ಗುಂಡ್ಲುಪೇಟೆ: ತಾಲೂಕಿನ ಮಾಡ್ರಹಳ್ಳಿ ಗ್ರಾಮದ ವೀರಬಸಪ್ಪ ಸ್ವಾಮಿ ದೇವಸ್ಥಾನ ಪುನರ್ ಪ್ರತಿಷ್ಠಾಪನೆ, ಪ್ರಭಾವಳಿ, ವಿಮಾನ ಗೋಪುರ, ಕಲಶಗಳ ಸ್ಥಾಪನೆ ಮಾ.೨೩ ರಿಂದ ೨೫ ರವರೆಗೆ ನಡೆಯಲಿದೆ.
ಮಾ.೨೪ರ ರಾತ್ರಿ ೮ ಗಂಟೆಗೆ ಬದನವಾಳು ಶಿವಕುಮಾರ ಶಾಸ್ತ್ರಿ ತಂಡ ಶಿವಕಥೆ ಮಾಡಲಿದ್ದಾರೆ. ಮಾ.೨೫ ರಂದು ಬೆಳಗ್ಗೆ ೧೦.೩೦ ಗಂಟೆಗೆ ಸುತ್ತೂರು ಮಠಾಧೀಶ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಹಾಗೂ ಸಿದ್ಧಗಂಗ ಮಠಾಧೀಶ ಸಿದ್ದಲಿಂಗ ಮಹಾಸ್ವಾಮೀಜಿ ಸಾನ್ನಿಧ್ಯದಲ್ಲಿ ಧಾರ್ಮಿಕ ಸಭೆ ನಡೆಯಲಿವೆ. ಕನಕಪುರ ದೇಗುಲ ಮಠಾಧೀಶ ಚನ್ನಬಸವಸ್ವಾಮೀಜಿ ಹಾಗೂ ಧಾರವಾಡ ಜಿಲ್ಲೆ ಮನಗುಂಡಿ ಗುರುಬಸವ ಮಹಾಮನೆಯ ಬಸವಾನಂದ ಸ್ವಾಮೀಜಿ ದಿವ್ಯ ಸಮ್ಮುಖ ವಹಿಸಿದರೆ, ದೇವನೂರು ಮಠಾಧೀಶ ಮಹಂತ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ.
ಪಡಗೂರು, ಸೋಮಹಳ್ಳಿ, ಹಂಗಳ ಹಳ್ಳದ ಮಠ, ಹರವೆ, ಬಿಡುಗಲು ಪಡುವಲುಮಠ, ಚಿಕ್ಕತುಪ್ಪೂರು, ಮರಿಯಾಲ, ಮುಡುಕನಪುರ, ನವಿಲೂರು, ಚಾಮರಾಜನಗರ, ಮೂಡುಗೂರು, ಹಂಗಳ ಪಟ್ಟದ ಮಠ, ಕಬ್ಬಹಳ್ಳಿ, ಗೋಪಾಲಪುರ, ಕುರುಬರಹುಂಡಿ, ಭೋಗಯ್ಯನಹುಂಡಿ ಶ್ರೀಗಳು ಆಶೀರ್ವಚನ ನೀಡಲಿದ್ದಾರೆ.ಶಾಸಕ ಎಚ್.ಎಂ.ಗಣೇಶ್ ಪ್ರಸಾದ್, ಮಾಜಿ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಎಂ.ಎನ್.ನಂದೀಶ್ ಹಂಚೆ ಮುಖ್ಯ ಭಾಷಣ ಮಾಡಲಿದ್ದಾರೆ.