ತಾಯಿ ಅಂತ್ಯಕ್ರಿಯೆಗೆ ತವರಿಗೆ ಬಂದ ರವಿ ಪೂಜಾರಿ

KannadaprabhaNewsNetwork |  
Published : Nov 15, 2026, 02:30 AM IST
14ರವಿ | Kannada Prabha

ಸಾರಾಂಶ

ಮೋಸ್ಟ್ ವಾಂಟೆಡ್ ಪಾತಕಿ, ಉಡುಪಿ ಮೂಲದ ರವಿ ಪೂಜಾರಿ ಶನಿವಾರ ತವರಿನಲ್ಲಿ ತನ್ನ ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ, ಮರಳಿ ಜೈಲು ಸೇರಿದ್ದಾನೆ.

ಉಡುಪಿ: ಮೋಸ್ಟ್ ವಾಂಟೆಡ್ ಪಾತಕಿ, ಉಡುಪಿ ಮೂಲದ ರವಿ ಪೂಜಾರಿ ಶನಿವಾರ ತವರಿನಲ್ಲಿ ತನ್ನ ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ, ಮರಳಿ ಜೈಲು ಸೇರಿದ್ದಾನೆ.

ಬೆಂಗಳೂರು ಜೈಲಿನಲ್ಲಿರುವ ಆತನಿಗೆ, ಗುರುವಾರ ಮೃತಪಟ್ಟ ತಾಯಿ ಶುಶೀಲಾ ಪೂಜಾರಿ (86) ಅವರ ಅಂತಿಮ ದರ್ಶನಕ್ಕೆ ಹೈಕೋರ್ಟ್ ಷರತ್ತುಬದ್ಧ ಅನುಮತಿ ನೀಡಿತ್ತು, ಅದರಂತೆ ಪೊಲೀಸರು ಭಾರೀ ಬಂದೋಬಸ್ತ್‌ನಲ್ಲಿ ಇಲ್ಲಿನ ಮಲ್ಪೆ ಸಮೀಪದ ನೆರ್ಗಿ ಮನೆಗೆ ಶನಿವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಕರೆ ತಂದರು.

ಪೊಲೀಸ್ ಭದ್ರತೆಯಲ್ಲಿ ವಾಹನ ಇಳಿದು ನೇರ ಮನೆಯೊಳಗೆ ತೆರಳಿ ರವಿ ಪೂಜಾರಿ, ಮನೆಯ ಹಾಲ್‌ನಲ್ಲಿ ಮಲಗಿಸಿಡಲಾಗಿದ್ದ ತಾಯಿಯ ಪಾರ್ಥಿವ ಶರೀರದ ಬಳಿ ಕುಳಿತು, ತಾಯಿಯ ಮುಖವನ್ನು ನೇವರಿಸಿ, ಕೈಮುಗಿದು ಕಣ್ಣೀರು ಸುರಿಸಿದ.

ನಂತರ ಶರಟು ಕಳಚಿ, ತಲೆಗೊಂಡು ಬಟ್ಟೆ ಕಟ್ಟಿಕೊಂಡು, ಮಲ್ಪೆ ಬೀಚ್ ರುದ್ರಭೂಮಿಗೆ ಕೊಂಡೊಯ್ಯಲಾದ ತಾಯಿಯ ಪಾರ್ಥಿವಶರೀರಕ್ಕೆ ಹೆಗಲುಕೊಟ್ಟ, ರುದ್ರಭೂಮಿಯಲ್ಲಿ ತಮ್ಮನೊಂದಿಗೆ ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ ಮಾಡಿ, ಪೂರ್ಣ ಅಂತ್ಯಕ್ರಿಯೆ ನಡೆಯುವರೆಗೂ ನಿಂತಿದ್ದು, ಮತ್ತೆ ಪೊಲೀಸ್ ವಾಹನ ಹತ್ತಿದ, ಅಲ್ಲಿಂದ ಆತನನ್ನು ಮತ್ತೆ ಬೆಂಗಳೂರು ಜೈಲಿಗೆ ಕೊಂಡೊಯ್ಯಲಾಯಿತು.ರವಿ ಪೂಜಾರಿ ಮನೆಗೆ ಬರುವ ಸುದ್ದಿ ತಿಳಿದು ಸಂಬಂಧಿಕರು ಮತ್ತು ಊರವರು ಸಾಕಷ್ಟು ಮಂದಿ ಸೇರಿದ್ದು, ಒಂದು ಕಾಲದ ಭೂಗತ ಪಾತಕಿ ಆತನನ್ನು ಕುತೂಹಲದಿಂದ ನೋಡುತ್ತಿದ್ದರು. ಆತನ ಸುರಕ್ಷೆತೆಗೆ ಬೆಂಗಳೂರು ಕಾರಾಗೃಹದ ಪೊಲೀಸರ ಜೊತೆಗೆ ಉಡುಪಿಯ ಪೊಲೀಸರು ಸ್ಥಳದಲ್ಲಿದ್ದರು.

ಮಹಾರಾಷ್ಟ ಕರ್ನಾಟಕ ಸೇರಿ 50ಕ್ಕೂ ಹೆಚ್ಚು ಕೊಲೆ, ಬೆದರಿಕೆ, ಸುಲಿಗೆ, ಹಪ್ತಾ ಪ್ರಕರಣಗಳಲ್ಲಿ ರವಿ ಪೂಜಾರಿ ವಾಂಟೆಡ್ ಪಾತಕಿಯಾಗಿದ್ದಾನೆ. 26 ವರ್ಷಗಳ ಕಾಲ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆತನನ್ನು 2020ರಲ್ಲಿ ಕರ್ನಾಟಕ ಪೊಲೀಸರು ಆಫ್ರಿಕಾದ ಸೆನೆಗಲ್‌ನಲ್ಲಿ ಬಂಧಿಸಿ ಕರೆತಂದಿದ್ದರು. ಆತನ ಮೇಲಿನ ಆರೋಪಗಳ ವಿಚಾರಣೆ ನಡೆಯುತ್ತಿದ್ದು, ಪ್ರಸ್ತುತ ಆತ ಬೆಂಗಳೂರಿನ ಜೈಲಿನಲ್ಲಿ ವಿಚರಣಾಧೀನ ಕೈದಿಯಾಗಿದ್ದಾನೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಫಿಲ್ಟರ್‌ ಮಾಡದೇ ಕಲುಷಿತ ನೀರು ಪೂರೈಕೆ ?
ಚಳಿಗಾಲದ ಅಧಿವೇಶನಕ್ಕೆ ಹೆಸ್ಕಾಂ ಸಕಲ ಸಿದ್ಧತೆ