ವೆಂಕಟೇಶ್ವರ ದೇವಸ್ಥಾನದಲ್ಲಿ ಪುನಃ ಪ್ರಾಣ ಪ್ರತಿಷ್ಠಾಪನೆ

KannadaprabhaNewsNetwork | Published : Jul 30, 2024 12:30 AM

ಸಾರಾಂಶ

ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾಧೀಶ ಶ್ರೀ ಸುಬುಧೇಂದ್ರತೀರ್ಥ ಶ್ರೀಗಳಿಂದ ಪುನಃ ಪ್ರಾಣ ಪ್ರತಿಷ್ಠಾಪನೆ, ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮ ನೆರವೇರಿದವು.

ಮಂತ್ರಾಲಯ ಶ್ರೀಗಳಿಂದ ವಿಶೇಷ ಪೂಜೆ

ಕನ್ನಡಪ್ರಭ ವಾರ್ತೆ ಗಂಗಾವತಿ

ನಗರದ ಸುಮಾರು 300 ವರ್ಷದ ಪುರಾತನವಾದ ಶ್ರೀ ಲಕ್ಷ್ಮೀ ವೆಂಟಕೇಶ ದೇವಸ್ಥಾನ ಜೀರ್ಣೋದ್ಧಾರ ಕಾರ್ಯ ನಡೆದಿದ್ದು, ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾಧೀಶ ಶ್ರೀ ಸುಬುಧೇಂದ್ರತೀರ್ಥ ಶ್ರೀಗಳಿಂದ ಪುನಃ ಪ್ರಾಣ ಪ್ರತಿಷ್ಠಾಪನೆ, ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮ ನೆರವೇರಿದವು.

ಸೋಮವಾರ ದೇವಸ್ಥಾನದಲ್ಲಿ ಕಳಸಾರೋಹಣ ಮತ್ತು ವೆಂಕಟೇಶ ಸ್ವಾಮಿ ದೇವರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಶ್ರದ್ಧಾ ಭಕ್ತಿಯಿಂದ ನೇರವೇರಿತು. ನಂತರ ದೇವಸ್ಥಾನದಲ್ಲಿ ಶ್ರೀಗಳು ಮೂಲ ರಾಮದೇವರ ಸಂಸ್ಥಾನ ಪೂಜೆ ನೆರವೇರಿಸಿ ಭಕ್ತರಿಗೆ ತಪ್ತ ಮುದ್ರಧಾರಣೆ ಮಾಡಿ ಅನುಗ್ರಹಿಸಿ, ಮಾತನಾಡಿ, ಗಂಗಾವತಿ ನಗರದ ಶ್ರೀ ವೆಂಕಟೇಶ ದೇವಸ್ಥಾನ 300 ವರ್ಷಗಳ ಪುರಾತನವಾದ ದೇವಸ್ಥಾನವಾಗಿದೆ. ಈ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡುವ ಮೂಲಕ ಇಲ್ಲಿನ ಭಕ್ತರು ವೆಂಕಟೇಶಸ್ವಾಮಿಗೆ ಭವ್ಯ ಮಂದಿರ ನಿರ್ಮಿಸಿದ್ದಾರೆ. ಸ್ವಾಮಿಯ ಮತ್ತು ರಾಯರ ಅನುಗ್ರಹದಿಂದ ದೇವರ ಮೂರ್ತಿ ಪ್ರತಿಷ್ಠಾಪನೆ ನಮ್ಮ ಕೈಯಿಂದ ನಡೆದಿರುವುದು ನಮ್ಮ ಭಾಗ್ಯವಾಗಿದೆ. ಗಂಗಾವತಿಯ ಸಮಸ್ತ ಭಕ್ತರಿಗೆ ಶ್ರೀ ವೆಂಕಟೇಶ ದೇವರು ಸಮೃದ್ಧಿ, ಸಂಪತ್ತು, ಆರ್ಯುರಾರೋಗ್ಯ ಕರುಣಿಸಲಿ ಎಂದು ನಾವು ಪ್ರಾರ್ಥಿಸುತ್ತೇವೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ, ಮಾಜಿ ಶಾಸಕ ಮಲ್ಲಿಕಾರ್ಜುನ ನಾಗಪ್ಪ, ಮಾಜಿ ನಗರಸಭೆ ಅಧ್ಯಕ್ಷ ಅಮರಜ್ಯೋತಿ ಮರಸಪ್ಪ, ದೇವಸ್ಥಾನದ ಮುಖ್ಯಸ್ಥ ಶ್ಯಾಮಾಚಾರ ರಾಯಸ್ತ, ಪ್ರಮುಖರಾದ ಶ್ಯಾಮಾಚಾರ ಜೋಶಿ, ದರೋಜಿ ರಂಗಣ್ಣ, ಹೊಸಳ್ಳಿ ಶಂಕರಗೌಡ, ಪ್ರವೀಣ ದರೋಜಿ, ಸುರೇಶ ಎಸ್‌ಎಲ್‌ವಿ, ವಾಸುದೇವ ನವಲಿ ಸೇರಿದಂತೆ ವಿವಿಧ ಸಮಾಜದ ಭಕ್ತರು ಭಾಗವಹಿಸಿದ್ದರು.

ತಾಳೆಮರ ಬಿದ್ದ ಸ್ಥಳಕ್ಕೆ ಲೆಕ್ಕಾಧಿಕಾರಿ ಭೇಟಿ:ಈಚೆಗೆ ತಾಳೆಮರ ಬಿದ್ದು ಮನೆ ಜಖಂಗೊಂಡಿದ್ದ ಕನಕಗಿರಿ ತಾಲೂಕಿನ ಗೌರಿಪುರ ಗ್ರಾಮಕ್ಕೆ ಗ್ರಾಮ ಲೆಕ್ಕಾಧಿಕಾರಿ ಹಾಲೇಶ ಭೇಟಿ ನೀಡಿ ಸೋಮವಾರ ಪರಿಶೀಲಿಸಿದರು.

೬೦ರಿಂದ ೭೦ ಅಡಿ ಎತ್ತರದಿಂದ ತಾಳೆಮರ ಭಾರಿ ಬಿರುಗಾಳಿಗೆ ತುಂಡಾಗಿ ಗ್ರಾಮದ ಶರಣಪ್ಪ ತೆಮ್ಮಿನಾಳಗೆ ಸೇರಿ ಮನೆಯ ಚಾವಣಿ ಮೇಲೆ ಬಿದ್ದಿದ್ದರಿಂದ ಮನೆ ಜಖಂಗೊಂಡಿತ್ತು. ಘಟನಾ ಸ್ಥಳಕ್ಕೆ ಅಂದು ಗ್ರಾಪಂ ಪಿಡಿಒ ಸೇರಿ ಸಿಬ್ಬಂದಿ ಜಂಟಿಯಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.ಸೋಮವಾರ ಲೆಕ್ಕಾಧಿಕಾರಿ ಹಾಲೇಶ ಸಂತ್ರಸ್ತರನ್ನು ಭೇಟಿ ಮಾಡಿ ಹಾನಿಯಾಗಿರುವ ಕುರಿತು ಮಾಹಿತಿ ಪಡೆದು ಪರಿಹಾರಕ್ಕೆ ದೃಢೀಕೃತ ಮಾಹಿತಿ ಪಡೆದುಕೊಂಡರು.

Share this article