ಕನ್ನಡಪ್ರಭ ವಾರ್ತೆ ಕೆಂಭಾವಿ
ದಸರಾ ಉತ್ಸವ ಸಮಿತಿ ವತಿಯಿಂದ ಪಟ್ಟಣದ ಹೇಮರೆಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ಗುರುವಾರ ಮಹಿಳೆಯರಿಗಾಗಿ ಆಯೋಜಿಸಿದ್ದ ರಂಗೋಲಿ ಸ್ಪರ್ಧೆ ಕಾರ್ಯಕ್ರಮದಲ್ಲಿ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿ ಮಾತನಾಡಿದ ಅವರು, ರಂಗೋಲಿ ಬಿಡಿಸುವುದು, ಮೆಹಂದಿ ಹಾಕುವುದು, ಕಸೂತಿ ಕಲೆ ಸಹಿತ ಹಲವು ಸೂಕ್ಷ್ಮ ಮತ್ತು ಚತುರತೆಯ ಕಲೆಗಳು ಪ್ರಾಚೀನ ಕಾಲದಿಂದ ಬಂದ ಅದ್ಭುತ ಕಲೆಗಳಾಗಿವೆ. ಇದು ನೈಸರ್ಗಿಕವಾಗಿ ಒದಗಿ ಬಂದ ಮಹಾನ್ ಕಲೆಯಾಗಿದ್ದು, ಅದರಲ್ಲೂ ರಂಗೋಲಿ ಚಿತ್ತಾರ ಬಿಡಿಸುವುದರಿಂದ ನಮ್ಮ ಮನಸ್ಸಿನ ಚಂಚಲತೆಗಳು ದೂರವಾಗಿ ಮನಸ್ಸಿಗೆ ಮುದ ನೀಡುವುದರ ಜತೆಗೆ ರಂಗೋಲಿ ಕಲೆಯಲ್ಲಿ ನೈಪುಣ್ಯತೆ ಸಾಧಿಸುವ ಒಂದು ಮಾರ್ಗವಾಗಿದೆ. ಈ ದಸರಾ ಉತ್ಸವ ಸಮಿತಿ ವತಿಯಿಂದ ಆಯೋಜನೆ ಮಾಡಿರುವ ಈ ರಂಗೋಲಿ ಸ್ಪರ್ಧೆ ಹಲವು ಮಹಿಳೆಯರಿಗೆ ತಮ್ಮ ಪ್ರತಿಭಾ ಪ್ರದರ್ಶನ ತೋರುವ ಒಂದು ದೊಡ್ಡ ವೇದಿಕೆಯಾಗಿದೆ ಎಂದು ಹೇಳಿದರು.
ಹೇಮರೆಡ್ಡಿ ಮಲ್ಲಮ್ಮ ಸಂಸ್ಥೆ ನಿರ್ದೇಶಕ ರಾಮನಗೌಡ ವಂದಗನೂರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಿಕ್ಷಕಿರಾದ ವೆಂಗಮಾಂಬಾ ಶ್ರೀನಿವಾಸ, ವಾಣಿ ಸತೀಶ ಆಲಗೂರ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು. ಮುದಿಗೌಡ ಮಾಲಿಪಾಟೀಲ, ಮಹಿಪಾಲರೆಡ್ಡಿ ಡಿಗ್ಗಾವಿ, ಪವನ ಕುಲಕರ್ಣಿ, ಹಣಮಂತ ಪಡಸಾಲಿ, ಶರಣು ದೊಡ್ಡಮನಿ, ಸೂಗುರಯ್ಯ ಇಂಡಿ, ನಂದಪ್ಪ ಕವಲ್ದಾರ, ಗುರುಸ್ವಾಮಿ ಗಣಾಚಾರಿ, ಗುರುಮೂರ್ತಿ ಪತ್ತಾರ, ರಂಗಪ್ಪ ವಡ್ಡರ, ಗುಂಡುಭಟ್ ಜೋಶಿ, ಬಂದೇನವಾಜ ನಾಲತವಾಡ, ಹಳ್ಳೆಪ್ಪ ಕವಲ್ದಾರ, ಪರಶುರಾಮ ನಾರಾಯಣಕರ, ಮಲ್ಲನಗೌಡ ಪಾಟೀಲ ಸೇರಿ ಹಲವರಿದ್ದರು.