ರಂಜಾನ್‌, ಯುಗಾದಿ: ಕುರಿ, ಮೇಕೆ ಮಾರಾಟ ಭರಾಟೆ ಜೋರು

KannadaprabhaNewsNetwork |  
Published : Mar 18, 2026, 01:30 AM IST
ಶಿರ್ಷಿಕೆ-೧೭ಕೆ.ಎಂ.ಎಲ್‌.ಆರ್.೫- ಮಾಲೂರು ತಾಲೂಕಿನ ಚಿಕ್ಕತಿರುಪತಿ ಗ್ರಾಮದ ಸಂತೆಯಲ್ಲಿ ಹೊಸತಡಕು ಹಬ್ಬದ ಹಿನ್ನಲೆಯಲ್ಲಿ ಕುರಿ, ಮೇಕೆ ಹಾಗೂ ಕೋಳಿಗಳ ಕೊಳ್ಳುವಿಕೆ ಹಾಗೂ ಮಾರಾಟದ ವ್ಯಾಪಾರ ಜೋರಾಗಿ ನಡೆಯಿತು. | Kannada Prabha

ಸಾರಾಂಶ

ತಾಲೂಕಿನ ಚಿಕ್ಕತಿರುಪತಿ ಗ್ರಾಮದ ಸಂತೆಯಲ್ಲಿ ಯುಗಾದಿ ಹಾಗೂ ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಭರ್ಜರಿ ವ್ಯಾಪಾರ ನಡೆಯಿತು.

ಕನ್ನಡಪ್ರಭ ವಾರ್ತೆ ಮಾಲೂರು

ತಾಲೂಕಿನಾದ್ಯಂತ ಯುಗಾದಿ ಹಾಗೂ ರಂಜಾನ್ ಹಬ್ಬವನ್ನು ಸಾರ್ವಜನಿಕರು ಅದ್ಧೂರಿಯಾಗಿ ಆಚರಿಸುವ ಹಿನ್ನೆಲೆಯಲ್ಲಿ ಚಿಕ್ಕತಿರುಪತಿ ಗ್ರಾಮದಲ್ಲಿ ನಡೆದ ವಾರದ ಸಂತೆಯಲ್ಲಿ ಕುರಿ, ಮೇಕೆ ಹಾಗೂ ನಾಟಿ ಕೋಳಿಗಳ ಕೊಳ್ಳುವಿಕೆ ಹಾಗೂ ಮಾರಾಟದ ವ್ಯಾಪಾರ ನಡೆಯುವುದರ ಮೂಲಕ ಲಕ್ಷಾಂತರ ರು.ಗಳ ವಹಿವಾಟು ನಡೆಯಿತು.ತಾಲೂಕಿನ ಚಿಕ್ಕತಿರುಪತಿ ಗ್ರಾಮದ ಸಂತೆಯಲ್ಲಿ ಯುಗಾದಿ ಹಾಗೂ ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಭರ್ಜರಿ ವ್ಯಾಪಾರ ನಡೆಯಿತು. ಅದರಲ್ಲೂ ಯುಗಾದಿ ಹಬ್ಬದ ಮಾರನೆ ದಿನ ಆಚರಣೆ ಮಾಡುವ ಹೊಸತಡುಕು ಹಬ್ಬದ ಹಿನ್ನೆಲೆಯಲ್ಲಿ ಹಲವು ಭಾಗಗಳಿಂದ ಆಗಮಿಸಿದ್ದ ಮಾರಾಟಗಾರರು ಕುರಿ, ಮೇಕೆ ಹಾಗೂ ನಾಟಿ ಕೋಳಿಗಳನ್ನು ಮಾರಾಟ ಮಾಡಲು ಹಾಗೂ ಕೊಳ್ಳುಲು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.

ಸಂತೆಯಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚು ಕುರಿಗಳು, ಮೇಕೆಗಳು ಜಮಾಯಿಸಿದ್ದವು. ರಾಜ್ಯದ ರಾಮನಗರ ಆನೇಕಲ್, ದೇವನಹಳ್ಳಿ, ಹೊಸಕೋಟೆ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು ಬಂಗಾರಪೇಟೆ, ತಮಿಳುನಾಡಿನ ಹೊಸೂರು, ಬಾಗಲೂರು, ಬೇರಿಕೈ, ಸೇಲಂ, ಕೃಷ್ಣಗಿರಿ, ಆಂಧ್ರಪ್ರದೇಶದ ಚಿತ್ತೂರು, ಮದನಪಲ್ಲಿ, ಕಡಪ ಮುಂತಾದ ಕಡೆಗಳಿಂದ ಆಗಮಿಸಿದ್ದ ವ್ಯಾಪಾರಸ್ಥರು ಕುರಿಗಳನ್ನು ಖರೀದಿಸಿ ವಾಹನಗಳ ಮೂಲಕ ತುಂಬಿಸಿಕೊಂಡು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.ಹೊಸತಡಕು ಹಬ್ಬದ ಹಿನ್ನೆಲೆಯಲ್ಲಿ ಈಗಾಗಲೇ ಮಾಂಸದ ಬೆಲೆಗಳು ಗಣನೀಯವಾಗಿ ಏರಿಕೆಯಾಗಿದೆ. ಮಾರುಕಟ್ಟೆಯಲ್ಲಿ 1 ಕೆ.ಜಿ ಮಾಂಸದ ಬೆಲೆ 750ರಿಂದ 900 ರು., ನಾಟಿ ಕೋಳಿ 800 ರು., ಫಾರಂ ಕೋಳಿ 300 ರು.ಗಳಿಗೆ ಮಾರಾಟವಾಗುತ್ತಿದೆ. ವಾರದ ಸಂತೆಯಲ್ಲಿ ರಾಜ್ಯದ ಬನ್ನೂರು ಕುರಿ, ಆಂದ್ರಪ್ರದೇಶದ ಕುರಿಗಳು ಹಾಗೂ ಮೇಕೆಗಳಿಗೆ ಹೆಚ್ಚಿನ ಬೇಡಿಕೆ ಕಂಡುಬಂದಿತು. ಹಬ್ಬದ ಹಿನ್ನೆಲೆಯಲ್ಲಿ ಮಾಂಸದ ಬೆಲೆಗಳು ಗಣನೀಯವಾಗಿ ಏರಿಕೆಯಾಗಿದ್ದರೂ ಸಹ ಗ್ರಾಹಕರು ಹೆಚ್ಚಿನ ಹಣ ನೀಡಿ ಕುರಿ, ಮೇಕೆ ಹಾಗೂ ನಾಟಿ ಕೋಳಿಗಳನ್ನು ಖರೀದಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಶನಿವಾರ ಮುಂಜಾನೆ ಬೆಳಗ್ಗೆ 6 ಗಂಟೆಯಿಂದಲೇ ಕುರಿ, ಮೇಕೆಗಳನ್ನು ಖರೀದಿಸಲು ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಪಾರಸ್ಥರು ಆಗಮಿಸಿದ ಹಿನ್ನೆಲೆಯಲ್ಲಿ ಮುಖ್ಯರಸ್ತೆಯಲ್ಲೂ ಜನಜಂಗುಳಿ ತುಂಬಿತುಳುಕುತ್ತಿತ್ತು. ಮಧ್ಯಾಹ್ನ 2 ಗಂಟೆಯವರೆಗೂ ವ್ಯಾಪಾರ ವಹಿವಾಟು ನಡೆಯಿತು. ಚಿಕ್ಕತಿರುಪತಿ ಗ್ರಾಮದಲ್ಲಿ ನಡೆದ ವಾರದ ಸಂತೆಯಲ್ಲಿ ಚಿಕ್ಕ ಕುರಿಗಳು 3 ಸಾವಿರ ರು.ಗಳಿಂದ ದೊಡ್ಡ ಕುರಿಗಳು 60 ಸಾವಿರ ರು.ಗಳವರೆಗೂ ಮಾರಾಟವಾದವು. ಮೇಕೆಗಳೂ ಸಹ 20 ಸಾವಿರದಿಂದ 50 ಸಾವಿರದವರೆಗೂ ಮಾರಾಟವಾಗಿ ದಾಖಲೆ ಕಂಡವು. ತಾಲೂಕಿನ ಹಲವಾರು ಭಾಗಗಳಿಂದ ಕುರಿಗಳನ್ನು ಮಾರಾಟ ಮಾಡಲು ಬಂದಿದ್ದವರು ಹೆಚ್ಚಿನ ಲಾಭಕ್ಕೆ ಮಾರಾಟ ಮಾಡಿ ಖುಷಿಯಿಂದ ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಸ ಮುಕ್ತ ಹೊಸಕೋಟೆ ನಿರ್ಮಾಣಕ್ಕೆ ಸಹಕರಿಸಿ
ಅಲ್ಪಸಂಖ್ಯಾತರು ವರ್ಸಸ್‌ ಸಮರ್ಥ: ಕಾಂಗ್ರೆಸ್‌ ಟಿಕೆಟ್‌ಗಾಗಿ ವಾಗ್ವಾದ