ಬೆಸಗರಹಳ್ಳಿ ಕೃಷಿ ಸಹಕಾರ ಸಂಘಕ್ಕೆ ರಂಜನ್ ಕುಮಾರ್ ಅಧ್ಯಕ್ಷರಾಗಿ ಆಯ್ಕೆ

KannadaprabhaNewsNetwork |  
Published : Apr 20, 2025, 01:48 AM IST
19ಕೆಎಂಎನ್ ಡಿ29 | Kannada Prabha

ಸಾರಾಂಶ

ಸಂಘದಲ್ಲಿ 4 ಸಾವಿರ ಷೇರುದಾರರಿದ್ದು, 2 ಸಾವಿರ ಷೇರುದಾರರಿಗೆ ಬೆಳೆಸಾಲ, ಮಧ್ಯಮಾವಧಿ ಸಾಲ ಹಾಗೂ ಸ್ವ ಸಹಾಯ ಸಂಘಗಳ ಗುಂಪಿಗೆ ಸಾಲ ಒಟ್ಟು 13 ಕೋಟಿ ರು. ಸಾಲ ನೀಡಲಾಗಿದೆ.ಶೇ.95 ರಷ್ಟು ವಸೂಲಾತಿಯಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ತಾಲೂಕಿನ ಬೆಸಗರಹಳ್ಳಿ ವಿವಿದೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ ಎನ್‌ಡಿಎ ಮೈತ್ರಿಕೂಟದ ಬೆಂಬಲಿತ ಕೆ.ಆರ್.ರಂಜನ್ ಕುಮಾರ್ ಅಧ್ಯಕ್ಷರಾಗಿ ಹಾಗೂ ಕೆ.ರಾಣಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.

ಸಂಘದ ಸಭಾಂಗಣದಲ್ಲಿ ಶನಿವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಂಜನ್ ಕುಮಾರ್, ಉಪಾಧ್ಯಕ್ಷ ಸ್ಥಾನಕ್ಕೆ ಕೆ.ರಾಣಿ ಅವರನ್ನು ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಡಿ.ಆಶಾ ಘೋಷಣೆ ಮಾಡಿದರು.

ನೂತನ ಅಧ್ಯಕ್ಷ ಕೆ.ಆರ್.ರಂಜನ್ ಕುಮಾರ್ ಮಾತನಾಡಿ, ಸಂಘದಲ್ಲಿ 4 ಸಾವಿರ ಷೇರುದಾರರಿದ್ದು, 2 ಸಾವಿರ ಷೇರುದಾರರಿಗೆ ಬೆಳೆಸಾಲ, ಮಧ್ಯಮಾವಧಿ ಸಾಲ ಹಾಗೂ ಸ್ವ ಸಹಾಯ ಸಂಘಗಳ ಗುಂಪಿಗೆ ಸಾಲ ಒಟ್ಟು 13 ಕೋಟಿ ರು. ಸಾಲ ನೀಡಲಾಗಿದೆ.ಶೇ.95 ರಷ್ಟು ವಸೂಲಾತಿಯಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮುಂದಿನ ದಿನಗಳಲ್ಲಿ ಸಂಘದ ಎಲ್ಲಾ ನಿರ್ದೇಶಕರ ವಿಶ್ವಾಸ ಪಡೆದು ಸಂಘದ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುವುದು ಹಾಗೂ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ಪ್ರಮಾಣಿಕವಾಗಿ ತಲುಪಿಸಲಾಗುವುದು ಎಂದು ಭರವಸೆ ನೀಡಿದರು.

ಈ ವೇಳೆ ಸಂಘದ ನಿರ್ದೇಶಕರಾದ ವಿ.ಸುರೇಶ್, ಕೆ.ಎಸ್.ಸೋಮಶೇಖರ್, ಎಂ.ನಾಗರಾಜ, ಕೆ.ವೈ.ಶ್ರೀನಿವಾಸ್, ಶಶಿಕಲಾ, ಎಚ್.ಎಸ್.ಮಂಜೇಶ್ ಹೆಗ್ಗಡೆ, ಎಂ.ಸಿ.ಪ್ರದೀಪ, ಕೃಷ್ಣೇಗೌಡ, ಶಿವಶಂಕರಯ್ಯ, ಕಾರ್ಯದರ್ಶಿ ಕೆ.ಸುಮಿತ್ರ, ಗಾಪಂ ಅಧ್ಯಕ್ಷೆ ರಾಧಿಕಾ ಪ್ರಸಾದ್, ಮುಖಂಡರಾದ ಕೋಣಸಾಲೆ ಮಧು, ಹನುಮಂತು, ಪ್ರಸಾದ್, ನಾಗೇಶ್, ಲೋಕೇಶ್, ಶಿವರಾಮು, ಮರಿಹೆಗಡೆ, ಜವಹರ್ ಲಾಲ್, ವಾಸು, ಗಿರೀಶ್ ಕಮಲಿ, ಅಶೋಕ್ಮರಳಿಗ, ರಾಜು, ಕೆ.ಪಿ.ಸುನೀಲ್ ಬಾಬು, ಕೆ.ಎಲ್.ಶಿವರಾಮ್, ಎಂ.ವಿ.ಅಶೋಕ್, ಕೇಶವ ಇದ್ದರು.

ಸಾಲಸೌಲಭ್ಯಕ್ಕೆ ಅರ್ಜಿ ಆಹ್ವಾನ

ಮಂಡ್ಯ: ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ 2025-26ನೇ ಸಾಲಿಗೆ ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಅರ್ಹ ಕೈಮಗ್ಗ ನೇಕಾರರಿಂದ ಸಾಲ-ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಕೈಮಗ್ಗ ನೇಕಾರರು ರಾಷ್ಟ್ರೀಕೃತ ಬ್ಯಾಂಕ್‌ನಿಂದ ಕೈಮಗ್ಗ ನೇಯುವ ಚಟುವಟಿಕೆಗಾಗಿ 50 ಸಾವಿರ ರು. ನಿಂದ 2 ಲಕ್ಷ ರು.ವರೆಗೆ ಆರ್ಥಿಕ ಸಾಲ ಪಡೆಯಬಹುದು. ಆಸಕ್ತ ಅರ್ಹ ಕೈಮಗ್ಗ ನೇಕಾರರು ಅರ್ಜಿ ಪಡೆಯಲು ಹಾಗೂ ಹೆಚ್ಚಿನ ವಿವರಗಳಿಗೆ ಮೊ- 9008836898/ 9972405347 ಅನ್ನು ಸಂಪರ್ಕಿಸಬಹುದು ಮತ್ತು ಜಿಲ್ಲಾ ಪಂಚಾಯ್ತಿ, ಕೈಮಗ್ಗ ಮತ್ತು ಜವಳಿ ಇಲಾಖೆ ಉಪ ನಿರ್ದೇಶಕರ ಕಚೇರಿಗೆ ಭೇಟಿ ನೀಡಬಹುದು ಎಂದು ಕೈಮಗ್ಗ ಮತ್ತು ಜವಳಿ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ