ರಾಮನಗರ: ರಾಮನಗರದ ಇತಿಹಾಸ ಪುಟದಲ್ಲಿ ಸೇರುತ್ತಿರುವ ರಾಮೋತ್ಸವ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೆಚ್ಚಿಸಿದೆ ಎಂದು ವಿಧಾನ ಪರಿಷತ್ ಸದಸ್ಯ ರಾಮೋಜಿಗೌಡ ಹೇಳಿದರು.
ಶಾಸಕ ಇಕ್ಬಾಲ್‌ಹುಸೇನ್ ನೇತೃತ್ವದಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ರಾಮೋತ್ಸವದ ಕಾರ್ಯಕ್ರಮಗಳು ಒಬ್ಬರಿಂದ ಮಾಡಬಹುದಾದ ಸುಲಭದ ಕೆಲಸವಲ್ಲ. ಅಧಿಕಾರ, ಹಣ ಇದ್ದರೆ ಸಾಕಾಗುವುದಿಲ್ಲ, ಕಾರ್ಯಕ್ರಮ ಯಶಸ್ವಿ ಆಗಬೇಕಾದರೆ ಧೈರ್ಯ, ಮನಸ್ಸು ಮತ್ತು ಇಚ್ಚಾಶಕ್ತಿ ಬೇಕಾಗುತ್ತದೆ. ಅಂತಹ ವ್ಯಕ್ತಿತ್ವವನ್ನು ನಾವು ನೀವೆಲ್ಲರೂ ಇಕ್ಬಾಲ್‌ಹುಸೇನ್ ಅವರಲ್ಲಿ ಕಂಡಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು.
ಶಾಸಕ ಇಕ್ಬಾಲ್‌ಹುಸೇನ್ ಮಾತನಾಡಿ, ಮಕ್ಕಳಲ್ಲಿ ಪ್ರತಿಭೆಗೆ ಅವಕಾಶ ಮಾಡಿಕೊಡಬೇಕು. ಅವರಲ್ಲಿನ ಪ್ರತಿಭೆಯನ್ನು ಗುರುತಿಸಿ ಶಕ್ತಿ ಕೊಟ್ಟು ನೀರೆರೆಯಲು ಹಲವು ಕ್ರೀಡೆಗಳನ್ನು ಆಯೋಜಿಸಲಾಗಿದೆ. ಸ್ಪರ್ಧಿಗಳು ಕ್ರೀಡಾ ಮನೋಭಾವದಿಂದ ಕ್ರೀಡೆಯಲ್ಲಿ ಭಾಗವಹಿಸಿ ಯಶಸ್ವಿಯಾಗಸಬೇಕು ಎಂದು ರಾಮೋಜಿಗೌಡ ಕಿವಿಮಾತು ಹೇಳಿದರು.ಈ ವೇಳೆ ವಿಧಾನ ಪರಿಷತ್ತು ಸದಸ್ಯ ಸುಧಾಮ್‌ದಾಸ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ.ರಾಜು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್‌ಕುಮಾರ್, ಮಾಜಿ ಅಧ್ಯಕ್ಷ ಸಿಎನ್‌ಆರ್ ವೆಂಕಟೇಶ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಸತೀಶ್, ಕಾರ್ಯದರ್ಶಿ ಸತೀಶ್‌ಪಾದ್ರಳ್ಳಿ, ಷೆಟಲ್ ಬ್ಯಾಡ್ಮಿಟನ್ ನೇತೃತ್ವ ವಹಿಸಿದ್ದ ರಾಘವೇಂದ್ರ, ಶಿವರಾಜು ಮತ್ತಿತರರು ಹಾಜರಿದ್ದರು. ಕೋಟ್ ...............
ಗ್ರಾಮೀಣ ಸೊಗಡು, ಸಂಸ್ಕೃತಿ, ದೇವರ ಉತ್ಸವಗಳು, ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಎಲ್ಲರಿಗೂ ವೇದಿಕೆ ಕಲ್ಪಿಸುವ ಜೊತೆಗೆ ಉಡುಗೊರೆ ನೀಡುತ್ತಿರುವ ಶಾಸಕ ಎಚ್.ಎ.ಇಕ್ಬಾಲ್‌ಹುಸೇನ್ ಕಾರ್ಯ ಶ್ಲಾಘನೀಯವಾಗಿದೆ. ಕ್ರೀಡೆ, ಮಂಜನರಂಜನಾ ಸ್ಪರ್ಧೆಗಳು ಸಂಭ್ರಮದ ರಾಮೋತ್ಸವಕ್ಕೆ ಸಾಕ್ಷಿಯಾಗಿವೆ.-ಸುಧಾಂದಾಸ್, ವಿಧಾನ ಪರಿಷತ್ತು ಸದಸ್ಯರು18ಕೆಆರ್ ಎಂಎನ್ 4.ಜೆಪಿಜಿ
ರಾಮನಗರದ ಕೆಂಗಲ್ ಹನುಮಂತಯ್ಯ ಕ್ರೀಡಾ ಮತ್ತು ಸಾಂಸ್ಕೃತಿಕ ಕ್ಲಬ್‌ನಲ್ಲಿ ರಾಮೋತ್ಸವದ ಅಂಗವಾಗಿ ಆಯೋಜಿಸಿದ್ದ ಷಟಲ್ ಬ್ಯಾಂಡ್ಮಿಟನ್ ಸ್ಪರ್ಧೆಗೆ ಚಾಲನೆ ನೀಡಿದ ವಿಧಾನ ಪರಿಷತ್ ಸದಸ್ಯ ರಾಮೋಜಿಗೌಡ ಅವರನ್ನು ಶಾಸಕ ಇಕ್ಬಾಲ್ ಹುಸೇನ್ ಅಭಿನಂದಿಸಿದರು.