ಹುಬ್ಬಳ್ಳಿ:
ಈ ಕುರಿತು ಪ್ರಕಟಣೆ ನೀಡಿರುವ ಅವರು, ಅರವಿಂದ ಬೆಲ್ಲದ ಅವರು ಈಚೆಗೆ ಈ ಭಾಗಕ್ಕೆ ಎಫ್‌ಎಂಸಿಜಿ (ಫಾಸ್ಟ್ ಮೂವಿಂಗ್ ಕಂಜೂಮರ್ ಗೂಡ್ಸ್) ಕ್ಲಸ್ಟರ್ ಬಂದಿದೆ. ಆದರೆ, ಬಿಜೆಪಿ ಅವಧಿಯಲ್ಲಿ ಪ್ರತಿ ಎಕರೆಗೆ ₹ 80 ಲಕ್ಷ ನಿಗದಿ ಪಡಿಸಿದ್ದ ದರವನ್ನು ಕಾಂಗ್ರೆಸ್ ಆಡಳಿತದಲ್ಲಿ ₹1.45 ಕೋಟಿಗೆ ಏರಿಕೆ ಮಾಡಿದ್ದಾರೆ. ಇದರಿಂದ ಕೈಗಾರಿಕೆಗೆ ಹಿನ್ನಡೆಯಾಗಿದೆ ಎಂದು ಆರೋಪಿಸಿದ್ದಾರೆ. ಇದು ಸತ್ಯಕ್ಕೆ ದೂರವಾದುದು, ಸರ್ಕಾರದ ದಾಖಲೆಗಳ ಪ್ರಕಾರ ಬಿಜೆಪಿ ಸರ್ಕಾರ ಆಡಳಿತದ 2022ರ ನ. 23ರಂದೇ ಇಲ್ಲಿನ ಮಮ್ಮಿಗಟ್ಟಿ ಕೈಗಾರಿಕಾ ಪ್ರದೇಶದ ಎಫ್‌ಎಂಜಿಸಿ ನಿವೇಶನಕ್ಕೆ ಪ್ರತಿ ಎಕರೆಗೆ ₹ 1.39 ಕೋಟಿ ನಿಗದಿಪಡಿಸಲಾಗಿದೆ. 2023ರಕ್ಕೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಕೈಗಾರಿಕಾ ನಿವೇಶದ ದರ ಪರಿಷ್ಕರಣೆಯಾಗಲಿ, ಏರಿಕೆಯಾಗಿಲಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಆಡಳಿತದ ಅವಧಿಯಲ್ಲೇ ಕೈಗಾರಿಕೆಗಳ ಬೆಳವಣಿಗೆಯಾಗಿರುವುದನ್ನು ಯಾರು ಮರೆಯುವಂತಿಲ್ಲ ಎಂದು ತಿಳಿಸಿದ್ದಾರೆ.