ಕೆಂಪೇಗೌಡರ ಶ್ರಮದಿಂದ ಬೆಂಗಳೂರು ವಿಶ್ವ ಮಟ್ಟಕ್ಕೆ ಬೆಳೆದಿದೆ: ಸಿ.ಎಂ.ಕ್ರಾಂತಿಸಿಂಹ

KannadaprabhaNewsNetwork |  
Published : Jul 05, 2024, 12:49 AM IST
3ಕೆಎಂಎನ್ ಡಿ15 | Kannada Prabha

ಸಾರಾಂಶ

ಸಮ ಸಮಾಜದ ಗುರಿಯೊಂದಿಗೆ ಚಿಕ್ಕಪೇಟೆ, ಬಳೆ ಪೇಟೆ, ರಾಗಿ ಪೇಟೆ, ಬಿನ್ನಿ ಪೇಟೆ, ಅಕ್ಕಿ ಪೇಟೆ ಸೇರಿದಂತೆ ಇತರೆ ಪೇಟೆಗಳನ್ನು ನಿರ್ಮಿಸುವ ಮೂಲಕ ಎಲ್ಲಾ ಜಾತಿ, ವರ್ಗದ ಜನ ಸಮುದಾಯಕ್ಕೆ ಉದ್ಯೋಗ ಕಲ್ಪಿಸಿ ಆಸರೆಯಾಗುವ ಮೂಲಕ ವಿಶ್ವದ ಪ್ರಥಮ ಸಮಾಜವಾದಿ ಚಿಂತಕರೆನ್ನಿಸಿಕೊಂಡಿದ್ದಾರೆ ನಾಡಪ್ರಭು ಕೆಂಪೇಗೌಡರು.

ಕನ್ನಡಪ್ರಭ ವಾರ್ತೆ ಮದ್ದೂರು

ನಾಡಪ್ರಭು ಕೆಂಪೇಗೌಡರು ಬೆಂಗಳೂರು ನಗರವನ್ನು ವಿಶ್ವಮಟ್ಟದಲ್ಲಿ ಬೆಳಗುವಂತೆ ಕಟ್ಟಿದ ಕೀರ್ತಿ ಅವಿಸ್ಮರಣಿಯವಾದದ್ದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಯಡವನಹಳ್ಳಿ ಸಿ.ಎಂ.ಕ್ರಾಂತಿಸಿಂಹ ಸ್ಮರಿಸಿದರು.ಪಟ್ಟಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿಯಲ್ಲಿ ಮಾತನಾಡಿ, ವಿಜಯನಗರ ಸಾಮ್ರಾಜ್ಯದ ಶ್ರೀಕೃಷ್ಣದೇವರಾಯರ ಆಡಳಿತದಿಂದ ಪ್ರೇರಿತರಾದ ನಾಡಪ್ರಭು ಕೆಂಪೇಗೌಡ ಅವರು ಸಮಾನತೆಯ ತತ್ವದಡಿಯಲ್ಲಿ ಬೆಂಗಳೂರು ನಗರವನ್ನು ಕಟ್ಟಿ ವಿಶ್ವ ವಿಖ್ಯಾತಗೊಳಿಸಿ ಕೋಟ್ಯಂತರ ಮಂದಿಯ ಬದುಕಿಗೆ ಆಸರೆಯಾಗಿದ್ದಾರೆ ಎಂದರು.

ಸಮ ಸಮಾಜದ ಗುರಿಯೊಂದಿಗೆ ಚಿಕ್ಕಪೇಟೆ, ಬಳೆ ಪೇಟೆ, ರಾಗಿ ಪೇಟೆ, ಬಿನ್ನಿ ಪೇಟೆ, ಅಕ್ಕಿ ಪೇಟೆ ಸೇರಿದಂತೆ ಇತರೆ ಪೇಟೆಗಳನ್ನು ನಿರ್ಮಿಸುವ ಮೂಲಕ ಎಲ್ಲಾ ಜಾತಿ, ವರ್ಗದ ಜನ ಸಮುದಾಯಕ್ಕೆ ಉದ್ಯೋಗ ಕಲ್ಪಿಸಿ ಆಸರೆಯಾಗುವ ಮೂಲಕ ವಿಶ್ವದ ಪ್ರಥಮ ಸಮಾಜವಾದಿ ಚಿಂತಕರೆನ್ನಿಸಿಕೊಂಡಿದ್ದಾರೆ ಎಂದರು.

ಕಸಾಪ ತಾಲೂಕು ಅಧ್ಯಕ್ಷ ವಳಗೆರಹಳ್ಳಿ ವಿ.ಸಿ.ಉಮಾಶಂಕರ ಮಾತನಾಡಿ, ನಾಡಪ್ರಭು ಕೆಂಪೇಗೌಡರು ಆಡಳಿತ ಇಂದಿನ ರಾಜಕಾರಣಿಗಳಿಗೆ ಮಾರ್ಗಸೂಚಿ ಕೈಗನ್ನಡಿಯಾಗಿದೆ. ಕೆಂಪೇಗೌಡರ ಆಡಳಿತ ವೈಖರಿಯನ್ನು ಜನಪ್ರತಿನಿಧಿಗಳು ಮೈಗೂಡಿಸಿಕೊಂಡು ಜನಪರ ಮತ್ತು ಬದ್ದತೆಯ ಆಡಳಿತ ನೀಡಬೇಕು ಎಂದರು.

ಕಸ್ತೂರಿ ಕರ್ನಾಟಕ ಜನಪರ ವೇದಿಕೆ ತಾಲೂಕು ಅಧ್ಯಕ್ಷ ತಿಪ್ಪೂರು ರಾಜೇಶ್ ಮಾತನಾಡಿ, ಕೆಂಪೇಗೌಡರು ಕೃಷಿ, ಕೈಗಾರಿಕೆ, ವಾಣಿಜ್ಯ, ಮೂಲ ಸೌಕರ್ಯ, ನಗರಾಭಿವೃದ್ಧಿ, ನೀರಾವರಿ ಸೇರಿದಂತೆ ಇತರ ಕ್ಷೇತ್ರಗಳ ಸರ್ವತೋಮುಖ ಬೆಳವಣಿಗೆಗೆ ಕಾರಣರಾಗಿದ್ದಾರೆ. ಅವರ ಅಂದಿನ ಪರಿಶ್ರಮದ ಫಲವಾಗಿ ಇಂದಿಗೂ ನಾಗರಿಕರು ಉತ್ತಮ ಜೀವನ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವೇಳೆ ಮಾಜಿ ಸೈನಿಕ ವಿ.ಡಿ.ಶ್ರೀನಿವಾಸ್, ಸಕ್ಕರೆ ನಾಗರಾಜು, ವಿ.ಎಚ್.ಶಿವಲಿಂಗಯ್ಯ, ತಿಪ್ಪೂರು ರಾಜೇಶ್, ಯರಗನಹಳ್ಳಿ ಮಹಾಲಿಂಗು, ಆಲೂರು ಚನ್ನಪ್ಪ, ಸೋಂಪುರ ಉಮೇಶ್, ವೀರಪ್ಪ, ಎಸ್.ಎಲ್. ಉಮೇಶ್, ಮುರುಗ, ಬಿದರಕೋಟೆ ರಮೇಶ್, ಪ್ರಭಾ, ಅಜ್ಜಹಳ್ಳಿ ಕರಿಯಪ್ಪ, ರವಿ ಸೇರಿದಂತೆ ಇತರರು ಇದ್ದರು.ಸೌಲಭ್ಯ ಪಡೆಯಲು ವಿಕಲಚೇತನರಿಂದ ಅರ್ಜಿ ಆಹ್ವಾನ

ಮಂಡ್ಯ: ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಜಿಲ್ಲಾ ವ್ಯಾಪ್ತಿಯ ಅರ್ಹ ವಿಕಲ ಚೇತನರುಗಳಿಂದ 2024-25 ನೇ ಸಾಲಿಗೆ ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಟಾಕಿಂಗ್ ಲ್ಯಾಪ್ ಟಾಪ್, ಬ್ರೈಲ್ ಕಿಟ್, ಯಂತ್ರಚಾಲಿತ ತ್ರಿಚಕ್ರ ವಾಹನ, ಹೊಲಿಗೆ ಯಂತ್ರ, ಸಾಧನ ಸಲಕರಣೆ, ಶಿಶು ಪಾಲನಾ ಭತ್ಯೆ, ಆಧಾರ ಯೋಜನೆ, ವೈದ್ಯಕೀಯ ಪರಿಹಾರ ನಿಧಿ, ನಿರುದ್ಯೋಗ ಭತ್ಯೆ, ಸಾಧನೆ ಯೋಜನೆ, ಪ್ರತಿಭೆ ಯೋಜನೆ ಹಾಗೂ ಮರಣ ಪರಿಹಾರ ನಿಧಿ ಯೋಜನೆಗಳಿಗೆ 2024-25 ನೇ ಸಾಲಿಗೆ ಸೌಲಭ್ಯ ಪಡೆಯಲು ಆಗಸ್ಟ್ 31 ರೊಳಗೆ ಗ್ರಾಮ-ಒನ್, ಕರ್ನಾಟಕ ಒನ್, ಬೆಂಗಳೂರು-ಒನ್ ಆನ್ ಲೈನ್ ಮೂಲಕ ಸೇವಾಸಿಂಧು ವೆಬ್ ಸೈಟ್ https://sevasindu.karnataka.gov.in/Sevasindhu/kannada ಪೋರ್ಟಲ್ ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು. ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿದ ದಾಖಲಾತಿಗಳ ಒಂದು ಪ್ರತಿಯನ್ನು ಜಿಲ್ಲಾ ಕಚೇರಿಗೆ ಸಲ್ಲಿಸುವುದು.ಹೆಚ್ಚಿನ ಮಾಹಿತಿಗಾಗಿ ತಮ್ಮ ತಾಲೂಕು ಪಂಚಾಯ್ತಿ ಕಾರ್ಯಾಲಯದಲ್ಲಿ ಕರ್ತವ್ಯ ನಿರ್ವಹಿಸುವ ವಿವಿದ್ದೋದ್ದೇಶ ಪುನರ್ವಸತಿ ಕಾರ್ಯಕರ್ತರನ್ನು ಹಾಗೂ ತಮ್ಮ ಗ್ರಾಪಂ, ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯ್ತಿಯಲ್ಲಿ ಕಾರ್ಯಾಲಯದಲ್ಲಿ ಕರ್ತವ್ಯ ನಿರ್ವಹಿಸುವ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು, ನಗರ ಪುನರ್ವಸತಿ ಕಾರ್ಯಕರ್ತರನ್ನು ಭೇಟಿ ಮಾಡಿ ಅಥವಾ 08232-231090/239234 ಗೆ ಕರೆಮಾಡಿ ಮಾಹಿತಿ ಪಡೆಯಬಹುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುದುರೆಗಳಲ್ಲಿ ಗ್ಲ್ಯಾಂಡರ್ಸ್ ರೋಗ ಪತ್ತೆ: ಟರ್ಫ್ ಕ್ಲಬ್‌ ಸುತ್ತ ಪ್ರಾಣಿ ಸಂಚಾರ ನಿರ್ಬಂಧ
ಮುಸ್ಲಿಮರು ಸೂರ್‍ಯನಮಸ್ಕಾರ ಮಾಡ್ಬೇಕು : ಹೊಸಬಾಳೆ ಕರೆ