ಆರ್‌ಎಂಜಿ ನಾಯಕರ ಪುತ್ಥಳಿಗೆ ಪ್ರಥಮ ಪುಷ್ಪಾರ್ಚನೆ । ಸಾಧಕರಿಗೆ ಸುರಪುರ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ
ಕನ್ನಡಪ್ರಭ ವಾರ್ತೆ ಸುರಪುರಲೇಖಕರ ಪುಸ್ತಕಗಳನ್ನು ಪ್ರಕಟಿಸಿ ಜನರಿಗೆ ತಲುಪಿಸುವ ಕಾರ್ಯದಲ್ಲಿ ನಿರತವಾಗಿರುವ ಕನ್ನಡ ಸಾಹಿತ್ಯ ಸಂಘದ ಸೇವೆ ಅವಿಸ್ಮರಣೀಯ. ಸಂಘವು ಹಲವಾರು ಪುಸ್ತಕಗಳನ್ನು ಹೊರ ತರುವ ಕೆಲಸ ನಿರಂತರವಾಗಿರಲಿ ಎಂದು ಹಿರಿಯ ಸಾಹಿತಿ ಸಂಗಮೇಶ ಬಾದವಾಡಗಿ ಹೇಳಿದರು.
ನಗರದ ಬಸ್ ನಿಲ್ದಾಣ ಸಮೀಪದ ಕನ್ನಡ ಸಾಹಿತ್ಯ ಸಂಘವು ಮಾಜಿ ಸಚಿವ ದಿ. ರಾಜಾ ಮದನಗೋಪಾಲ ನಾಯಕ ಭವನದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ, ರಾಜಾ ಮದನಗೋಪಾಲ ನಾಯಕರ ಪುತ್ಥಳಿಗೆ ಪ್ರಥಮ ಪುಷ್ಪಾರ್ಚನೆ ಮತ್ತು ಸಾಧಕರಿಗೆ ಸುರಪುರ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ, ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಸಾಹಿತ್ಯಾಸಕ್ತರು, ಸಾಹಿತ್ಯ ಓದುರುವ ಪುಸ್ತಕಗಳನ್ನು ಓದಿ ಲೇಖಕರ ಬರವಣಿಗೆಗೆ ಮುನ್ನುಡಿ ಬರೆಯಬೇಕು. ಸಗರನಾಡಿನ ಸಾಂಸ್ಕೃತಿಕ ರಾಯಭಾರಿ ಮಾಜಿ ಸಚಿವ ದಿ. ರಾಜಾ ಮದನಗೋಪಾಲ ನಾಯಕ ಅವರು ಇಲ್ಲಿ ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಿಗೆ ನೀಡಿದ್ದ ಕೊಡುಗೆ ಅನುಪಮ. ವಿ.ಎಸ್. ಶ್ರೀವಾಸ್ತವ್ಯ ರಚಿಸಿದ ಗ್ರಂಥ ಬ್ರಿಟಿಷ್ ಭಾರತದ 1857-1858 ರ ಹೋರಾಟದ ದೇಶ ಭಕ್ತರು ಮತ್ತು ದೇಶ ದ್ರೋಹಿಗಳು ಭಾಗ-1ನ್ನು ರಂಗನಗೌಡ ಎಚ್.ಪಾಟೀಲ್ ಅವರು ಕನ್ನಡಕ್ಕೆ ಬಹಳ ಚೆನ್ನಾಗಿ ಅನುವಾದ ಮಾಡಿದ್ದಾರೆ. ಮುಂದೆಯೂ ಅವರು ಸಂಶೋಧನಾತ್ಮಕವಾಗಿ ಮುಂದಿನ ಪೀಳಿಗೆಗೆ ದಾರಿ ತೋರುವ ವಿಚಾರಗಳನ್ನು ಹೆಕ್ಕಿ ತೆಗೆದು ಇನ್ನೂ ಹೆಚ್ಚಿನ ಪುಸ್ತಕಗಳನ್ನು ರಚಿಸಬೇಕು ಎಂದರು.
ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಬಸವರಾಜ ಜಮದ್ರಖಾನಿ ಮಾತನಾಡಿ, ಮಾಜಿ ಸಚಿವ ದಿ. ರಾಜಾ ಮದನಗೋಪಾಲ ನಾಯಕ ಅವರು ಹಾಕಿಕೊಟ್ಟ ದಾರಿಯಲ್ಲಿ ಸಂಘವನ್ನು ಮುನ್ನೆಡಿಸಿಕೊಂಡು ಹೋಗುತ್ತಿದ್ದೇವೆ ಎಂದರು.ತಾಲೂಕು ಆರೋಗ್ಯಧಿಕಾರಿ ಡಾ. ಆರ್.ವಿ. ನಾಯಕ ಮಾತನಾಡಿ, ದಿ. ರಾಜಾ ಮದನಗೋಪಾಲ ನಾಯಕರ ಸೇವೆಯನ್ನು ನಾವು ಸದಾ ಸ್ಮರಿಸಬೇಕು. ಶಾಲಾ-ಕಾಲೇಜುಗಳಲ್ಲಿ ಸುರಪುರ ಇತಿಹಾಸ, ಸಗರನಾಡಿ ಕವಿ, ಸಾಹಿತಿ, ಲೇಖಕರ ಬಗ್ಗೆ ತಿಳಿಸುವ ಕೆಲಸವಾಗಬೇಕು ಎಂದರು.
ನಿವೃತ್ತ ಎಸ್‌ಪಿ ಚಂದ್ರಕಾಂತ ಭಂಡಾರಿ ಮಾತನಾಡಿದರು. ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ರಾಜಾ ಮುಕುಂದ ನಾಯಕ, ರಂಗನಗೌಡ ಎಚ್.ಪಾಟೀಲ್, ರಂಗಂಪೇಟೆ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಸುಗೂರೇಶ ವಾರದ, ಶಿವಶರಣಯ್ಯಸ್ವಾಮಿ ಬಳ್ಳುಂಡಗಿ ಮಠ ಮಾತನಾಡಿದರು.ಸಂಘದ ಉಪಾಧ್ಯಕ್ಷ ಜೆ. ಅಗಸ್ಟಿನ್ ಪ್ರಾಸ್ತಾವಿಕದಲ್ಲಿ ರಾಜಾ ಮದನಗೋಪಾಲ ನಾಯಕರ ಸಾಹಿತ್ಯ ಸೇವೆ, ಸಂಘ ನಡೆದ ಬಂದು ದಾರಿ, ಸಂಘದ ಮುಂದಿರುವ ಯೋಜನೆ, ಗುರಿಗಳನ್ನು ವಿವರಿಸಿದರು.
ಅನೇಕ ಹಿರಿಯರು, ಸಾಹಿತಿಗಳು, ಕನ್ನಡಾಭಿಮಾನಿಗಳು, ಸಂಘದ ಪದಾಧಿಕಾರಿಗಳು ಸೇರಿದಂತೆ ಇತರರಿದ್ದರು. ನಿರ್ಮಲಾ ರಾಜಗುರು, ಸಂಜನಾ ಜೋಷಿ, ಮೋಹನ ಮಾಳದಕರ ಪ್ರಾರ್ಥಿಸಿದರು. ಕನಕಪ್ಪ ವಾಗಣಗೇರಾ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಜಾಲವಾದಿ ನಿರೂಪಿಸಿದರು. ಶಿಕ್ಷಕ ಶ್ರೀಶೈಲ ಯಂಕಚಿ ವಂದಿಸಿದರು.=ಬಾಕ್ಸ್=
ಸಾಧಕರಿಗೆ ಪ್ರಶಸ್ತಿ ಪ್ರದಾನಸುರಪುರ ತಾಲೂಕು ಆರೋಗ್ಯಾಧಿಕಾರಿ ಡಾ. ಆರ್.ವಿ. ನಾಯಕ, ಜನಪದ ಹಾಡುಗಾರ್ತಿ ಹನಮವ್ವ ಬಪ್ಪರಗಿ ಅವರಿಗೆ ಸುರಪುರ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು. ರಂಗಂಪೇಟೆ ಕನ್ನಡ ಸಾಹಿತ್ಯ ಸಂಘವು ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಪಡೆದ ಹಿನ್ನೆಲೆಯಲ್ಲಿ ಸಂಘದ ಅಧ್ಯಕ್ಷ ಸುಗೂರೇಶ ವಾರದ ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿವಶರಣಯ್ಯಸ್ವಾಮಿ ಬಳ್ಳುಂಡಗಿ ಮಠ ಅವರಿಗೆ ವಿಶೇಷ ಸನ್ಮಾನ ಮಾಡಲಾಯಿತು.
- - - -5ವೈಡಿಆರ್2: ಸುರಪುರ ನಗರದ ಕನ್ನಡ ಸಾಹಿತ್ಯ ಸಂಘದಲ್ಲಿ ಮಾಜಿ ಸಚಿವ ರಾಜಾ ಮದನಗೋಪಾಲನಾಯಕರ ಪುತ್ಥಳಿಗೆ ಪ್ರಥಮ ಪುಷ್ಪಾರ್ಚನೆ ಜರುಗಿತು.
- - - -5ವೈಡಿಆರ್3 : ಸುರಪುರ ನಗರದ ಕನ್ನಡ ಸಾಹಿತ್ಯ ಸಂಘದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಸಾಧಕರಿಗೆ ಸುರಪುರ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.
- - - -5ವೈಡಿಆರ್4: ಸುರಪುರ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ರಿಟಿಷ್ ಭಾರತದ 1857-1858ರ ಹೋರಾಟದ ದೇಶ ಭಕ್ತರು ಮತ್ತು ದೇಶ ದ್ರೋಹಿಗಳು ಭಾಗ-1 ಕನ್ನಡಕ್ಕೆ ಅನುವಾದಿತ ಪುಸ್ತಕ ಬಿಡುಗಡೆ ಮಾಡಲಾಯಿತು.
- - - -