ದಾವಣಗೆರೆ: ನಗರ ಹಾಗೂ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ದಾವಣಗೆರೆ ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದಾರೆ. ದಕ್ಷತೆ, ಬದ್ಧತೆಯಿಂದ ಕಾರ್ಯನಿರ್ವಹಿಸಲಾಗದಿದ್ದರೆ ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟು, ಕಾಂಗ್ರೆಸ್ ಸೇರಿ, ಆ ಪಕ್ಷದ ಕಚೇರಿಯಲ್ಲೇ ಇರಲಿ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐ ಲವ್ ಮಹಮ್ಮದ್ ಫ್ಲೆಕ್ಸ್ ವಿಚಾರವಾಗಿ ಕಾರ್ಲ್ ಮಾರ್ಕ್ಸ್ ನಗರ ಗಲಾಟೆಯಲ್ಲಿ ಕಲ್ಲು ತೂರಾಟ ನಡೆದೇ ಇಲ್ಲ ಎಂದಿದ್ದಾರೆ. ಗಲಾಟೆ ಮಾಡಿದ ಮುಸ್ಲಿಂ ಗೂಂಡಾಗಳನ್ನು ಬಿಟ್ಟು, ಸಂತ್ರಸ್ಥ ದೂರುದಾರ ಯುವಕ ರಂಗನಾಥನನ್ನೇ ಬಂಧಿಸಿದ್ದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.ಮಟ್ಟಿಕಲ್ಲು ಫ್ಲೆಕ್ಸ್ ವಿಚಾರದಲ್ಲೂ ಹಿಂದೂಗಳ ಮೇಲೇ ಎಫ್ಐಆರ್ ಹಾಕಿದ್ದರು. ಈಗ ಕಾರ್ಲ್ ಮಾರ್ಕ್ಸ್ ನಗರದಲ್ಲಿ ಮುಸ್ಲಿಂ ಗೂಂಡಾಗಳ ಕೃತ್ಯಕ್ಕೂ ಅಮಾಯಕ ಹಿಂದೂ ಯುವಕನನ್ನೇ ಬಂಧಿಸಿದ್ದಾರೆ. 400ಕ್ಕೂ ಹೆಚ್ಚು ಮುಸ್ಲಿಂ ಗೂಂಡಾಗಳು ಹಿಂದೂಗಳ ಮನೆಗಳ ಮೇಲೆ ಕಲ್ಲು ತೂರಾಟ ಮಾಡಿ, ಸ್ಥಳೀಯರ ಮೇಲೆ ಹಲ್ಲೆ ಮಾಡಿದ್ದು, ವೀಡಿಯೋಗಳಿವೆ. ಘಟನಾ ಸ್ಥಳಕ್ಕೆ ಗುರುವಾರ ಮಧ್ಯಾಹ್ನ ತೆರಳಿ ಅಲ್ಲಿದ್ದ ಹಿಂದೂ ಕುಟುಂಬಗಳಿಗೆ ಧೈರ್ಯ ತುಂಬಿದ್ದೇವೆ. ಅಲ್ಲಿ ತೂರಲಾಗಿದ್ದ ಕಲ್ಲುಗಳನ್ನು ತಂದಿದ್ದೇವೆ ಎಂದರು.
ಬಿಜೆಪಿ ಮುಖಂಡರಾದ ಚಂದ್ರಶೇಖರ ಪೂಜಾರ, ಬಿ.ಎಂ. ಸತೀಶ ಕೊಳೇನಹಳ್ಳಿ, ಎನ್.ಎಚ್.ಹಾಲೇಶ ನಾಯ್ಕ, ರಾಜು ವೀರಣ್ಣ, ಪ್ರವೀಣ ಜಾಧವ್, ಪಂಜು ಪೈಲ್ವಾನ್, ರವಿ ಗೌಡ, ಚೇತನ್, ಅಜಯ್ ಇತರರು ಇದ್ದರು.- - -
(ಟಾಪ್ ಕೋಟ್)ಮುಸ್ಲಿಂ ಗೂಂಡಾಗಳು ಮಾರಕಾಸ್ರ್ರಗಳನ್ನು ಹಿಡಿದು, ಓಡಾಡುತ್ತಿರುವ ವೀಡಿಯೋಗಳಿದ್ದರೂ ಎಸ್‌ಪಿ ಯಾಕೆ ಕೇಸ್ ದಾಖಲಿಸಿಲ್ಲ. ಎಸ್‌ಪಿ ಅವರೇ ನೀವು ನನ್ನ ಸಹೋದರಿಯಂತೆ. ನಿಮ್ಮ ನಡವಳಿಕೆಗಳು ಬದಲಾವಣೆ ಆಗಬೇಕು. ಕಾರ್ಲ್ ಮಾರ್ಕ್ಸ್ ನಗರ ಹಿಂದೂಗಳ ಮೇಲಿನ ದಾಳಿ-ದೌರ್ಜನ್ಯ ಪ್ರಕರಣ ಖಂಡಿಸಿ ಹಿಂದೂಪರ ಸಂಘಟನೆಗಳು ಕೈಗೊಳ್ಳುವ ಹೋರಾಟಕ್ಕೆ ಸಂಪೂರ್ಣ ಬೆಂಬಲವಿದೆ.
- ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ- - -
-26ಕೆಡಿವಿಜಿ7.ಜೆಪಿಜಿ: