27ರಂದು ರಾಜ್ಯಾದ್ಯಂತ ರಣಾಕ್ಷ ಸಿನಿಮಾ ಬಿಡುಗಡೆ: ನಿರ್ದೇಶಕ ಕೆ.ರಾಘವ

KannadaprabhaNewsNetwork |  
Published : Sep 24, 2024, 01:51 AM IST
ಕ್ಯಾಪ್ಷನಃ23ಕೆಡಿವಿಜಿ34ಃರಣಾಕ್ಷ ಚಿತ್ರ ಬಿಡುಗಡೆ ಕುರಿತು ದಾವಣಗೆರೆಯಲ್ಲಿ ಚಿತ್ರದ ನಿರ್ದೇಶಕ ಕೆ.ರಾಘವ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು. | Kannada Prabha

ಸಾರಾಂಶ

ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಸೀರುಂಡೆ ರಘು ನಾಯಕ, ರಕ್ಷಾ, ರೂಹಿ ನಾಯಕಿಯರಾಗಿ ನಟಿಸಿರುವ ರಣಾಕ್ಷ ಚಲನಚಿತ್ರವು ಸೆ.27ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ ಕೆ.ರಾಘವ ದಾವಣಗೆರೆಯಲ್ಲಿ ಹೇಳಿದ್ದಾರೆ.

- ದೇವರು, ದೆವ್ವದ ಸಂಘರ್ಷ ಸುತ್ತ ನಡೆಯೋ ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಸಿನಿಮಾ - - - ಕನ್ನಡಪ್ರಭ ವಾರ್ತೆ ದಾವಣಗೆರೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಸೀರುಂಡೆ ರಘು ನಾಯಕ, ರಕ್ಷಾ, ರೂಹಿ ನಾಯಕಿಯರಾಗಿ ನಟಿಸಿರುವ ರಣಾಕ್ಷ ಚಲನಚಿತ್ರವು ಸೆ.27ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ ಕೆ.ರಾಘವ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಟಿಯಲ್ಲಿ ಮಾತನಾಡಿದ ಅವರು, ರಣಾಕ್ಷ ಚಿತ್ರವು ದೇವರು, ದೆವ್ವದ ನಡುವಿನ ಸಂಘರ್ಷದ ಸುತ್ತ ನಡೆಯೋ ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಹೊಂದಿದೆ. ಚಿತ್ರಕ್ಕೆ ತಾವೇ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದೇವೆ ಎಂದರು.

ಚಿತ್ರವನ್ನು ಕೆವಿಆರ್ ಪಿಕ್ಚರ್ಸ್ ಮೂಲಕ ಎಚ್.ಎಸ್. ರಾಮು, ಶೋಭಾ ಶಿವಾಜಿ ರಾವ್, ಉಮಾ ಮಹೇಶ್ವರ ಸೇರಿ ನಿರ್ಮಿಸಿದ್ದಾರೆ. ಎಲ್ಲ ವಯೋಮಾನದವರಿಗೂ ಇಷ್ಟವಾಗುವ ಹಳ್ಳಿ ಸೊಗಡಿನಲ್ಲಿ ಫ್ಯಾಮಿಲಿ, ಹಾರರ್, ಥ್ರಿಲ್ಲರ್ ಕಥಾನಕ ಈ ಚಿತ್ರದಲ್ಲಿದೆ. ವಿಶಾಲ್ ಆಲಾಪ್ ಅವರ ಸಂಗೀತ, ದೀಪಕ್‌ ಕುಮಾರ್ ಛಾಯಾಗ್ರಹಣ ಈ ಚಿತ್ರಕ್ಕಿದೆ ಎಂದು ಹೇಳಿದರು.

ಸಕಲೇಶಪುರ, ಹೊನ್ನಾವರ, ಮೂಡಬಿದ್ರೆ, ಕಾರ್ಕಳ ಸೇರಿದಂತೆ ಕರ್ನಾಟಕದ ಹಲವಾರು ಸುಂದರ ಸ್ಥಳಗಳಲ್ಲಿ ರಣಾಕ್ಷ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಚಿತ್ರದಲ್ಲಿ ಮೂರು ಹಾಡುಗಳು ಹಾಗೂ 3 ಸಾಹಸ ದೃಶ್ಯಗಳಿವೆ ಎಂದರು.

ನಟ ರಘು ಸೀರುಂಡೆ ಮಾತನಾಡಿ, ಈ ಹಿಂದೆ ಮರೆಯದೇ ಕ್ಷಮಿಸು ಚಿತ್ರ ನಿರ್ದೇಶಿಸಿದ್ದೆ. ನನ್ನ ನಿರ್ದೇಶನದ ಎರಡನೇ ಚಿತ್ರವಿದು. ನಿರ್ಮಾಪಕರಿಗೆ ಈ ಚಿತ್ರದ ಒಂದು ಲೈನ್ ಕಥೆ ಹೇಳಿದಾಗ ಇಷ್ಟಪಟ್ಟು ಒಪ್ಪಿದರು. ರಣಾಕ್ಷ ಎಂದರೆ ಹದ್ದಿನಂತೆ ಕಣ್ಣಿಟ್ಟು ಕಾಯುವವನು ಎಂದರ್ಥ. ಫ್ಯಾಮಿಲಿ ಹಿನ್ನೆಲೆಯಲ್ಲಿ ನಡೆಯುವ ಸಸ್ಪೆನ್ಸ್, ಥ್ರಿಲ್ಲರ್ ಕಥಾನಕ ಚಿತ್ರದಲ್ಲಿದೆ ಎಂದು ಮಾಹಿತಿ ನೀಡಿದರು.

ನಾನು ಕೂಡ ಮಾಧ್ಯಮದಲ್ಲಿ ಕೆಲಸ ಮಾಡಿದವನು. ಸುಮಾರು 20ಕ್ಕೂ ಹೆಚ್ಚು ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದ್ದೇನೆ. ಇದೇ ಮೊದಲ ಬಾರಿಗೆ ನಾಯಕನ ಪಾತ್ರ ಮಾಡಿದ್ದೇನೆ. ಊರಲ್ಲಿ 4 ಜನ ಸ್ನೇಹಿತರ ಜೊತೆ ಸಾಗುವ ಪಾತ್ರ. ಊರಲ್ಲಿ ನಡೆಯುವ ಘಟನೆಗಳಿಗೂ, ನನಗೂ ಏನು ಸಂಬಂಧ ಎನ್ನುವುದು ಕೊನೆಯಲ್ಲಿ ರಿವೀಲ್ ಆಗುತ್ತೆ ಎಂದು ಹೇಳಿದರು.

ಚಿತ್ರದ ನಾಯಕಿ ರಕ್ಷಾ ಮಾತನಾಡಿ, ನಾನು ಮುಗ್ಧ ಹಳ್ಳಿ ಹುಡುಗಿಯ ಪಾತ್ರ ಮಾಡಿದ್ದೇನೆ. ನನ್ನ ಮೊದಲ ಚಿತ್ರವಿದು ಎಂದರು.

ಸುದ್ದಿಗೋಷ್ಠಿಯಲ್ಲಿ ನಾಯಕಿ ರೂಹೀ, ಮನೋಜ್, ನಾಗರಾಜ, ಆನಂದ ಇತರರು ಇದ್ದರು.

- - - -23ಕೆಡಿವಿಜಿ34ಃ:

ರಣಾಕ್ಷ ಚಿತ್ರ ಬಿಡುಗಡೆ ಕುರಿತು ದಾವಣಗೆರೆಯಲ್ಲಿ ನಿರ್ದೇಶಕ ಕೆ.ರಾಘವ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!