ಸ್ವಚ್ಛತೆ, ಜನರ ಆರೋಗ್ಯಕ್ಕೆ ಗ್ರಾಪಂಗಳು ಹಣ ಮೀಸಲಿಡಲಿ

KannadaprabhaNewsNetwork |  
Published : Mar 03, 2025, 01:49 AM IST
50 | Kannada Prabha

ಸಾರಾಂಶ

ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರು ಸ್ವಚ್ಛತೆ ಇತ್ತೀಚೆಗೆ ಆದ್ಯತೆ ನೀಡಿ

ಕನ್ನಡಪ್ರಭ ವಾರ್ತೆ ರಾವಂದೂರು

ಕುಡಿಯುವ ನೀರು ಸ್ವಚ್ಛತೆ ಜನರ ಆರೋಗ್ಯ ಕಾಪಾಡಲು ಗ್ರಾಪಂಗಳು ಹಣ ಮೀಸಲಿಡಬೇಕು ಎಂದು ಸಚಿವ ಕೆ. ವೆಂಕಟೇಶ್ ತಿಳಿಸಿದರು.

ಪಿರಿಯಾಪಟ್ಟಣ ತಾಲೂಕು ರಾಮನಾಥ ತುಂಗ ಗ್ರಾಮದಲ್ಲಿ ಸುಮಾರು 7 ಕೋಟಿ ರು. ವೆಚ್ಚದ ರಸ್ತೆ ಕಾಮಗಾರಿ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರು ಸ್ವಚ್ಛತೆ ಇತ್ತೀಚೆಗೆ ಆದ್ಯತೆ ನೀಡಿ. ಹೊರ ಜಿಲ್ಲೆಯಲ್ಲಿ ಹರಡುತ್ತಿರುವ ಅಕ್ಕಿಜ್ವರದ ಭೀತಿ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಿತದೃಷ್ಟಿಯ ಹಿನ್ನೆಲೆಯಲ್ಲಿ ಗ್ರಾಪಂಗಳು ಹಣ ಮೀಸಲಿಡಬೇಕು ಹಾಗೂ ಗ್ರಾಮ ಪರಿಮಿತಿಯ ಸಂಪರ್ಕ ರಸ್ತೆಗಳು ಉತ್ತಮವಾಗಿದ್ದಾಗ ಮುಖ್ಯ ಜನರು ಓಡಾಡುವ ಒತ್ತಡ ಕಡಿಮೆಯಾಗುತ್ತದೆ ಹಾಗೂ ಗ್ರಾಮೀಣ ಜನರಿಗೆ ಮೂಲಭೂತ ಸೌಲಭ್ಯ ಕಲ್ಪಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದ್ದು ಈ ನಿಟ್ಟಿನಲ್ಲಿ ಗ್ರಾಮೀಣ ಮಟ್ಟದ ರಸ್ತೆಗಳನ್ನು ಉತ್ತಮ ಗುಣಮಟ್ಟದ ರಸ್ತೆಗಳು ನಿರ್ಮಿಸುವುದು ಜನರಿಗೆ ಉತ್ತಮ ಸೇವೆ ನೀಡಿದ ಆತ್ಮಸಾಕ್ಷಿ ನಮಗೆ ಇರುತ್ತದೆ ಎಂದರು.

ಜನರು ಗ್ರಾಮಗಳಿಗೆ ಭೇಟಿ ಕೊಟ್ಟಾಗ ಅವರ ಬೇಡಿಕೆಗಳನ್ನು ಮನಸ್ಸಲ್ಲಿಟ್ಟುಕೊಂಡು ಆದ್ಯತೆ ಮೇರೆಗೆ ಹಂತ ಹಂತವಾಗಿ ಅವರ ಆಶೋತ್ತರಗಳನ್ನು ಈಡೇರಿಸಲಾಗುವುದು ಎಂದು ತಿಳಿಸಿದರು.

ತಾಪಂ ಮಾಜಿ ಅಧ್ಯಕ್ಷ ಆರ್.ಎಸ್. ಮಹದೇವ್ ಮಾತನಾಡಿ, ಗ್ರಾಮೀಣ ಜನರ ಹಲವು ವರ್ಷದ ಬೇಡಿಕೆಗಳನ್ನು ನಮ್ಮ ಸಚಿವರು ಈಡೇರಿಸಿದ್ದು, ಈವರೆಗೆ ತಾಲೂಕಿನಲ್ಲಿ ಅಭಿವೃದ್ಧಿ ಏನಾದರೂ ಆಗಿದ್ದರೆ ಅದು ಸಚಿವ ಕೆ. ವೆಂಕಟೇಶ ಅವರ ಅವಧಿಯಲ್ಲಿ ಮಾತ್ರ. ಪ್ರತಿಯೊಂದು ಗ್ರಾಮಗಳ ಜನರ ಹಿತ ಕಾಪಾಡುವ ಜಾತ್ಯತೀತ ಮನೋಭಾವವನ್ನು ಇವರು ಪ್ರತಿ ಗ್ರಾಮದ ಅಭಿವೃದ್ಧಿಗೂ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.

ಈ ವೇಳೆ ಅಸ್ವಾಳು ಗ್ರಾಮದಲ್ಲಿ ಚರಂಡಿ, ರಸ್ತೆ ಕಾಮಗಾರಿ, ರಾಮನಾಥತುಂಗದಲ್ಲಿ ವಾಲ್ಮೀಕಿ ಸಮುದಾಯ ಭವನಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಟಿ. ಸ್ವಾಮಿ, ರಾಮತ್ ಜಾನ್ ಬಾಬು, ವಿಜಿ ಕೊಪ್ಪಲು ಲೋಕೇಶ್, ರೇವಣ್ಣ, ಗ್ರಾಪಂ ಅಧ್ಯಕ್ಷ ಜಯಮ್ಮ, ಆರ್.ಎಸ್. ಹರೀಶ್, ಮುತ್ತುರಾಜ್, ನಾಯಕರ ಸಂಘದ ಅಧ್ಯಕ್ಷ ಪುಟ್ಟಯ್ಯ, ತಾಲೂಕು ದಂಡಾಧಿಕಾರಿ ನಿಸರ್ಗಪ್ರಿಯಾ, ತಾಪಂ ಇಒ ಸುನಿಲ್, ಜಿಪಂ ಎಇಇ ವೆಂಕಟೇಶ್, ಎಂಜಿನಿಯರ್ ದಿನೇಶ್, ಡಾ. ಸೋಮಯ್ಯ, ಕುರಿ ಮತ್ತು ಉಣ್ಣೆ ಮಂಡಳಿ ಸದಸ್ಯ ಮಹದೇವ್, ಗ್ಯಾರಂಟಿ ಯೋಜನೆ ಸಮಿತಿ ಸದಸ್ಯ ಮಹದೇವ್, ಶಫಿ, ಪಿಡಿಒ ಕವಿತಾ ಮೊದಲಾದವರು ಇದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...