ಸಚಿವ ರಾಜಣ್ಣ ಬಗ್ಗೆ ಮಾತನಾಡಲು ರಂಗಸ್ವಾಮಿಗೆ ನೈತಿಕತೆ ಇಲ್ಲ

KannadaprabhaNewsNetwork |  
Published : Jan 12, 2025, 01:16 AM IST
ಪತ್ರಿಕಾಗೋಷ್ಠಿಯಲ್ಲಿ ಶನಿವಾರಕಾಂಗ್ರೆಸ್ ಮುಖಂಡರಾದ ಚಂದ್ರು  ಮಾತನಾಡಿದರು | Kannada Prabha

ಸಾರಾಂಶ

ಹಿರಿಯರಾದ ಉಸ್ತುವಾರಿ ಸಚಿವರು, ೪-೫ ಬಾರಿ ಶಾಸಕರಾಗಿ ನೇರ ನುಡಿಯುವಂತಹ, ನಿರಂತರವಾಗಿ ಜಿಲ್ಲೆಯಲ್ಲಿ ಎಲ್ಲರ ಸಂಪರ್ಕ ಹೊಂದಿರುವಂತಹ ಉಸ್ತುವಾರಿ ಸಚಿವರ ಬಗ್ಗೆ ಮಾತನಾಡಲು ಪರಾಜಿತ ಅಭ್ಯರ್ಥಿ ರಂಗಸ್ವಾಮಿಗೆ ಯಾವ ನೈತಿಕತೆ ಇದೆ ಎಂದು ಕಾಂಗ್ರೆಸ್ ಮುಖಂಡ ಚಂದ್ರು ಪ್ರಶ್ನೆ ಮಾಡಿ ಸಿಡಿಮಿಡಿಗೊಂಡರು. ಇವರು ಉಸ್ತುವಾರಿ ಸಚಿವರ ಬಳಿಯೂ ಹೋಗಿಲ್ಲ, ಕಾರ್ಯಕರ್ತರನ್ನು ಸಭೆಗೂ ಆಹ್ವಾನಿಸದೆ ಸುಮ್ಮನೆ ಉಸ್ತುವಾರಿ ಸಚಿವರ ಬಗ್ಗೆ ಮಾತನಾಡಲು ಇವರಿಗೆ ಯಾವ ನೈತಿಕತೆ ಇದೆ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ಹಿರಿಯರಾದ ಉಸ್ತುವಾರಿ ಸಚಿವರು, ೪-೫ ಬಾರಿ ಶಾಸಕರಾಗಿ ನೇರ ನುಡಿಯುವಂತಹ, ನಿರಂತರವಾಗಿ ಜಿಲ್ಲೆಯಲ್ಲಿ ಎಲ್ಲರ ಸಂಪರ್ಕ ಹೊಂದಿರುವಂತಹ ಉಸ್ತುವಾರಿ ಸಚಿವರ ಬಗ್ಗೆ ಮಾತನಾಡಲು ಪರಾಜಿತ ಅಭ್ಯರ್ಥಿ ರಂಗಸ್ವಾಮಿಗೆ ಯಾವ ನೈತಿಕತೆ ಇದೆ ಎಂದು ಕಾಂಗ್ರೆಸ್ ಮುಖಂಡ ಚಂದ್ರು ಪ್ರಶ್ನೆ ಮಾಡಿ ಸಿಡಿಮಿಡಿಗೊಂಡರು. ಬನವಾಸೆ ರಂಗಸ್ವಾಮಿ ವಿಧಾನಸಭಾ ಚುನಾವಣೆಯಲ್ಲಿ ೪೩೦೦ ಮತವನ್ನು ಪಡೆದು, ಠೇವಣಿಯನ್ನು ಸಹ ಪಡೆಯದೆ ಈಗ ಎಲ್ಲಿದ್ದಾರೆ ಎಂದು ಪ್ರಶ್ನಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಹಾಸನ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿಯಾದಂತಹ ಬನವಾಸೆ ರಂಗಸ್ವಾಮಿಯವರು ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎನ್.ರಾಜಣ್ಣರವರ ಮೇಲೆ ಪತ್ರಿಕಾಗೋಷ್ಠಿ ನಡೆಸಿ ಇವರನ್ನು ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಿಂದ ತೆಗೆಯಬೇಕೆಂದು ಹೇಳಿಕೆ ನೀಡಿರುತ್ತಾರೆ, ಇದು ಇವರ ಮುರ್ಖತನ. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಬರುತ್ತಿಲ್ಲ, ಕಾಂಗ್ರೆಸ್ ಕಾರ್ಯಕರ್ತರ ಸಮಸ್ಯೆ ಕೇಳುತ್ತಿಲ್ಲ, ಯಾವುದೇ ಅಭಿವೃದ್ಧಿ ಕಾರ್ಯನಡೆಸುತ್ತಿಲ್ಲ ಎಂದು ಆಪಾದನೆ ಮಾಡಿರುತ್ತಾರೆ. ಬನವಾಸೆ ರಂಗಸ್ವಾಮಿ ವಿಧಾನಸಭಾ ಚುನಾವಣೆಯಲ್ಲಿ ೪೩೦೦ ಮತವನ್ನು ಪಡೆದು, ಠೇವಣಿಯನ್ನು ಸಹ ಪಡೆಯದೆ ಈಗ ಎಲ್ಲಿದ್ದಾರೆ? ಮತ್ತು ಹಾಸನ ವಿಧಾನಸಭಾ ಕ್ಷೇತ್ರದ ಯಾವ ಕಾರ್ಯಕರ್ತರ ಮತ್ತು ಗ್ರಾಮಾಂತರದಲ್ಲಿರುವ ಮತ್ತು ನಗರದ ಜನರ ಕುಂದುಕೊರತೆಗಳನ್ನು ಕೇಳಿದ್ದಾರೆ. ಮತ್ತು ಇವರು ಎಷ್ಟು ಕಾರ್ಯಕರ್ತರ ಸಭೆಗಳನ್ನು ಮಾಡಿರುತ್ತಾರೆ. ಹಾಗೂ ಎಷ್ಟು ಕಾರ್ಯಕರ್ತರ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಬಳಿ ಸಮಸ್ಯೆಯನ್ನು ಪರಿಹರಿಸಿದ್ದಾರೆ. ಇವರು ಉಸ್ತುವಾರಿ ಸಚಿವರ ಬಳಿಯೂ ಹೋಗಿಲ್ಲ, ಕಾರ್ಯಕರ್ತರನ್ನು ಸಭೆಗೂ ಆಹ್ವಾನಿಸದೆ ಸುಮ್ಮನೆ ಉಸ್ತುವಾರಿ ಸಚಿವರ ಬಗ್ಗೆ ಮಾತನಾಡಲು ಇವರಿಗೆ ಯಾವ ನೈತಿಕತೆ ಇದೆ ಎಂದರು. ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ೧೧೬ ಬೂತ್‌ಗಳಿಗೆ ಏಜೆಂಟ್ ಫಾರಂಗಳನ್ನು ನೀಡದ ವ್ಯಕ್ತಿ. ಒಂದು ಗ್ರಾಮ ಪಂಚಾಯಿತಿ ಮತ್ತು ಸೊಸೈಟಿ ಚುನಾವಣೆಗೆ ನಿಲ್ಲದ ವ್ಯಕ್ತಿ ಹಿರಿಯರಾದ ಉಸ್ತುವಾರಿ ಸಚಿವರಾದಂತಹ ೪-೫ ಬಾರಿ ಶಾಸಕರಾದಂತಹ ನೇರ ನುಡಿಯಿರುವಂತಹ, ನಿರಂತರವಾಗಿ ಜಿಲ್ಲೆಯಲ್ಲಿ ಎಲ್ಲರ ಸಂಪರ್ಕ ಹೊಂದಿರುವಂತಹ ಉಸ್ತುವಾರಿ ಸಚಿವರ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ. ಹಾಸನ ಜಿಲ್ಲೆಗೆ ಉಸ್ತುವಾರಿ ಸಚಿವರಾಗಿ ಬಂದನಂತರ ಕೆ.ಎನ್.ರಾಜಣ್ಣನವರು ಯಾವುದೇ ಒಬ್ಬ ಜಿಲ್ಲೆಯ ಒಬ್ಬ ಕಾರ್ಯಕರ್ತರು ಸಾಮಾನ್ಯ ಜನರಿರಬಹುದು, ಎಲ್ಲರಿಗೂ ಕೂಡ ಸೌಮ್ಮ ಸ್ವಭಾವದಿಂದ ಕೆಲಸ ಮಾಡುವ ವ್ಯಕ್ತಿ ಕೆ.ಎನ್.ರಾಜಣ್ಣನವರು. ಪಂಚಾಯಿತಿ ವ್ಯಾಪ್ತಿಗೆ ಬರುವ ನಗರಸಭೆ ವ್ಯಾಪ್ತಿಗೆ ಬಂದಂತಹ ಇ-ಖಾತೆಯನ್ನು ಮಾಡಿದ ಸಂದರ್ಭದಲ್ಲಿ ಅವರೇ ಖುದ್ದು ಡಿ.ಸಿ. ಮತ್ತು ಎಲ್ಲಾ ಅಧಿಕಾರಿಗಳನ್ನು ಸಭೆ ಕರೆದು ಖಾತೆ ಮಾಡಲು ಹೇಳಿ ಪರಿಹಾರ ಮಾಡಿದರು. ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯನ್ನು ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ಎಲ್ಲಾ ಸಚಿವರುಗಳನ್ನು ಜಿಲ್ಲೆಗೆ ಕರೆಸಿ ಉದ್ಘಾಟನೆ ಮಾಡಿಸಿ ರೈತರಿಗೆ ನೀರು ಬಿಡಿಸುವ ಕೆಲಸ ಮಾಡಿದ ವ್ಯಕ್ತಿ, ಹಾಸನ ನಗರಸಭೆಯನ್ನು ಮೇಲ್ದರ್ಜೆಗೇರಿಸಿ ಮಹಾನಗರ ಪಾಲಿಕೆಗೆ ಅನುಮೋದನೆಯನ್ನು ನೀಡಿಸಿದ ವ್ಯಕ್ತಿ, ಯಾವ ಒಬ್ಬ ಅಧಿಕಾರಿಗಳಿಗೂ ಹಣದ ನಿರೀಕ್ಷೆಯನ್ನು ಇಟ್ಟಿಲ್ಲದ ವ್ಯಕ್ತಿ ಮತ್ತು ಅಧಿಕಾರಿಗಳು ಸಾರ್ವಜನಿಕರು ಇಷ್ಟ ಪಡುವ ಹಾಸನ ಜಿಲ್ಲಾ ಉಸ್ತುವಾರಿ ಸಚಿವರ ಮೇಲೆ ಸುಖಾಸುಮ್ಮನೆ ದೂರು ಹೊರಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಆರೀಫ್, ರಾಘವೇಂದ್ರ, ಜಗದೀಶ್, ಅಸ್ಲಾಂ ಪಾಷಾ, ರಾಮೇಗೌಡ, ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಳಿಂಗ ಸರ್ಪ ರಕ್ಷಣೆ
ಸಂವಿಧಾನ ದಿನಾಚರಣೆ: ವಿವಿಧ ಸ್ಪರ್ಧೆ ಆಯೋಜನೆ