ಪತ್ರಿಕಾ ಕ್ಷೇತ್ರಕ್ಕೆ ಚ್ಯುತಿ ಬಾರದಂತೆ ಕೆಲಸ ನಿರ್ವಹಿಸಿ

KannadaprabhaNewsNetwork | Published : Jul 30, 2024 12:30 AM

ಸಾರಾಂಶ

ಪತ್ರಕರ್ತರು ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಸಮಾಜದ ಅಶಕ್ತರಿಗೆ ನ್ಯಾಯ ದೊರಕಿಸುವ ಕೆಲಸ ಮಾಡುವ ಪವಿತ್ರ ವೃತ್ತಿಯ ನೌಕರರಾಗಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಕೆಲಸ ಮಾಡಿದಾಗ ಮಾತ್ರ ಪತ್ರಕರ್ತ ವೃತ್ತಿಗೆ ಗೌರವ ಸಿಗಲಿದೆ ಎಂದು ಶಾಸಕ ಬಸವರಾಜು ವಿ. ಶಿವಗಂಗಾ ಚನ್ನಗಿರಿಯಲ್ಲಿ ಹೇಳಿದ್ದಾರೆ.

- ಚನ್ನಗಿರಿಯಲ್ಲಿ ಆಧುನೀಕರಣಗೊಂಡ ಪತ್ರಿಕಾ ಭವನ ಉದ್ಘಾಟಿಸಿ ಶಾಸಕ ಬಸವರಾಜು - - - ಕನ್ನಡಪ್ರಭ ವಾರ್ತೆ ಚನ್ನಗಿರಿ

ಪತ್ರಕರ್ತರು ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಸಮಾಜದ ಅಶಕ್ತರಿಗೆ ನ್ಯಾಯ ದೊರಕಿಸುವ ಕೆಲಸ ಮಾಡುವ ಪವಿತ್ರ ವೃತ್ತಿಯ ನೌಕರರಾಗಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಕೆಲಸ ಮಾಡಿದಾಗ ಮಾತ್ರ ಪತ್ರಕರ್ತ ವೃತ್ತಿಗೆ ಗೌರವ ಸಿಗಲಿದೆ ಎಂದು ಶಾಸಕ ಬಸವರಾಜು ವಿ. ಶಿವಗಂಗಾ ಹೇಳಿದರು.

ಸೋಮವಾರ ಚನ್ನಗಿರಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನವೀಕರಣಗೊಂಡ ಪತ್ರಿಕಾ ಭವನ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡುತ್ತಿದೆ. ಕಡಿಮೆ ಗೌರವ ಸಂಭಾವನೆ ಪಡೆದು ಸಮಾಜಮುಖಿ ಕೆಲಸ ಮಾಡುವ ಪತ್ರಕರ್ತರಿಗೆ ನಿವೃತ್ತಿ ನಂತರ ಕಡಿಮೆ ಪಿಂಚಣಿ ನೀಡುತ್ತಿದ್ದು, ಇದನ್ನು ನಮ್ಮ ಸರ್ಕಾರ ಹೆಚ್ಚಿಸಿದೆ ಎಂದರು.

ಶಾಸಕನಾದ ನಂತರ ಪತ್ರಕರ್ತರ ಭವನದ ನವೀಕರಣಕ್ಕೆ ಬೇಕಾದ ಅನುದಾನ ನೀಡಿದ್ದೇನೆ. ದಾವಣಗೆರೆ ಜಿಲ್ಲೆಯಲ್ಲಿಯೇ ಚನ್ನಗಿರಿ ತಾಲೂಕಿನ ಪತ್ರಿಕಾ ಭವನ ಹೈಟೆಕ್ ಮಾದರಿಯಲ್ಲಿ ಆಧುನೀಕರಣಗೊಂಡಿದೆ. ಇದು ಸಂತಸ ತಂದಿದೆ. ಪತ್ರಕರ್ತರಿಗೆ ನಿವೇಶನಗಳು ಬೇಕು ಎಂಬ ಬೇಡಿಕೆಯಿದೆ. ಆದಷ್ಟು ಶೀಘ್ರದಲ್ಲಿಯೇ ತಾಲೂಕಿನಲ್ಲಿರುವ ಎಲ್ಲ ಪತ್ರಕರ್ತರನ್ನು ಗುರುತಿಸಿ ನಿವೇಶನಗಳನ್ನು ನೀಡಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದು ಭರವಸೆ ನೀಡಿದರು.

ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ವೀರೇಶ್ ಪ್ರಸಾದ್‌, ಪ್ರಧಾನ ಕಾರ್ಯದರ್ಶಿ ಪ್ರಸನ್ನ, ಪತ್ರಕರ್ತರಾದ ಜಗದೀಶ್, ಪುನೀತ್, ರಘುಪ್ರಸಾದ್, ದೇವರಾಜ್, ಲಿಂಗರಾಜ್, ಎಸ್.ಜೆ. ಕಿರಣ್, ಕುಮಾರ್, ಎಚ್.ವಿ. ನಟರಾಜ್, ಸಂತೋಷ್, ಮಹಾರುದ್ರಪ್ಪ, ಕಾಶಿಸ್ವಾಮಿ, ಅಣ್ಣೋಜಿ ರಾವ್, ಕೆ.ಪಿ.ಎಂ. ಸ್ವಾಮಿ, ಬಾ.ರಾ. ಮಹೇಶ್, ರವಿಕುಮಾರ್ ಮೊದಲಾದವರು ಹಾಜರಿದ್ದರು.

- - -

ಬಾಕ್ಸ್‌ * ಪತ್ರಿಕಾ ಭವನಕ್ಕೆ ಕೈಲಾದ ಸಹಕಾರ: ಬಸವಂತಪ್ಪ ಮಾಯಕೊಂಡ ವಿಧಾನಸಭಾ ಕ್ಷೇತ್ರ ಶಾಸಕ ಬಸವಂತಪ್ಪ ಮಾತನಾಡಿ, ಪತ್ರಕರ್ತರು ನಿವೃತ್ತಿ ನಂತರ ಕನಿಷ್ಠ ₹20 ಸಾವಿರ ಪಿಂಚಣಿ ನೀಡಬೇಕು ಎಂದು ಸರ್ಕಾರದ ಮೇಲೆ ಒತ್ತಡ ಹಾಕಲಿದ್ದೇನೆ. ನಿಮ್ಮ ಜೀವನಕ್ಕೆ ಭದ್ರತೆ ಕೊಡುವ ಕೆಲಸ ಮಾಡಲು ಸರ್ಕಾರ ಬದ್ಧವಾಗಿದೆ ಎಂದರು. ಶಾಸಕನಾಗಲು ಪತ್ರಕರ್ತರ ಕೊಡುಗೆ ಅಪಾರವಾಗಿದೆ. ದಾವಣಗೆರೆ ಜಿಲ್ಲೆಯಲ್ಲಿಯೇ ಎಲ್ಲಿಯೂ ಪತ್ರಕರ್ತರ ಸಂಘ ಸ್ವಂತ ಭವನ ಹೊಂದಿಲ್ಲ. ಆದರೆ, ಚನ್ನಗಿರಿ ತಾಲೂಕಿನ ಪತ್ರಿಕಾ ಭವನ ಅತ್ಯಾಧುನೀಕವಾಗಿ ನವೀಕರಣಗೊಂಡಿದೆ. ಸಹಾ ಮುಂದಿನ ದಿನಗಳಲ್ಲಿಯೂ ಪತ್ರಿಕಾ ಭವನಕ್ಕೆ ಕೈಲಾದ ಸಹಕಾರ ಕಲ್ಪಿಸುವುದಾಗಿ ತಿಳಿಸಿದರು.

- - - -29ಕೆಸಿಎನ್ಜಿ1:

ಚನ್ನಗಿರಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನವೀಕರಣಗೊಂಡ ಪತ್ರಿಕಾ ಭವನ ಉದ್ಘಾಟನೆಯನ್ನು ಶಾಸಕ ಬಸವರಾಜು ವಿ.ಶಿವಗಂಗಾ ನೆರವೇರಿಸಿದರು. ಮಾಯಕೊಂಡ ಕ್ಷೇತ್ರ ಶಾಸಕ ಬಸವಂತಪ್ಪ ಇತರರು ಇದ್ದರು.

Share this article