ಪಪಂ ವಾಣಿಜ್ಯ ಮಳಿಗೆ ಮರು ಹರಾಜು

KannadaprabhaNewsNetwork |  
Published : Nov 21, 2025, 03:00 AM IST
ಮಳಿಗೆ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಚಿಕ್ಕೋಡಿ ಬೋರಗಾವ ಪಟ್ಟಣದಲ್ಲಿ 13 ಸರ್ಕಾರಿ ವಾಣಿಜ್ಯ ಮಳಿಗೆಗಳಿದ್ದು, ಈಗಾಗಲೇ ವ್ಯಾಪಾರಿ ಮಳಿಗೆಗಳಿಂದ ಅತ್ಯಂತ ಕಡಿಮೆ ಬಾಡಿಗೆ ಬರುತ್ತಿದೆ. ಇದರಿಂದ ಪಂಚಾಯಿತಿಗೆ ಆರ್ಥಿಕ ನಷ್ಟವುಂಟಾಗುತ್ತಿದ್ದು, ಮಳಿಗೆಗಳ ಮರು ಹರಾಜು ಮಾಡಬೇಕೆಂದು ಪಟ್ಟಣದ ನಾಗರಿಕರ ಬೇಡಿಕೆಯಾಗಿದೆ ಎಂದು ಮುಖ್ಯಾಧಿಕಾರಿ ಎಸ್.ಬಿ.ತೊಡಕರ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ಬೋರಗಾವ ಪಟ್ಟಣದಲ್ಲಿ 13 ಸರ್ಕಾರಿ ವಾಣಿಜ್ಯ ಮಳಿಗೆಗಳಿದ್ದು, ಈಗಾಗಲೇ ವ್ಯಾಪಾರಿ ಮಳಿಗೆಗಳಿಂದ ಅತ್ಯಂತ ಕಡಿಮೆ ಬಾಡಿಗೆ ಬರುತ್ತಿದೆ. ಇದರಿಂದ ಪಂಚಾಯಿತಿಗೆ ಆರ್ಥಿಕ ಆರ್ಥಿಕ ನಷ್ಟವುಂಟಾಗುತ್ತಿದ್ದು, ಮಳಿಗೆಗಳ ಮರು ಹರಾಜು ಮಾಡಬೇಕೆಂದು ಪಟ್ಟಣದ ನಾಗರಿಕರ ಬೇಡಿಕೆಯಾಗಿದೆ ಎಂದು ಮುಖ್ಯಾಧಿಕಾರಿ ಎಸ್.ಬಿ.ತೊಡಕರ ಹೇಳಿದರು.

ಪಟ್ಟಣ ಪಂಚಾಯತಿಯಲ್ಲಿ ಬುಧವಾರ ಅಧ್ಯಕ್ಷ ಪಿಂಟು ಕಾಂಬಳೆ ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಸಭೆಯಲ್ಲಿ ಮಾತನಾಡಿ, ಶೀಘ್ರವೇ ಮರು ಹರಾಜು ಮಾಡಲು ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿ ಹರಾಜು ಮಾಡಲು ಪಟ್ಟಣ ಪಂಚಾಯಿತಿ ಸದಸ್ಯರು ಒಪ್ಪಿಗೆ ನೀಡಿದ್ದಾರೆ ಎಂದರು.

ಪಪಂ ಎದುರು ಡಾ.ಬಾಬಾಸಾಹೇಬ್ ಅಂಬೇಡ್ಕರ ಪುತ್ಥಳಿ ನಿರ್ಮಿಸಲು ಸ್ಥಳಾವಕಾಶ, ಜಮಾ ಖರ್ಚು, ಟೆಂಡರ್ ಪ್ರಕ್ರಿಯೆ, ಒಳಚರಂಡಿ ಸಂಸ್ಕರಣಾ ಘಟಕಗಳು, ಅಮೃತ್ ಟು ಯೋಜನೆ, ಮನೆ ನಿರ್ಮಾಣಕ್ಕಾಗಿ ಸರ್ಕಾರ ವಿಧಿಸಿರುವ ಹೊಸ ನಿಯಮಗಳು, ಬೀದಿ ನಾಯಿಗಳ ನಿಯಂತ್ರಣ, ಕೀರ್ತಿ ಸ್ತಂಭದ ಸುಶೋಭಿಕರಣ, ನಾಗರಿಕರ ಸಮಸ್ಯೆಗಳು, ಶಿಕ್ಷಣ ಸಂಸ್ಥೆ ನಿರ್ವಾಹಕರಿಂದ ಸಂಸ್ಕರಣಾ ಶುಲ್ಕವನ್ನು ಪಡೆಯುವುದು, ಅಕ್ರಮ ಕೈಗಾರಿಕಾ ವಿಸ್ತರಣೆ ಮುಂತಾದ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು. ಸದಸ್ಯ ಅಭಯಕುಮಾರ್ ಮಗದುಮ ಮಾತನಾಡಿ, ಸರ್ಕಾರ ನಿತ್ಯ ಹೊಸ ಹೊಸ ನಿಯಮ ಜಾರಿಗೊಳಿಸುತ್ತಿದೆ. ಈ ನಿಯಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಇದಕ್ಕಾಗಿ, ಅಧಿಕಾರಿಗಳು ಪ್ರತಿ ವಾರ್ಡ್‌ನಲ್ಲಿ ಸಭೆಗಳನ್ನು ನಡೆಸಿ ಜಾಗೃತಿ ಮೂಡಿಸಬೇಕು. ನಾಗರಿಕರಿಗೆ ಪಹಣಿ ಪತ್ರಿಕೆ ನೀಡಲು ಸಿಬ್ಬಂದಿ ವಿಳಂಬ ಮಾಡುತ್ತಿದ್ದಾರೆ ಎಂಬ ದೂರುಗಳು ಬಂದಿವೆ. ಅಮೃತ್ ಟು ನೀರಿನ ಯೋಜನೆ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿವೆ. ಸಾಧ್ಯವಾದಷ್ಟು ಬೇಗ ಕೆಲಸ ಪೂರ್ಣಗೊಳಿಸಲು ಸಂಬಂಧಪಟ್ಟ ಇಂಜಿನಿಯರ್‌ಗಳು ಮತ್ತು ಗುತ್ತಿಗೆದಾರರಿಗೆ ಸೂಚನೆ ನೀಡುವಂತೆ ತಿಳಿಸಿದರು.ಸದಸ್ಯೆ ಶೋಭಾ ಹವಲೆ ಮಾತನಾಡಿ, ಅಮೃತ ಟು ಯೋಜನೆಯಿಂದಾಗಿ ನಾಗರಿಕರಿಗೆ ತೊಂದರೆಯಾಗುತ್ತಿದೆ. ಬೇಗನೆ ಈ ಕಾಮಗಾರಿ ಪೂರ್ಣಗೊಳಿಸಬೇಕು. ಹೊಸ ನಲ್ಲಿಗಳನ್ನು ಸಂಪರ್ಕಿಸುವ ನಿಯಮಗಳ ಬಗ್ಗೆ ನಾಗರಿಕರಲ್ಲಿ ಜಾಗೃತಿ ಮೂಡಿಸಬೇಕೆಂದು ಒತ್ತಾಯಿಸಿದರು.ಉಪಾಧ್ಯಕ್ಷೆ ಭಾರತಿ ವಾಸವಾಡೆ, ಸದಸ್ಯರಾದ ಮಾಣಿಕ ಕುಂಬಾರ, ತುಳಸಿದಾಸ ವಾಸವಾಡೆ, ದಿಗಂಬರ ಕಾಂಬಳೆ, ರೋಹಿತ ಪಾಟೀಲ, ಅಶ್ವಿನಿ ಪವಾರ, ವರ್ಷಾ ಮನಗುತ್ತೆ, ಗಿರಿಜಾ ವಠಾರೆ, ಸುವರ್ಣ ಸೋಬಾನೆ, ಸಂಗೀತಾ ಶಿಂಗೆ, ಜಾವೇದ ಮಕಾಂದರ್, ರುಕ್ಸಾನಾ ಅಫರಾಜ, ಪ್ರಥಮ ದರ್ಜೆಯ ಸಹಾಯಕ ರಾಹುಲ್ ಗುಡಯಿನಕರ್, ದ್ವಿತೀಯ ದರ್ಜೆಯ ಸಹಾಯಕ ಪೋಪಟ ಕುರಳೆ, ಕಂದಾಯ ನಿರೀಕ್ಷಕ ಸಂದೀಪ್ ವೈಂಗಡೆ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುವೆಂಪು ಸದ್ಭಾವನಾ ಪ್ರಶಸ್ತಿಗೆ ಭಾಜನರಾದ ಶ್ರೀ ಶ್ಯಾಮ್ ಸುಂದರ್ ಹೆಗ್ಡೆ
ಕಿಡ್ನಾಪ್‌ ಆದ 1094 ಮಕ್ಕಳು ಇನ್ನೂ ಪತ್ತೆಯಾಗಿಲ್ಲ!