ಇಂದಿನಿಂದ ರಂಭಾಪುರಿ ಶ್ರೀ ಆಷಾಢ ಮಾಸ ಇಷ್ಟಲಿಂಗ ಮಹಾಪೂಜೆ

KannadaprabhaNewsNetwork |  
Published : Jul 30, 2024, 12:30 AM IST
(ರಂಭಾಪುರಿ ಶ್ರೀ) | Kannada Prabha

ಸಾರಾಂಶ

ಶ್ರೀಮದ್‌ ವೀರಶೈವ ಸದ್ಬೋಧನಾ ಸಂಸ್ಥೆ ಬಾಳೆಹೊನ್ನೂರು ಹಾಗೂ ದಾವಣಗೆರೆ ಜಿಲ್ಲಾ ಘಟಕಗಳ ಸಹಯೋಗದಲ್ಲಿ ಜು.30ರಿಂದ ಆಗಸ್ಟ್ 3 ರವರೆಗೆ ಬಾಳೆಹೊನ್ನೂರು ರಂಭಾಪುರಿ ಜಗದ್ಗುರು ಅವರ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜಾ, ಜನಜಾಗೃತಿ, ಧರ್ಮ ಸಮಾವೇಶ ಕಾರ್ಯಕ್ರಮಗಳು ನಗರದ ಶ್ರೀಮದ್ ಅಭಿನವ ರೇಣುಕ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.

- ಇಂದು ಶಾಸಕ ಶಾಮನೂರು ಶಿವಶಂಕರಪ್ಪರಿಂದ ಜನಜಾಗೃತಿ ಧರ್ಮ ಸಮಾವೇಶ ಉದ್ಘಾಟನೆ - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಶ್ರೀಮದ್‌ ವೀರಶೈವ ಸದ್ಬೋಧನಾ ಸಂಸ್ಥೆ ಬಾಳೆಹೊನ್ನೂರು ಹಾಗೂ ದಾವಣಗೆರೆ ಜಿಲ್ಲಾ ಘಟಕಗಳ ಸಹಯೋಗದಲ್ಲಿ ಜು.30ರಿಂದ ಆಗಸ್ಟ್ 3 ರವರೆಗೆ ಬಾಳೆಹೊನ್ನೂರು ರಂಭಾಪುರಿ ಜಗದ್ಗುರು ಅವರ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜಾ, ಜನಜಾಗೃತಿ, ಧರ್ಮ ಸಮಾವೇಶ ಕಾರ್ಯಕ್ರಮಗಳು ನಗರದ ಶ್ರೀಮದ್ ಅಭಿನವ ರೇಣುಕ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.

ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಪ್ರತಿದಿನ ಸಂಜೆ 6-30ಕ್ಕೆ ಕಾರ್ಯಕ್ರಮಗಳು ಜರುಗಲಿವೆ. ಜು.30ರಂದು ಜನಜಾಗೃತಿ ಧರ್ಮ ಸಮಾವೇಶವನ್ನು ಶಾಸಕ ಶಾಮನೂರು ಶಿವಶಂಕರಪ್ಪ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ, ಲೆಕ್ಕ ಪರಿಶೋಧಕ ಅಥಣಿ ವೀರಣ್ಣ, ಉದ್ಯಮಿಗಳಾದ ಅಣಬೇರು ರಾಜಣ್ಣ, ಎಸ್.ಎಸ್. ಗಣೇಶ್ ಮತ್ತಿತರರು ಪಾಲ್ಗೊಳ್ಳುವರು. ಡಾ. ಕೆ.ಸಿ. ಶಿವಮೂರ್ತಿ ಅವರಿಗೆ ''''''''ವೈದ್ಯ ಚಿಂತಾಮಣಿ'''''''' ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಜು.31ರ ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ್, ಮಾಜಿ ಸಚಿವ ಎಸ್.ಎ. ರವೀಂದ್ರನಾಥ್, ಹರಿಹರ ಶಾಸಕ ಬಿ.ಪಿ.ಹರೀಶ್, ಮಾಜಿ ಶಾಸಕ ಎಚ್.ಎಸ್. ಶಿವಶಂಕರ್, ವಿಪ ಮಾಜಿ ಸದಸ್ಯ ಡಾ. ಎ.ಎಚ್. ಶಿವಯೋಗಿಸ್ವಾಮಿ ಮತ್ತಿತರರು ಪಾಲ್ಗೊಳ್ಳುವರು. ಕೈಗಾರಿಕೋದ್ಯಮಿ ಬಿ.ಚಿದಾನಂದಪ್ಪ ಅವರಿಗೆ ಧರ್ಮ ರತ್ನಾಕರ ಪ್ರಶಸ್ತಿ ನೀಡಿ ಪುರಸ್ಕರಿಸಲಾಗುವುದು.

ಆ.1ರಂದು ಶ್ರೀ ಮುಕ್ತಿಮಂದಿರ ಕ್ಷೇತ್ರದ ಅಧ್ಯಕ್ಷ ಶ್ರಿ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಲೋಕಸಭೆ ಪರಾಜಿತ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್, ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ್, ಉಪ ಮೇಯರ್ ಯಶೋಧ ಯಗ್ಗಪ್ಪ, ಬಿಜೆಪಿ ರಾಜ್ಯ ಮಹಿಳಾ ಘಟಕ ಉಪಾಧ್ಯಕ್ಷೆ ಎಚ್.ಸಿ. ಜಯಮ್ಮ, ಪಾಲಿಕೆ ಆಯುಕ್ತೆ ರೇಣುಕಾ ಪಾಲ್ಗೊಳ್ಳುವರು. ಯುಪಿಎಸ್‌ಸಿಯಲ್ಲಿ ಸಾಧನೆ ಮಾಡಿ ಸೌಭಾಗ್ಯ ಬೀಳಗಿಮಠ ಅವರಿಗೆ ಸಾಧನೆಯ ಶಿಖರ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಆ.2ರಂದು ನಡೆಯುವ ಸಮಾವೇಶದಲ್ಲಿ ಹಿರೇಮಠದ ಶ್ರೀ ರೇಣುಕಾಚಾರ್ಯ ಗುರುಕುಲ ಶ್ರೀಗಳ ನೇತೃತ್ವ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಶಾಸಕ ಶಿವಗಂಗಾ ಬಸವರಾಜ, ಮೇಯರ್ ವಿನಾಯಕ ಪೈಲ್ವಾನ್, ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಬಡದಾಳ್ ಭಾಗವಹಿಸಲಿದ್ದಾರೆ. ಕೈಗಾರಿಕೋದ್ಯಮಿ ಶಿವಗಂಗಾ ಶ್ರೀನಿವಾಸ ಅವರಿಗೆ ಶ್ರಮ ಸೇವಾ ಸಂಜೀವಿನಿ ಪ್ರಶಸ್ತಿ ನೀಡಿ ಗೌರವಿಸಲಾವುದು.

ಆ.3ರಂದು ನಡೆಯುವ ಸಮಾವೇಶದ ನೇತೃತ್ವವನ್ನು ಶ್ರೀ ರಾಚೋಟೇಶ್ವರ ಸ್ವಾಮೀಜಿ ವಹಿಸಲಿದ್ದಾರೆ. ಕೇದಾರಶ್ರೀ ಉಪದೇಶಾಮೃತ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ, ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯದೇವ ನಾಯ್ಕ್, ಮಾಜಿ ಮೇಯರ್ ಬಿ.ಜಿ. ಅಜಯಕುಮಾರ್, ಎಸ್.ಟಿ. ವೀರೇಶ್, ಲೋಕಿಕೆರೆ ನಾಗರಾಜ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಬಿಜೆಪಿಯ ಎಸ್‌ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ ಅವರಿಗೆ ಸಮಾಜ ಸೇವಾ ವಿಭೂಷಣ ಪ್ರಶಸ್ತಿ ಪ್ರದಾನ ಮಾಡಲಾಗುವುದು.

- - -

ಬಾಕ್ಸ್‌

* ಯಾರ್ಯಾರಿಗೆ ಯಾವ ಪ್ರಶಸ್ತಿ? - ಡಾ. ಕೆ.ಸಿ. ಶಿವಮೂರ್ತಿ ಅವರಿಗೆ ''''''''ವೈದ್ಯ ಚಿಂತಾಮಣಿ'''''''' ಪ್ರಶಸ್ತಿ - ಕೈಗಾರಿಕೋದ್ಯಮಿ ಬಿ.ಚಿದಾನಂದಪ್ಪ ಅವರಿಗೆ ಧರ್ಮ ರತ್ನಾಕರ ಪ್ರಶಸ್ತಿ - ಯುಪಿಎಸ್‌ಸಿಯಲ್ಲಿ ಸಾಧನೆ ಮಾಡಿ ಸೌಭಾಗ್ಯ ಬೀಳಗಿಮಠ ಅವರಿಗೆ ಸಾಧನೆಯ ಶಿಖರ ಪ್ರಶಸ್ತಿ - ಕೈಗಾರಿಕೋದ್ಯಮಿ ಶಿವಗಂಗಾ ಶ್ರೀನಿವಾಸ ಅವರಿಗೆ ಶ್ರಮ ಸೇವಾ ಸಂಜೀವಿನಿ ಪ್ರಶಸ್ತಿ - ಬಿಜೆಪಿಯ ಎಸ್‌ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ ಅವರಿಗೆ ಸಮಾಜ ಸೇವಾ ವಿಭೂಷಣ ಪ್ರಶಸ್ತಿ

- - - (-ಫೋಟೋ: ರಂಭಾಪುರಿ ಶ್ರೀ)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಸ್ಯೆ ಬಗೆಹರಿದ್ರೆ 6 ತಿಂಗಳಲ್ಲಿ 1 ಲಕ್ಷ ನೇಮಕಾತಿ : ಸಾರಿಗೆ ಸಚಿವ
ಸರ್ಕಾರದಿಂದ ಮಹತ್ವದ ನಿರ್ಧಾರ : ವಿಪತ್ತು ವೇಳೆ ಇಡೀ ಊರಿನ ರೈತರಿಗೆ ಪರಿಹಾರ