ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಟೆಂಡರ್ ಅರ್ಜಿಯೊಂದಿಗೆ ಸಲ್ಲಿಸಬೇಕಾದ ಇಎಂಡಿ ಮೊತ್ತವನ್ನು ₹2 ಕೋಟಿಗಳಿಂದ ₹ 1 ಕೋಟಿಗೆ ಕಡಿತ ಮಾಡಲಾಗಿದೆ. ಭದ್ರತಾ ಠೇವಣಿ ₹ 5 ಕೋಟಿ ಹಾಗೂ ಮುಂಗಡ ಹಣವನ್ನು ₹ 30 ಕೋಟಿ ನಿಗದಿಪಡಿಸಲಾಗಿದೆ. 2024-25ನೇ ಹಂಗಾಮಿನಿಂದಲೇ ಕಬ್ಬು ಅರೆಯುವ ಕಾರ್ಯ ಆರಂಭಿಸಬೇಕಿದ್ದು, ಗುತ್ತಿಗೆ ಅವಧಿಯನ್ನು 30 ವರ್ಷ ನಿಗದಿಪಡಿಸಲಾಗಿದೆ.
ಬಿಡ್ ಸಲ್ಲಿಸುವ ಕಂಪನಿಯ ಧನಾತ್ಮಕ ನಿವ್ವಳ ಮೌಲ್ಯ ₹125 ಕೋಟಿ ಇರಬೇಕು ಎಂದು ತೀರ್ಮಾನಿಸಲಾಗಿದೆ. ಈ ಮೊದಲು ಈ ನಿವ್ವಳ ಮೌಲ್ಯ ₹225 ಕೋಟಿ ಇರಬೇಕು ಎಂದಿತ್ತು. ಬಿಡ್‌ದಾರರ ವಾರ್ಷಿಕ ವಹಿವಾಟು ₹500 ಕೋಟಿ ಇರಬೇಕು. ಕನಿಷ್ಟ ಹತ್ತು ವರ್ಷ ಸಕ್ಕರೆ ಕಾರ್ಖಾನೆ ಅಥವಾ ಡಿಸ್ಟಿಲರಿ ಇಲ್ಲವೆ ಸಹ ವಿದ್ಯುತ್ ಘಟಕ ನಡೆಸಿದ ಅನುಭವ ಹೊಂದಿರಬೇಕು. ಸಕ್ಕರೆ ಕಾರ್ಖಾನೆಯನ್ನು ಸಮರ್ಥವಾಗಿ ನಡೆಸುವ ಅಗತ್ಯ ಹಣಕಾಸಿನ ಭದ್ರತೆ ನೀಡಬೇಕು.ಕಬ್ಬು ಅರೆಯುವ ಸಾಮರ್ಥ್ಯವನ್ನು 5 ಸಾವಿರ ಟಿಸಿಡಿಗಳಿಂದ ಕನಿಷ್ಟ 10 ಸಾವಿರ ಟಿಸಿಡಿಗೆ ವಿಸ್ತರಣೆ ಮಾಡಿ ಸೂಕ್ತವಾದ ಸಹ ವಿದ್ಯುತ್ ಘಟಕ, ಕನಿಷ್ಟ 80 ಕೆಎಲ್ ಪಿಡಿ ಡಿಸ್ಟಿಲರಿ ಅಥವಾ ಎಥೆನಾಲ್ ಘಟಕವನ್ನು ಏಳು ವರ್ಷದೊಳಗೆ ಸ್ಥಾಪನೆ ಮಾಡಬೇಕು ಎಂಬ ಷರತ್ತಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಸಚಿವರು ತಿಳಿಸಿದ್ದಾರೆ.
ಕಾರ್ಖಾನೆಯನ್ನು ಖಾಸಗಿಯವರಿಗೆ ಗುತ್ತಿಗೆ ನೀಡಲು 2020ರ ಅಕ್ಟೋಬರ್ 20ರಂದು ನಡೆದ ಸಚಿವ ಸಂಪುಟ ಸಭೆ ಅನುಮತಿ ನೀಡಿತ್ತು. 2021ರಲ್ಲಿ ಕರೆದಿದ್ದ ಟೆಂಡರ್ ವೇಳೆ ಗುತ್ತಿಗೆದಾರರು ನಿಗದಿತ ಅವಧಿಯಲ್ಲಿ ಗುತ್ತಿಗೆ ಮೊತ್ತ ಪಾವತಿಸದ ಕಾರಣ ಟೆಂಡರ್ ರದ್ದುಪಡಿಸಲಾಗಿತ್ತು.
ಹೀಗಾಗಿ 2024ರ ಜೂನ್ 12ರಂದು ನಡೆದ ಸಭೆಯಲ್ಲಿ ಕೆಲವು ಷರತ್ತು ಮತ್ತು ನಿಬಂಧನೆಗಳಿಗೆ ತಿದ್ದುಪಡಿ ತಂದು ಸಚಿವ ಸಂಪುಟ ಸಭೆಯ ಮುಂದೆ ತರಲಾಗಿತ್ತು ಎಂದು ಸಕ್ಕರೆ ಮತ್ತು ಕಬ್ಬು ಅಭಿವೃದ್ಧಿ ಇಲಾಖೆ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.
2024-25ನೇ ಹಂಗಾಮಿನಿಂದಲೇ ಕಾರ್ಖಾನೆ ಆರಂಭಿಸಬೇಕು. ಗುತ್ತಿಗೆ ಅವಧಿ 30 ವರ್ಷಗಳಿಗೆ ನಿಗದಿ ಮಾಡಬೇಕು.