ದೇಶದ ಏಕತೆ ಬಲಪಡಿಸುವ ರಾಮಾಯಣ: ರಾಜ್ಯಪಾಲ ಗೆಹಲೋತ್‌

KannadaprabhaNewsNetwork |  
Published : Sep 10, 2026, 02:45 AM IST
ಕಾಪುವಿನ ಎರ್ಮಾಳಿನಲ್ಲಿ ನಡೆದ ರಾಮಕಥಾ ಕಾರ್ಯಕ್ರಮದಲ್ಲಿ ರಾಜ್ಯಪಾವರು ಭಾಗವಹಿಸಿದರು | Kannada Prabha

ಸಾರಾಂಶ

ಇಲ್ಲಿನ ಎರ್ಮಾಳುನಲ್ಲಿ ಆಯೋಜಿಸಲಾಗಿದ್ದ ಸಂತ ಶ್ರೀ ಮುರಾರಿ ಬಾಪುಜಿ ಅವರ ‘ರಾಮಕಥಾ’ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್‌ ಭಾಗವಹಿಸಿದರು.

ಕಾಪು: ಇಲ್ಲಿನ ಎರ್ಮಾಳುನಲ್ಲಿ ಆಯೋಜಿಸಲಾಗಿದ್ದ ಸಂತ ಶ್ರೀ ಮುರಾರಿ ಬಾಪುಜಿ ಅವರ ‘ರಾಮಕಥಾ’ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್‌ ಭಾಗವಹಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಪಾಲರು, ಶ್ರೀಕೃಷ್ಣನ ಮೇಲಿನ ಭಕ್ತಿಯ ಹರಿವು ನಿರಂತರ ಹರಿಯುತ್ತಿರುವ ಉಡುಪಿಯ ಪವಿತ್ರನೆಲದಲ್ಲಿ ಶ್ರೀ ಮುರಾರಿ ಬಾಪು ಅವರಿಂದ ರಾಮಕಥೆಯನ್ನು ಆಲಿಸುವ ಅವಕಾಶದಿಂದ ಸಂತಸವಾಗಿದೆ ಎಂದರು.‘ರಾಮಾಯಣವು ಅಹಂಕಾರದ ಬದಲು ನಮ್ರತೆ, ಸ್ವಾರ್ಥದ ಬದಲು ಸೇವೆ ಹಾಗೂ ದ್ವೇಷದ ಬದಲು ಪ್ರೀತಿಯನ್ನು ಅಳವಡಿಸಿಕೊಳ್ಳುವಂತೆ ನಮಗೆ ಪ್ರೇರೇಪಿಸುತ್ತದೆ. ಇಂದು ಈ ಮೌಲ್ಯಗಳನ್ನು ಅಳವಡಿಸಿಕೊಂಡರೆ ಕುಟುಂಬದಲ್ಲಿ ಶಾಂತಿ, ಸಮಾಜದಲ್ಲಿ ಸಾಮರಸ್ಯ ಮತ್ತು ರಾಷ್ಟ್ರದಲ್ಲಿ ಏಕತೆಯನ್ನು ಮತ್ತಷ್ಟು ಬಲಪಡಿಸಬಹುದು ಎಂದು ರಾಜ್ಯಪಾಲರು ಹೇಳಿದರು.

ಉಡುಪಿ ಭಾರತೀಯ ಆಧ್ಯಾತ್ಮಿಕ ಪರಂಪರೆಯ ಪ್ರಮುಖ ಕೇಂದ್ರವಾಗಿದ್ದು, ಸಂತ ಮಧ್ವಾಚಾರ್ಯರ ಮಹಾನ್ ಪರಂಪರೆ ಹಾಗೂ ಶ್ರೀಕೃಷ್ಣನ ಭಕ್ತಿಗೆ ಹೆಸರುವಾಸಿಯಾಗಿದೆ. ಇಂತಹ ನೆಲದಲ್ಲಿ ಸಂತ ಮುರಾರಿ ಬಾಪು ಅವರಿಂದ ಶ್ರೀರಾಮಕಥಾ ನಡೆಯುತ್ತಿರುವುದು ಭಾರತದ ವೈವಿಧ್ಯತೆ ಹಾಗೂ ಶ್ರೀಮಂತ ಆಧ್ಯಾತ್ಮಿಕತೆ ಪ್ರತೀಕವಾಗಿದೆ ಎಂದವರು ಹೇಳಿದರು.ಈ ರಾಮಕಥಾ ಕಾರ್ಯಕ್ರಮವನ್ನು ಸಂಯೋಜಿಸಿದ ಪ್ರವೀಣ್ ಕಾಂಜಿ ತನ್ನಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ರಾಮೀಣ ಕ್ರೀಡಾಪಟುಗಳಲ್ಲಿ ಅಪ್ರತಿಮ ಪ್ರತಿಭೆ
ಸಮಾಜದಲ್ಲಿ ಅಸಮಾನತೆ, ಅಂಧಕಾರ ದೂರವಾಗಲಿ