ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ

KannadaprabhaNewsNetwork |  
Published : Sep 17, 2025, 01:10 AM IST
ಮಧ್ಯರಾತ್ರಿ 2-30ರ ಸಮಯಕ್ಕೆ  ಯಾದವಾಡ  ಬೆಂಬಲಿಗರ ವಿಜಯೋತ್ಸ್ವವ | Kannada Prabha

ಸಾರಾಂಶ

ತೀವೃ ಕುತೂಹಲ ಕೆರಳಿಸಿದ್ದ ಶ್ರೀ ಧನಲಕ್ಷ್ಮೀ ಸಕ್ಕರೆ ಕಾರ್ಖಾನೆಯ ನಿರ್ದೇಶಕರ ಚುನಾವಣೆಯಲ್ಲಿ ಮಾಜಿ ಶಾಸಕ ಮಹಾದೇವಪ್ಪ ಯಾದವಾಡರ ನೇತೃತ್ವದ ಗುಂಪು ಸತತ 4ನೇ ಬಾರಿಗೆ ಅಧಿಕಾರದ ಗದ್ದುಗೆ ಏರುವ ಮೂಲಕ ತೆರೆಮರೆಯಲ್ಲಿ ವಿರೋಧಿ ಗುಂಪಿಗೆ ಬೆಂಬಲಿಸಿದ್ದ ನೆರೆಯ ತಾಲೂಕಿನ ಕಾಣದ ಕೈಗಳಿಗೆ ಹಿನ್ನಡೆಯಾಗಿದೆ.

ಕನ್ನಡಪ್ರಭ ವಾರ್ತೆ ರಾಮದುರ್ಗ

ತೀವೃ ಕುತೂಹಲ ಕೆರಳಿಸಿದ್ದ ಶ್ರೀ ಧನಲಕ್ಷ್ಮೀ ಸಕ್ಕರೆ ಕಾರ್ಖಾನೆಯ ನಿರ್ದೇಶಕರ ಚುನಾವಣೆಯಲ್ಲಿ ಮಾಜಿ ಶಾಸಕ ಮಹಾದೇವಪ್ಪ ಯಾದವಾಡರ ನೇತೃತ್ವದ ಗುಂಪು ಸತತ 4ನೇ ಬಾರಿಗೆ ಅಧಿಕಾರದ ಗದ್ದುಗೆ ಏರುವ ಮೂಲಕ ತೆರೆಮರೆಯಲ್ಲಿ ವಿರೋಧಿ ಗುಂಪಿಗೆ ಬೆಂಬಲಿಸಿದ್ದ ನೆರೆಯ ತಾಲೂಕಿನ ಕಾಣದ ಕೈಗಳಿಗೆ ಹಿನ್ನಡೆಯಾಗಿದೆ.

ಭಾನುವಾರ ನಡೆದ 18 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಮಹಾದೇವಪ್ಪ ಯಾದವಾಡರ ನೇತೃತ್ವದ ಪೆನಲ್ 11 ಸ್ಥಾನಗಳಲ್ಲಿ ಗೆಲವು ಸಾಧಿಸುವ ಮೂಲಕ 4ನೇ ಸಲ ಧನಲಕ್ಷ್ಮೀಯನ್ನು ತಮ್ಮ ಮಡಿಲಿಗೆ ಹಾಕಿಕೊಂಡಿದ್ದಾರೆ. ಇವರ ಪ್ರತಿಸ್ಪರ್ಧಿ ದಿ.ಬಿ.ಬಿ.ಹಿರೇರಡ್ಡಿ ರೈತ ಸಹಕಾರಿ ಪೆನಲ್ 7 ಸ್ಥಾನಗಳಲ್ಲಿ ಗೆಲವು ಸಾಧಿಸಿ ಸಮಾಧಾನ ಪಟ್ಟುಕೊಂಡಿದೆ.ಈ ಬಾರಿ ಹೇಗಾದರೂ ಮಾಡಿ ಧನಲಕ್ಷ್ಮೀ ಕಾರ್ಖಾನೆಯ ಅಧಿಕಾರದ ಗದ್ದುಗೆ ಹಿಡಿಯಬೇಕು ಮತ್ತು ಮಹಾದೇವಪ್ಪ ಯಾದವಾಡ ಪೆನಲ್ ಸೋಲಿಸಿ ಯಾದವಾಡ ಕುಟುಂಬವನ್ನು ಕಾರ್ಖಾನೆಯಿಂದ ಹೊರಗಿಡುವ ಉದ್ದೇಶದಿಂದ ಅಸ್ತಿತ್ವಕ್ಕೆ ಬಂದಿದ್ದ ಜ್ಯಾತ್ಯಾತೀತ, ಪಕ್ಷಾತೀತ ಗುಂಪು ದಿ.ಬಿ.ಬಿ.ಹಿರೇರಡ್ಡಿ ರೈತ ಸಹಕಾರಿ ಪೆನಲ್‌ನ ಕನಸು ಕನಸಾಗಿ ಉಳಿಯಿತು. ಈ ಪೆನಲ್‌ಗೆ ಎಲ್ಲ ದೃಷ್ಟಿಯಿಂದ ಸಹಾಯ ಮಾಡಿ ಪರೋಕ್ಷವಾಗಿ ಕಾರ್ಖಾನೆ ನಿಯಂತ್ರಿಸಲು ಬಯಸಿದ್ದ ಪಕ್ಕದ ತಾಲೂಕುಗಳ ಕಾಣದ ಕೈಗಳಿಗೆ ಈ ಚುನಾವಣಾ ಫಲಿತಾಂಶದ ಮೂಲಕ ರಾಮದುರ್ಗದ ಧನಲಕ್ಷ್ಮೀ ಮತದಾರರು ಯಾದವಾಡ ಕುಟುಂಬವನ್ನು ಯಾವತ್ತೂ ಕೈಬಿಡುವುದಿಲ್ಲ ಎನ್ನುವ ಸಂದೇಶವನ್ನು ಮತದಾರ ನೀಡಿದ್ದಾರೆ.ಈ ಚುನಾವಣೆಯಲ್ಲಿ ಕಳೆದ ಅವಧಿಯಲ್ಲಿ ನಿರ್ದೇಶಕರಾಗಿದ್ದ ಮಾಜಿ ಶಾಸಕ ಮಹಾದೇವಪ್ಪ ಶಿ.ಯಾದವಾಡ, ಅಧ್ಯಕ್ಷ ಮಲ್ಲಣ್ಣ ಶಿ.ಯಾದವಾಡ, ಉಪಾಧ್ಯಕ್ಷ ಬಸನಗೌಡ ಗೌ.ದ್ಯಾಮನಗೌಡ್ರ, ಈರಪ್ಪ ಶಿ.ಹರನಟ್ಟಿ, ಬಸವರಾಜ ಮ.ತುಪ್ಪದ, ಮಹಾದೇವ ಮ.ಆತಾರ, ಶಶಿಕಲಾ ಬ.ಸೋಮಗೊಂಡ, ಅನ್ನಪೂರ್ಣಾ ನಿ.ಪಾಟೀಲ, ಚಂದ್ರು ಶಂ.ರಜಪೂತ ಪುನರಾಯ್ಕೆಯಾಗಿದ್ದಾರೆ. ಭೀಮಪ್ಪ ಶಿ.ಬೆಳವಣಕಿ, ಶಿವಾನಂದ ಬ.ಮುಷ್ಠಿಗೇರಿ (ಮಾಜಿ ಮಹಾದೇವಪ್ಪ ಯಾದವಾಡ ಪೆನಲ್) ಬಸವರಾಜ ಬ.ಹಿರೇರಡ್ಡಿ ಗೋಪಾಲರಡ್ಡಿ ರಾ.ಸಂಶಿ, ಪರುತಗೌಡ ಮ.ಪಾಟೀಲ, ಪರಪ್ಪಗೌಡ ಫ.ಪಾಟೀಲ, ಈರಣ್ಣ ಹ.ಕಾಮನ್ನವರ, ಭೀಮಪ್ಪ ತ.ಬಸಿಡೋಣಿ, ಬಸಪ್ಪ ಶಂ,ಸಿದರಡ್ಡಿ (ಬಿ.ಬಿ.ಹಿರೇರಡ್ಡಿ ಪೆನಲ್) ಕಳೆದ ಅವಧಿಯಲ್ಲಿ ನಿರ್ದೇಶಕರಾಗಿದ್ದ ಅಡಿವೆಪ್ಪ ಸುರಗ, ಶಂಕರಗೌಡ ಪಾಟೀಲ, ಶ್ರೀನಿವಾಸ ಕರದಿನ, ದುಂಡಪ್ಪ ದೇವರಡ್ಡಿ ಮತ್ತು ಬಾಳಪ್ಪ ಹಂಜಿ ಈ ಚುನಾವಣೆಯಲ್ಲಿ ಪರಾಬವಗೊಂಡಿದ್ದಾರೆ.ರಾತ್ರಿ 2.30ರ ಹೊತ್ತಿಗೆ ಎಣಿಕೆ ಕೇಂದ್ರದ ಸುತ್ತ ಇದ್ದ ಅಭಿಮಾನಿಗಳು ತಮ್ಮ ನಾಯಕರನ್ನು ಕರೆದುಕೊಂಡು ವಿಜಯೋತ್ಸವ ಆಚರಿಸಿದರು. ಪಟ್ಟಣದ ಕ್ರಾಸ್‌ಗಳಲ್ಲಿ ಪಟಾಕಿ ಸಿಡಿಸಿ ಸಂತಸಪಟ್ಟರು.

PREV

Recommended Stories

ಸಂಪುಟ ಪುನಾರಚನೆಗಾಗಿ ನ.15ರಂದು ದೆಹಲಿಗೆ : ಸಿಎಂ ಸಿದ್ದರಾಮಯ್ಯ
ಸರ್ಕಾರದ ಪ್ರತಿ ಇಲಾಖೆಯ ಮೇಲೂ ಲೋಕಾಯುಕ್ತ ಕಣ್ಣು