- ಎಂಕೆಇಟಿಎಲ್‌ಕೆ ಆಂಗ್ಲ ಶಾಲೆಯಲ್ಲಿ ಗ್ರಂಥಾಲಯ ದಿನ ಕಾರ್ಯಕ್ರಮ
ಹರಿಹರ: ಪುಸ್ತಕಗಳನ್ನು ಓದುವುದರಿಂದ ಏಕಾಗ್ರತೆ ಹೆಚ್ಚುತ್ತದೆ. ಓದುವುದು ಉತ್ತಮವಾದ ಅಭ್ಯಾಸ. ಸ್ವಾಮಿ ವಿವೇಕಾನಂದ ಅವರಿಗೆ ಪುಸ್ತಕಗಳೆಂದರೆ ಬಹಳ ಇಷ್ಟವಾಗಿತ್ತು. ಅವರು ದೊಡ್ಡ ದೊಡ್ಡ ಪುಸ್ತಕಗಳನ್ನು ಓದಿ ಅರಿವು ವಿಸ್ತರಿಸಿಕೊಳ್ಳುತ್ತಿದ್ದರು. ಇದರಿಂದ ಅವರ ಆತ್ಮಶಕ್ತಿ ಹಾಗೂ ಜ್ಞಾನಶಕ್ತಿ ಅತ್ಯುನ್ನತವಾಗಿತ್ತು ಎಂದು ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ಆತ್ಮದೀಪಾನಂದ ಜಿ ಮಹಾರಾಜ್ ಹೇಳಿದರು.
ನಗರದ ಎಂಕೆಇಟಿಎಲ್.ಕೆ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಂಗಳವಾರ ನಡೆದ ಗ್ರಂಥಾಲಯ ದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. ಪಾಠ್ಯದ ಜತೆ ಜತೆಗೆ ಗ್ರಂಥಾಲಯದಲ್ಲಿ ಲಭ್ಯವಿರುವ ಪುಸ್ತಕಗಳು, ದಿನಪತ್ರಿಕೆಗಳನ್ನು ಓದುವುದರಿಂದ ಉನ್ನತ ವಿಧ್ಯಾಭ್ಯಾಸಕ್ಕೆ ಸಹಕಾರಿಯಾಗುತ್ತದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಶಾಲೆ ಆಡಳಿತಾಧಿಕಾರಿ ಡಾ. ಬಿ.ಟಿ. ಅಚ್ಯುತ್ ಮಾತನಾಡಿ, ಎಚ್.ಆರ್. ರಂಗನಾಥ್ ಅವರು ಗ್ರಂಥಾಲಯಕ್ಕೆ ಒಂದು ಹೊಸ ಆಯಾಮವನ್ನು ನೀಡಿದರು. ಅವರಿಂದಾಗಿ ಇಂದು ಜಗತ್ತಿನಲ್ಲಿ ಅತ್ಯಂತ ದೊಡ್ಡ ದೊಡ್ಡ ಗ್ರಂಥಾಲಯಗಳನ್ನು ಕಾಣಬಹುದಾಗಿದೆ. ಅವರನ್ನು ನಾವು ಸದಾ ಸ್ಮರಿಸಬೇಕು ಎಂದರು.
ವಿವೇಕ ವಿದ್ಯಾರ್ಥಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಶಾಲೆ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಬಹುಮಾನ ನೀಡಿ ಅಭಿನಂದಿಸಲಾಯಿತು. ಮುಖ್ಯೋಪಾಧ್ಯಾಯಿನಿ ಪರಿಮಳ ಕೆ., ಗ್ರಂಥಪಾಲಕರಾದ ಯಲ್ಲಪ್ಪ ಎನ್.ಬಿ., ವಿಶ್ವನಾಥ್ ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಇಂಚರ ಸ್ವಾಗತಿಸಿದರೆ, ಹುಝೈಫ ವಂದಿಸಿದರು.
-03HRR. 01 /01 A:
ಹರಿಹರದ ಎಂಕೆಇಟಿಎಲ್‌ಕೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗ್ರಂಥಾಲಯ ದಿನ ಆಚರಿಸಲಾಯಿತು.