ನಾಳೆ ಸಂಗೊಳ್ಳಿ ರಾಯಣ್ಣ ಹುತಾತ್ಮ ದಿನಾಚರಣೆ: ರಾಮೇಗೌಡ ಮಾಹಿತಿ

KannadaprabhaNewsNetwork |  
Published : Jan 25, 2025, 01:02 AM IST
24ಕೆಡಿವಿಜಿ5-ದಾವಣಗೆರೆಯಲ್ಲಿ ಶುಕ್ರವಾರ ಕರವೇ ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ 194ನೇ ಹುತಾತ್ಮ ದಿನಾಚರಣೆಯನ್ನು ಕರ್ನಾಟಕ ರಕ್ಷಣಾ ವೇದಿಕೆಯಿಂದ ನಗರದ ಶ್ರೀ ಶಿವಯೋಗಿ ಮಂದಿರದಲ್ಲಿ ಜ.26ರಂದು ಹಮ್ಮಿಕೊಳ್ಳಲಾಗಿದೆ ಎಂದು ಕರವೇ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಕರವೇ ನೇತೃತ್ವದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ಪ್ರದಾನ

- ಚಿಂತಕ, ರಾಜಕೀಯ ವಿಶ್ಲೇಷಕ, ಪತ್ರಕರ್ತ ರಾ.ಚಿಂತನ್‌ ಅವರಿಗೆ ಪ್ರಶಸ್ತಿ - - - ಕನ್ನಡಪ್ರಭ ವಾರ್ತೆ ದಾವಣಗೆರೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ 194ನೇ ಹುತಾತ್ಮ ದಿನಾಚರಣೆಯನ್ನು ಕರ್ನಾಟಕ ರಕ್ಷಣಾ ವೇದಿಕೆಯಿಂದ ನಗರದ ಶ್ರೀ ಶಿವಯೋಗಿ ಮಂದಿರದಲ್ಲಿ ಜ.26ರಂದು ಹಮ್ಮಿಕೊಳ್ಳಲಾಗಿದೆ ಎಂದು ಕರವೇ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಜೆ 6.30 ಗಂಟೆಗೆ ಕರವೇ ಉದ್ಯಮದಾರರ ಘಟಕದ ಅಧ್ಯಕ್ಷ ಡಿ.ಸಿ.ಶ್ರೀನಿವಾಸ ಚಿನ್ನಿಕಟ್ಟೆ ಅಧ್ಯಕ್ಷತೆಯಲ್ಲಿ ಮಾಜಿ ಶಾಸಕ ಎಸ್.ರಾಮಚಂದ್ರ ಸಮಾರಂಭ ಉದ್ಘಾಟಿಸುವರು. ರಾಯಣ್ಣ ಭಾವಚಿತ್ರಕ್ಕೆ ಬೆಂಗಳೂರಿನ ಇನ್‌ಸೈಟ್ಸ್ ಅಕಾಡೆಮಿ ಸಂಸ್ಥಾಪಕ ಜಿ.ಬಿ.ವಿನಯಕುಮಾರ ಪುಷ್ಪಾರ್ಚನೆ ಮಾಡುವರು ಎಂದರು.

ಚಿಂತಕ, ರಾಜಕೀಯ ವಿಶ್ಲೇಷಕ, ಪತ್ರಕರ್ತ ರಾ.ಚಿಂತನ್‌ ಅವರಿಗೆ ಹುತಾತ್ಮ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕಾಂಗ್ರೆಸ್ ಮುಖಂಡ ಎಚ್.ಎಸ್.ನಾಗರಾಜ, ಕರವೇ ಕಾಂತರಾಜ, ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಟಿ.ಶ್ರೀನಿವಾಸ ದಾಸಕರಿಯಪ್ಪ, ಪಾಲಿಕೆ ಸದಸ್ಯ ಕೆ.ಪ್ರಸನ್ನಕುಮಾರ, ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಎಸ್. ಬಡದಾಳ್, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ಸವಿತಾ ಗಣೇಶ ಹುಲ್ಮನಿ ಸೇರಿದಂತೆ ಅನೇಕರು ಗಣ್ಯರು ಭಾಗವಹಿಸುವರು. ವಿವಿಧ ಕ್ಷೇತ್ರಗಳ ಸಾಧಕ ಗಣ್ಯರಿಗೆ ಸನ್ಮಾನಿಸಲಾಗುತ್ತಿದೆ ಎಂದು ಹೇಳಿದರು.

ಸಹಕಾರ ಕ್ಷೇತ್ರದ ಸಾಧನೆಗೆ ದಾ-ಹ ಪಟ್ಟಣ ಸಹಕಾರಿ ಬ್ಯಾಂಕ್ ನಿಯಮಿತದ ಅಧ್ಯಕ್ಷ ಎನ್.ಎ. ಮುರುಗೇಶ, ಸಮಾಜ ಸೇವಾ ಕ್ಷೇತ್ರದ ವಾಸುದೇವ ರಾಯ್ಕರ್, ನಾಗರೀಕ ಸೇವಾ ಕ್ಷೇತ್ರದ ಲೋಕಾಯುಕ್ತ ಪೊಲೀಸ್ ನಿರೀಕ್ಷಕ ಮಂಜುನಾಥ ಪಂಡಿತ್‌, ವೈದ್ಯಕೀಯ ಕ್ಷೇತ್ರದ ಡಾ. ಎಸ್.ವಿಜಯಕುಮಾರ, ವಿಜಯ ಕರ್ನಾಟಕ ಸ್ಥಾನಿಕ ಸಂಪಾದಕ ಸದಾನಂದ ಹೆಗಡೆ, ವಿ-1 ವಾಹಿನಿಯ ಚಿದಾನಂದ, ಜನತಾವಾಣಿ ಹಿರಿಯ ಛಾಯಾಗ್ರಾಹಕ ಮಹಮ್ಮದ್ ರಫೀಕ್‌, ರಂಗಕರ್ಮಿ ಎಸ್.ಎಸ್. ಸಿದ್ದರಾಜು, ಕನ್ನಡಪರ ಹೋರಾಟಕ್ಕೆ ಎಂ.ಭೀಮೇಶ, ರೈತ ಪರ ಕ್ಷೇತ್ರದ ಎಂ.ಓ.ದೇವರಾಜ, ಕಲಾಕ್ಷೇತ್ರದ ವಾದ್ಯಗೋಷ್ಟಿ ಕಲಾವಿದರ ಸಂಘದ ಕಾರ್ಯದರ್ಶಿ ಧರ್ಮರಾಜ ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.

ಕರವೇ ಉದ್ದಿಮೆದಾರರ ಘಟಕದ ಉಪಾಧ್ಯಕ್ಷ ಒ.ಮಹೇಶ್ವರಪ್ಪ, ಕೋಮಲ್ ಜೈನ್‌, ಜಿಲ್ಲಾ ಉಪಾಧ್ಯಕ್ಷರಾದ ಮಂಜುಶ್ರೀ ಗೌಡ, ಗಿರೀಶಕುಮಾರ, ತಾಲೂಕು ಅಧ್ಯಕ್ಷ ವಿನಯ್, ಎಂ.ಮಹಾಂತೇಶ, ರಾಜೇಶ, ಮಲ್ಲನಾಯಕ ಅನೇಕರು ಭಾಗವಹಿಸುವರು. ಗುರುಕುಲ ವಸತಿ ಶಾಲೆ ಮಕ್ಕಳಿಂದ ನೃತ್ಯ ರೂಪಕವಿದೆ. ಚೈತನ್ಯ ಗುರುಕುಲ ವಸತಿಶಾಲೆ ಸಂತೇಬೆನ್ನೂರು ಮಕ್ಕಳಿಂದ ಮಲ್ಲಕಂಬ ಮತ್ತು ಯೋಗ ಪ್ರದರ್ಶನವಿದೆ. ದಾವಣಗೆರೆ ಫ್ರೆಂಡ್ಸ್‌ ಮೆಲೋಡಿಸ್‌ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ಎಂ.ಎಸ್.ರಾಮೇಗೌಡ ಮಾಹಿತಿ ನೀಡಿದರು.

ವೇದಿಕೆ ಮುಖಂಡರಾದ ಈಶ್ವರ, ಗೋಪಾಲ ದೇವರಮನೆ, ರವಿಕುಮಾರ, ಪೈಲ್ವಾನ್ ಜಬೀವುಲ್ಲಾ, ಮಂಜುಳಾ, ಗಣೇಶ ಕುಮಾರ ಇತರರು ಇದ್ದರು.

- - - -24ಕೆಡಿವಿಜಿ5:

ದಾವಣಗೆರೆಯಲ್ಲಿ ಶುಕ್ರವಾರ ಕರವೇ ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ