ಎಸ್ಸಿ ಒಳಮೀಸಲಾತಿ ಪಟ್ಟಿ ಪುನರ್ ಪರಿಶೀಲಿಸಿ

KannadaprabhaNewsNetwork |  
Published : Aug 15, 2025, 01:00 AM IST
ಹೊನ್ನಾಳಿ ಫೋಟೋ 13ಎಚ್.ಎಲ್.ಐ2. ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟದವತಿಯಿಂದ ಹೊನ್ನಾಳಿ,ನ್ಯಾಮತಿ ಪರಿಶಿಷ್ಠ ಜಾತಿಯ ಬಲಗೈ ಸಮುದಾಯಗಳಾದ ಛಲವಾದಿ,ಆದಿ ದ್ರಾವಿಡ, ಆದಿ ಕರ್ನಾಟಕ ಹಾಗೂ ಪರೈಯಾರ್ ಸಮುದಾಯಗಳು ಒಳಮೀಸಲಾತಿ ಪಟ್ಟಿಯಲ್ಲಿ ಕೈಬಿಟ್ಟಿರುವುದನ್ನು ಖಂಡಿಸಿ, ಪಟ್ಟಿಗೆ ಸೇರಿಸುವಂತೆ ಅಗ್ರಹಿಸಿ ಪ್ರತಿಭಟನೆ ನಡೆಸಿ ನಂತರ ಉಪವಿಭಾಗಾಧಿಕಾರಿಗಳಿಗೆ ಮುಖಂಡರು ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಪರಿಶಿಷ್ಟ ಜಾತಿಯ ಬಲಗೈ ಸಮುದಾಯಗಳಾದ ಛಲವಾದಿ, ಆದಿ ದ್ರಾವಿಡ, ಆದಿ ಕರ್ನಾಟಕ ಹಾಗೂ ಪರೈಯಾರ್ ಸಮುದಾಯಗಳನ್ನು ಒಳಮೀಸಲಾತಿ ಪಟ್ಟಿಯಿಂದ ಕೈಬಿಟ್ಟಿರುವುದನ್ನು ಖಂಡಿಸಿ, ಮತ್ತೆ ಪಟ್ಟಿಗೆ ಸೇರಿಸುವಂತೆ ಅಗ್ರಹಿಸಿ ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟದಿಂದ ಪಟ್ಟಣದ ಕನಕದಾಸ ವೃತ್ತದಲ್ಲಿ ಪ್ರತಿಭಟನೆ ನಡೆಸಿ ನಂತರ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಪರಿಶಿಷ್ಟ ಜಾತಿಯ ಬಲಗೈ ಸಮುದಾಯಗಳಾದ ಛಲವಾದಿ, ಆದಿ ದ್ರಾವಿಡ, ಆದಿ ಕರ್ನಾಟಕ ಹಾಗೂ ಪರೈಯಾರ್ ಸಮುದಾಯಗಳನ್ನು ಒಳಮೀಸಲಾತಿ ಪಟ್ಟಿಯಿಂದ ಕೈಬಿಟ್ಟಿರುವುದನ್ನು ಖಂಡಿಸಿ, ಮತ್ತೆ ಪಟ್ಟಿಗೆ ಸೇರಿಸುವಂತೆ ಅಗ್ರಹಿಸಿ ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟದಿಂದ ಪಟ್ಟಣದ ಕನಕದಾಸ ವೃತ್ತದಲ್ಲಿ ಪ್ರತಿಭಟನೆ ನಡೆಸಿ ನಂತರ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಒಕ್ಕೂಟದ ಹೊನ್ನಾಳಿ, ನ್ಯಾಮತಿ ತಾಲೂಕುಗಳ ಅಧ್ಯಕ್ಷ ಕುರುವ ಮಂಜುನಾಥ್‌, ನಾಗಮೋಹನ್ ದಾಸ್ ವರದಿಯ ಪ್ರಕಾರ ಛಲವಾದಿ, ಅದಿ ದ್ರಾವಿಡ, ಅಧಿಕರ್ನಾಟಕ, ಹಾಗೂ ಪರೈಯಾನ್ ಈ ನಾಲ್ಕು ಜಾತಿಗಳನ್ನು ಬಲಗೈ ಸಮುದಾಯಗಳ ಪಟ್ಟಿಗೆ ಸೇರಿಸಿ, ಶೇಕಡವಾರು ಮೀಸಲಾತಿ ಹೆಚ್ಚಿಸಿ ಈ ನಾಲ್ಕು ಸಮುದಾಯಗಳಿಗೆ ಹೆಚ್ಚಿನ ಅನುಕೂಲ ಕಲ್ಪಿಸಿಕೊಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ನಮ್ಮ ಬೃಹತ್ ಪ್ರಜಾತಂತ್ರ ದೇಶದಲ್ಲಿ ಶತ-ಶತಮಾನಗಳಿಂದಲೂ ನಮ್ಮ ಬಲಗೈ ಸಮುದಾಯಗಳು ಮೇಲ್ವರ್ಗದ ಜನರಿಂದ ತುಳಿತಕ್ಕೆ ಒಳಗಾಗಿ ತಮ್ಮ ತಮ್ಮ ಕುಲಕಸುಬುಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಾ ಬಂದಿದ್ದಾರೆ, ಹಾಗೂ ಬಹಳ ಮುಖ್ಯವಾಗಿ ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವುದರಲ್ಲಿ ಮಹತ್ವದ ಮೆಹರ್ ರೆಜಿಮೆಂಟ್ ಸೈನ್ಯ ಪಡೆ ಮೂಲಕ ಪೇಶ್ವೆಗಳ ವಿರುದ್ಧ ಹೋರಾಟದಲ್ಲಿ ಯಶಸ್ವಿಯಾಗಲು ದೊಡ್ಡಮಟ್ಟದ ಪಾತ್ರ ವಹಿಸಿದ್ದಾರೆ ಎಂದು ವಿವರಿಸಿದರು.

ನಮ್ಮ ದೇಶಕ್ಕೆ ವಿಶ್ವವೇ ಮೆಚ್ಚುವಂತಹ ಸಂವಿಧಾನ ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಅವರು ಕೂಡ ತಮ್ಮ ಸಮುದಾಯದವರೇ ಆಗಿದ್ದಾರೆ. ಆದರೆ ಈಗ ಸರ್ಕಾರದ ಏಕಸದಸ್ಯ ಪೀಠ ಒಳಮೀಸಲಾತಿಗೆ ಆದೇಶ ಮಾಡಿದ್ದು, ಈ ಪೀಠಕ್ಕೆ ನಿವೃತ್ತ ನ್ಯಾಯಾಧೀಶರಾದ ನಾಗಮೋಹನ್ ದಾಸ್ ಅವರನ್ನು ನೇಮಕ ಮಾಡಿ ಇವರಿಂದ ಒಳಮೀಸಲಾತಿ ವರದಿಯನ್ನು ಸರ್ಕಾರ ಪಡೆದಿದೆ ಆದರೆ, ಈ ವರದಿಯ ಪ್ರಕಾರ ಛಲವಾದಿ, ಅದಿಕರ್ನಾಟಕ , ಆದಿ ದ್ರಾವಿಡ, ಪರೈಯಾನ್ ಜಾತಿಗಳು ಕೈಬಿಟ್ಟಿರುವುದರಿಂದ ಈ ಸಮುದಾಯಗಳಿಗೆ ತುಂಬಾ ಅನ್ಯಾಯವಾಗಿದ್ದು, ಸರ್ಕಾರ ಪಟ್ಟಿಯನ್ನು ಪುನರ್ ಪರಿಶೀಲಿಸಿ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ನವೀನ್ ಕುಮಾರ್, ನಾಗರಾಜು ಮಾಸಡಿ, ರಂಗನಾಥ ತಕ್ಕನಹಳ್ಳಿ, ಮಂಜುನಾಥ ಶಿರಳ್ಳಿ, ಮಾರಪ್ಪ, ಅಶೋಕ, ನಾಗರಾಜ್, ಮಂಜು,ಸೇರಿದಂತೆ ಅನೇಕರು ಇದ್ದರು.

PREV

Recommended Stories

ಲೋಕಾ ಎಸ್ಪಿ ಬದ್ರಿನಾಥ್‌ ಸೇರಿ 19 ಪೊಲೀಸರಿಗೆ ರಾಷ್ಟ್ರ ಪದಕ
ಕೊಲೆ ಆರೋಪಿ ದರ್ಶನ್‌ಗೆ ತಪ್ಪದ ದಯಾನಂದ್ ಕಂಟಕ