಗಿದ್ದಾರೆ. ಬೇಡ ಜನಾಂಗವು ಗುರುಭಕ್ತಿಯ ಪ್ರತೀಕವಾಗಿರುವ ಏಕಲವ್ಯ, ಭಕ್ತಿಗೆ ಪ್ರತೀಕವಾಗಿರುವ ಬೇಡರ ಕಣ್ಣಪ್ಪ, ಶೂರತನದ ಪ್ರತೀಕ ಗಂಡುಗಲಿ ರಾಮ, ಸಿಂಧೂರ ಲಕ್ಷ್ಮಣ ಸೇರಿ ಅನೇಕ ಮಹಾಪುರುಷರನ್ನು ಕೊಡುಗೆಯಾಗಿ ನೀಡಿದೆ. ಬೇಡ ಜನಾಂಗವು ದೇಶಪ್ರೇಮ, ಗುರುಭಕ್ತಿ, ವೀರತನ, ಶೂರತನಕ್ಕೆ ಹೆಮ್ಮೆಪಡುವ ಸಮಾಜವಾಗಿದೆ ಎಂದರು.

ನಂದಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಸತ್ಯಜೀತ ಪಾಟೀಲ ಮಾತನಾಡಿ, ರಾಮಾಯಣ ಮಹಾಕಾವ್ಯ ಎಲ್ಲ ಸಮಾಜಕ್ಕೂ ಅಗತ್ಯವಿದೆ. ಪರಿವರ್ತನೆ ಯಾರ ಸ್ವತ್ತಲ್ಲ. ಇಡೀ ವಿಶ್ವಕ್ಕೆ ರಾಮರಾಜ್ಯ ಪರಿಚಯಿಸಿದ ಕೀರ್ತಿ ಮಹರ್ಷಿ ವಾಲ್ಮೀಕಿ ಅವರದ್ದಾಗಿದೆ ಎಂದು ಹೇಳಿದರು.ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ, ಪುರಸಭೆ ಉಪಾಧ್ಯಕ್ಷ ಅಶೋಕ ಹಾರಿವಾಳ, ತಹಸೀಲ್ದಾರ್‌ ವೈ.ಎಸ್.ಸೋಮನಕಟ್ಟಿ ಮಾತನಾಡಿದರು. ನಾಗರಾಳದ ಹುಚ್ಚಪ್ಪ ಮುತ್ಯಾ, ಐ.ಸಿ.ಪಟ್ಟಣಶೆಟ್ಟಿ, ತಾಪಂ ಇಒ ಪ್ರಕಾಶ ದೇಸಾಯಿ, ಬಿಇ ವಸಂತ ರಾಠೋಡ, ಡಿವೈಎಸ್ಪಿ ಬಲ್ಲಪ್ಪ ನಂದಗಾಂವಿ, ಪುರಸಭೆ ಮುಖ್ಯಾಧಿಕಾರಿ ವಿದ್ಯಾಧರ ಕಲಾದಗಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಮಂಜುಳಾ ಹಿರೇಮನಿ, ಮಹರ್ಷಿ ವಾಲ್ಮೀಕಿ ನೌಕರರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ರಾಜನಾಳ, ಸುರೇಶ ಹಾರಿವಾಳ, ರವಿಕುಮಾರ ನಾಯ್ಕೋಡಿ, ಮಹಿಬೂಬ ನಾಯ್ಕೋಡಿ, ಸಮಾಜದ ಮುಖಂಡರಾದ ಪರಸಪ್ಪ ಬಡಿಗೇರ, ಬಸನಗೌಡ ಪಾಟೀಲ, ಚಂದ್ರಶೇಖರ ಲಿಂಗದಳ್ಳಿ, ರಾಜು ಮಾಸ್ತಾಳ, ಡಿಎಸ್ಎಸ್ ಮುಖಂಡರಾದ ಅಶೋಕ ಚಲವಾದಿ, ಅರವಿಂದ ಸಾಲವಾಡಗಿ, ಮಹಾಂತೇಶ ಸಾಸಬಾಳ, ಗುರುರಾಜ ಗೂಡಿಮನಿ ಇತರರು ಇದ್ದರು.

ಸಮಾಜ ಕಲ್ಯಾಣ ಇಲಾಖೆಯ ಮಂಜುಳಾ ಹಿರೇಮನಿ ಸ್ವಾಗತಿಸಿದರು. ಶಾಂತಾ ಕಸ್ತೂರಿ ನಿರೂಪಿಸಿದರು. ಸಮಾಜ ಕಲ್ಯಾಣ ಇಲಾಖೆಯ ಅಧೀಕ್ಷಕ ಎಂ.ಎಂ.ದಪೇದಾರ ವಂದಿಸಿದರು. ಪಟ್ಟಣದಲ್ಲಿ ವಾಲ್ಮೀಕಿ ಭಾವಚಿತ್ರ ಮೆರವಣಿಗೆ ವಾದ್ಯಮೇಳದೊಂದಿಗೆ ಜರುಗಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣಕ್ಕೆ ಸಿದ್ಧಗಂಗಾ ಮಠದ ಕೊಡುಗೆ ಅನನ್ಯ
ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರ ಹಿತ ಕಾಪಾಡಿ