ಅ.26 ರಂದು ಸರಳವಾಗಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ: ಮಲ್ಲಯ್ಯ ದಂಡು

KannadaprabhaNewsNetwork |  
Published : Oct 17, 2026, 01:15 AM IST
 ವಾಲ್ಮೀಕಿ ಜಯಂತಿ ಆಚರಣೆ | Kannada Prabha

ಸಾರಾಂಶ

ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಅ. 26 ರಂದು ತಾಲೂಕು ಆಡಳಿತ ವತಿಯಿಂದ ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಗ್ರೇಡ್-2 ತಹಸೀಲ್ದಾರ ಮಲ್ಲಯ್ಯ ದಂಡು ತಿಳಿಸಿದರು.

ಕನ್ನಡಪ್ರಭ ವಾರ್ತೆ ಸುರಪುರ

ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಅ. 26 ರಂದು ತಾಲೂಕು ಆಡಳಿತ ವತಿಯಿಂದ ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಗ್ರೇಡ್-2 ತಹಸೀಲ್ದಾರ ಮಲ್ಲಯ್ಯ ದಂಡು ತಿಳಿಸಿದರು.

ನಗರದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ವಾಲ್ಮೀಕಿ ಜಯಂತಿ ಆಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷೆತೆ ವಹಿಸಿ ಮಾತನಾಡಿದರು. ಅಂದು ಬೆಳಗ್ಗೆ 9ಕ್ಕೆ ನಗರದ ವಾಲ್ಮೀಕಿ ದೇವಾಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ತಾಲೂಕು ಆಡಳಿತ ವತಿಯಿಂದ ಪ್ರಜಾಸೌಧದಲ್ಲಿ ಜಯಂತಿ ನಡೆಯಲಿದ್ದು, ಎಲ್ಲ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಸೂಚಿಸಿದರು.

ತಾಲೂಕಿನ ಎಲ್ಲ ಸರ್ಕಾರಿ ಕಚೇರಿ, ಶಾಲಾ-ಕಾಲೇಜು, ಅಂಗನವಾಡಿ, ಗ್ರಾಮ ಪಂಚಾಯತಿ, ವಸತಿ ನಿಲಯಗಳಲ್ಲಿ ಬೆಳಗ್ಗೆ 9ರೊಳಗೆ ಜಯಂತಿ ಆಚರಣೆ ಕಡ್ಡಾಯ ಆಚರಿಸಲು ಸೂಚನೆ ನೀಡಿದರು. ನಗರದಲ್ಲಿರುವ ಎಲ್ಲ ವೃತ್ತಗಳಲ್ಲಿ ದೀಪಾಲಂಕಾರ ಹಾಗೂ ಬೋರ್ಡಗಳಿಗೆ ಸ್ಟಿಕ್ಕರ್ ಅಳವಡಿಸುವ ವ್ಯವಸ್ಥೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ವಾಲ್ಮೀಕಿಯವರ ಜೀವನ ಮತ್ತು ಆದರ್ಶಗಳ ಕುರಿತು ಉಪನ್ಯಾಸ ಏರ್ಪಡಿಸುವುದರ ಜತೆಗೆ, ಎಸ್ಸೆಸೆಲ್ಸಿಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

----ಬಾಕ್ಸ್-------

ಮೂರ್ತಿ ಪ್ರತಿಷ್ಠಾಪನೆ ವಿಳಂಬಕ್ಕೆ ಅಸಮಾಧಾನ

ನಗರದ ಹಳೇ ಬಸ್ ನಿಲ್ದಾಣದ ಬಳಿ ಪ್ರತಿಷ್ಠಾಪಿಸಬೇಕಿದ್ದ ಮಹರ್ಷಿ ವಾಲ್ಮೀಕಿ ಮೂರ್ತಿ ವಿಚಾರದಲ್ಲಿ ಆಗುತ್ತಿರುವ ವಿಳಂಬ ಮತ್ತು ನಿರ್ಲಕ್ಷ್ಯ ಕುರಿತು ಸಮುದಾಯದ ಮುಖಂಡರು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ತಾಲೂಕು ಆರೋಗ್ಯಾಧಿಕಾರಿ ಡಾ. ರಾಜಾ ವೆಂಕಪ್ಪನಾಯಕ, ಗ್ರಾಮ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಸಜ್ಜನ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮಹ್ಮದ್ ಸಲೀಂಸಾಬ್, ನಗರಸಭೆಯ ಪೌರಾಯುಕ್ತ ಬಸವರಾಜ ಟಣಕೆದಾರ, ಲಾಲ್ ಸಾಬ್ ಪಿರಾಪುರ, ಯಂಕಣ್ಣ ಟಣಕೇದಾರ, ಶಾಂತಪ್ಪ ಹೊಸೂರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಮುದಾಯದ ಮುಖಂಡರಾದ ವೆಂಕಟೇಶ ಬೇಟೆಗಾರ, ನಾಗರಾಜ ನಾಯಕ ಪ್ಯಾಪಲಿ, ವೆಂಕಟೇಶ ನಾಯಕ ಬೈರಿಮಡ್ಡಿ, ಭೀಮು ಎಚ್. ನಾಯಕ ಮಲ್ಲಿಭಾವಿ, ದಾನಪ್ಪ ಕಡಿಮನಿ, ಮೂರ್ತಿ ಬೊಮ್ಮನಹಳ್ಳಿ, ಹಣಮಂತ, ಅಂಬ್ರೇಶನಾಯಕ ಡೊಣ್ಣೆಗೇರಾ, ಚಂದ್ರಶೇಖರ ದೊರೆ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡ್ರಗ್ಸ್ ವಿರೋಧಿ ಜಾಗೃತಿ ರಾಯಭಾರಿಗಳಾಗಿ: ಡೀಸಿ ಡಾ.ಅನುರಾಧ
ಜಿ.ಪಂ ಮೀಸಲಾತಿ ಪಾರದರ್ಶಕತೆ ಪರಿಶೀಲಿಸಿ: ಇನಾಮ್ದಾರ್‌