ರಾಣಿ ಚೆನ್ನಮ್ಮ ಳ ಹೋರಾಟ ಅವಿಸ್ಮರಣೀಯ

KannadaprabhaNewsNetwork |  
Published : Oct 24, 2025, 01:00 AM IST
ಪೋಟೋ ಕನಕಗಿರಿಯ ಚನ್ನಮ್ಮ ವೃತ್ತಕ್ಕೆ ಪೂಜೆಸಲ್ಲಿಸಿದ ಗಣ್ಯರು ಪುಷ್ಪ ನಮನ ಸಲ್ಲಿಸಿ ಜಯಂತಿಯನ್ನು ಆಚರಿಸಲಾಯಿತು.   | Kannada Prabha

ಸಾರಾಂಶ

ರಾಣಿ ಚೆನ್ನಮ್ಮ ದೇಶ ಕಟ್ಟುವುಕ್ಕಾಗಿ ಶ್ರಮಿಸಿದ್ದಾಳೆ. ಆಕೆಯ ಬಲಗೈ ಬಂಟನಾಗಿದ್ದ ಸಂಗೊಳ್ಳಿ ರಾಯಣ್ಣ ಬ್ರಿಟಿಷರನ್ನು ಸದೆಬಡಿದು ಸ್ವಾತಂತ್ರ್ಯಕ್ಕೆ ಹೋರಾಡಿ ಮಡಿದಿದ್ದಾರೆ

ಕನಕಗಿರಿ: ರಾಣಿ ಚೆನ್ನಮ್ಮಳ ಹೋರಾಟ ಅವಿಸ್ಮರಣೀಯವಾದದು ಎಂದು ತಹಸೀಲ್ದಾರ ವಿಶ್ವನಾಥ ಮುರುಡಿ ಹೇಳಿದರು.

ಅವರು ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ಜಯಂತ್ಯತ್ಸವ ನಿಮಿತ್ತ ಚೆನ್ನಮ್ಮ ವೃತ್ತಕ್ಕೆ ಪುಷ್ಪ ನಮನ ಸಲ್ಲಿಸಿ ಗುರುವಾರ ಮಾತನಾಡಿದರು.

ದೇಶಭಕ್ತಿ, ಧೈರ್ಯ ಮತ್ತು ಸಾಹಸಕ್ಕೆ ರಾಣಿ ಚೆನ್ನಮ್ಮ ಹೆಸರುವಾಸಿ ಸ್ವಾತಂತ್ರ್ಯಕ್ಕೆ ಚೆನ್ನಮ್ಮಳ ಪಾತ್ರ ಅಪಾರ.ಇಂತಹ ಹೋರಾಟಗಾರ್ತಿಯ ಹೋರಾಟ ಮತ್ತು ತ್ಯಾಗ ದೊಡ್ಡದಾಗಿದ್ದು, ಚೆನ್ನಮ್ಮಳ ದಿಟ್ಟತನ ದೇಶವಾಸಿಗಳಿಗೆ ಸ್ಫೂರ್ತಿದಾಯಕವಾಗಿವೆ ಎಂದು ತಿಳಿಸಿದರು.

ನಂತರ ಪಪಂ ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ ಮಾತನಾಡಿ, ರಾಣಿ ಚೆನ್ನಮ್ಮ ದೇಶ ಕಟ್ಟುವುಕ್ಕಾಗಿ ಶ್ರಮಿಸಿದ್ದಾಳೆ. ಆಕೆಯ ಬಲಗೈ ಬಂಟನಾಗಿದ್ದ ಸಂಗೊಳ್ಳಿ ರಾಯಣ್ಣ ಬ್ರಿಟಿಷರನ್ನು ಸದೆಬಡಿದು ಸ್ವಾತಂತ್ರ್ಯಕ್ಕೆ ಹೋರಾಡಿ ಮಣಿದಿದ್ದಾರೆ. ಇಂತಹ ಮಹನೀಯರ ಆದರ್ಶಗಳು ಎಂದಿಗೂ ಅಜರಾಮರ ಎಂದರು.

ಈ ವೇಳೆ ಪಪಂ ಸದಸ್ಯ ಅನಿಲ ಬಿಜ್ಜಳ, ಶರಣೇಗೌಡ, ಪ್ರಾ.ಕೃ.ಪ.ಸ.ಸಂಘದ ಉಪಾಧ್ಯಕ್ಷ ಮಹಾಂತೇಶ ಕೊಡ್ಲಿ, ಸುಳೇಕಲ್ ಗ್ರಾಪಂ ಉಪಾಧ್ಯಕ್ಷ ಶಿವಾನಂದ ವಂಕಲಕುಂಟಿ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಹಜರತಹುಸೇನ, ನಾಗೇಶ ರೊಟ್ಟಿ, ಪ್ರಶಾಂತ ತೆಗ್ಗಿನಮನಿ, ನಾಗರಾಜ ಭಾವಿಕಟ್ಟಿ, ರವಿ ಪಾಟೀಲ್, ಅಮರೇಶ ಕಾಯಿಗಡ್ಡಿ, ಮಂಜು ಕೊಡ್ಲಿ, ಬಸವರಾಜ ತೆಗ್ಗಿನಮನಿ, ಪಾಮಣ್ಣ ಅರಳಿಗನೂರು, ಲಿಂಗಪ್ಪ ಪೂಜಾರ, ನಾಗೇಶ ಬಡಿಗೇರ, ಸಣ್ಣ ರಾಮಣ್ಣ ಬ್ಯಾಳಿ ಸೇರಿದಂತೆ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೊಸ ಅವಕಾಶ ತೆರೆದ ಸಮಕಾಲೀನ ಭಾಷಾ ತಂತ್ರಜ್ಞಾನ: ಗೀತಾ ವಾಲೀಕಾರ್
ವಸಾಹತುಶಾಹಿತ್ವ ಒಳಿತು ಕೆಡಕಿನ ಸಂತೆ: ಡಾ. ಕೆ. ವೆಂಕಟೇಶ